ಕೇಂದ್ರ ಬಜೆಟ್ 2024: ಹಿಂದೊಮ್ಮೆ 800 ಪದಗಳಲ್ಲಿ ಕೇಂದ್ರ ಬಜೆಟ್ ಭಾಷಣ ಮಂಡನೆಯಾಗಿತ್ತು; ಇನ್ನಷ್ಟು ದಾಖಲೆಗಳ ವಿವರ ಹೀಗಿದೆ..
Interesting facts about Union Budget: ವಾಡಿಕೆಯಂತೆ ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತದೆ. ಕೇಂದ್ರ ಬಜೆಟ್ ಇತಿಹಾಸದಲ್ಲಿ ಅನೇಕ ಕುತೂಹಲಕಾರಿ ಅಂಶಗಳನ್ನು ಗಮನಿಸಬಹುದು. ಈ ಪೈಕಿ ಬಜೆಟ್ ಭಾಷಣಗಳು ಪ್ರಮುಖವಾದವು. ಅವುಗಳ ಚಿತ್ರವರದಿ ಇದು.
(1 / 7)
ಕೇಂದ್ರ ಬಜೆಟ್ ಎಂಬುದು ಭಾರತದ ಮುಂದಿನ ವರ್ಷದ ವೆಚ್ಚವನ್ನು ನಿರ್ಧರಿಸುವ ಪ್ರಮುಖ ವಾರ್ಷಿಕ ಹಣಕಾಸು ಹೇಳಿಕೆ. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಮಂಡನೆಯಾಗುವ ಈ ಸಲದ ಕೇಂದ್ರ ಮುಂಗಡಪತ್ರ ಮಧ್ಯಂತರ ಬಜೆಟ್ ಅಥವಾ ವೋಟ್ ಆನ್ ಅಕೌಂಟ್ ಆಗಿರುತ್ತದೆ. ಕಳೆದ ವರ್ಷ ಫೆ.1ರಂದು ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದು ಈ ಸರ್ಕಾರದ ಐದು ವರ್ಷ ಅವಧಿಯ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿತ್ತು. (Amlan Paliwal)
(2 / 7)
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸುದೀರ್ಘ ಬಜೆಟ್ ಭಾಷಣದ ದಾಖಲೆ ನಿರ್ಮಿಸಿದ್ದಾರೆ. ಬಜೆಟ್ ಭಾಷಣದ ಇನ್ನಷ್ಟು ಕುತೂಹಲಕಾರಿ ಸಂಗತಿಗಳ ವಿವರ ಇಲ್ಲಿದೆ.(PTI)
(3 / 7)
ಸುದೀರ್ಘ ಬಜೆಟ್ ಭಾಷಣ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ರಲ್ಲಿ ಭಾರತೀಯ ಇತಿಹಾಸದಲ್ಲಿ ಸುದೀರ್ಘ ಬಜೆಟ್ ಭಾಷಣವನ್ನು (2.42 ಗಂಟೆ) ಮಾಡಿದ ದಾಖಲೆಯನ್ನು ಹೊಂದಿದ್ದಾರೆ.(Shrikant Singh)
(4 / 7)
ಕನಿಷ್ಠ ಅವಧಿಯ ಬಜೆಟ್ ಭಾಷಣ: ಹಣಕಾಸು ಸಚಿವ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ ಅವರು 1977 ರಲ್ಲಿ ಕೇವಲ 800 ಪದಗಳಲ್ಲಿ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ಮಂಡಿಸಿದರು.
(5 / 7)
ಹೆಚ್ಚು ಪದಗಳಿದ್ದ ಬಜೆಟ್ ಭಾಷಣ: 1991 ರಲ್ಲಿ, ಮಾಜಿ ಪ್ರಧಾನಿ ಮತ್ತು ಅಂದಿನ ಹಣಕಾಸು ಸಚಿವ, ಮನಮೋಹನ್ ಸಿಂಗ್ ಅವರು ನರಸಿಂಹರಾವ್ ಸರ್ಕಾರದ ಅವಧಿಯಲ್ಲಿ ಅತಿ ಹೆಚ್ಚು ಪದಗಳಿದ್ದ (18,650) ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದರು.(Rahul Singh)
(6 / 7)
ಗರಿಷ್ಠ ಸಂಖ್ಯೆಯ ಬಜೆಟ್ ಭಾಷಣ ಮಾಡಿದ ದಾಖಲೆ: ಗರಿಷ್ಠ ಸಂಖ್ಯೆಯ ಕೇಂದ್ರ ಬಜೆಟ್‌ಗಳನ್ನು ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ. ಅವರು 1962-69ರಲ್ಲಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಹತ್ತು ಕೇಂದ್ರ ಬಜೆಟ್‌ಗಳನ್ನು ಮಂಡಿಸಿದರು. ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ 9ನೇ ಸಲ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ.
ಇತರ ಗ್ಯಾಲರಿಗಳು