74 ನಿಮಿಷಗಳಲ್ಲಿ ದಾಖಲೆಯ ಬಜೆಟ್ ಮಂಡನೆ; ಭಾರತದ ಇತಿಹಾಸದಲ್ಲಿ ದೀರ್ಘ ಮತ್ತು ಕಿರು ಆಯವ್ಯಯ ಭಾಷಣಗಳ ನೋಟ
- Union Budget 2025, Budget speech Record,: ಭಾರತದ ಕೇಂದ್ರ ಬಜೆಟ್ ಇತಿಹಾಸದಲ್ಲಿ ಕಿರು ಬಜೆಟ್ ಮತ್ತು ದೀರ್ಘ ಬಜೆಟ್ ಭಾಷಣಗಳ ಇಣುಕು ನೋಟ ಇಲ್ಲಿದೆ ನೋಡಿ.
- Union Budget 2025, Budget speech Record,: ಭಾರತದ ಕೇಂದ್ರ ಬಜೆಟ್ ಇತಿಹಾಸದಲ್ಲಿ ಕಿರು ಬಜೆಟ್ ಮತ್ತು ದೀರ್ಘ ಬಜೆಟ್ ಭಾಷಣಗಳ ಇಣುಕು ನೋಟ ಇಲ್ಲಿದೆ ನೋಡಿ.
(1 / 10)
ಫೆಬ್ರವರಿ 1ರ ಶನಿವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 1 ಗಂಟೆ 14 ನಿಮಿಷಗಳ ಕಾಲ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದಾರೆ. 7900 ಪದಗಳಲ್ಲಿ ಭಾಷಣ ಮಾಡಿ ಮುಗಿಸಿದ್ದಾರೆ.
(Sansad Tv)(2 / 10)
74 ನಿಮಿಷಗಳಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರ ಎರಡನೇ ಕಿರು ಬಜೆಟ್ ಇದಾಗಿದೆ. 2024ರಲ್ಲಿ ಮಂಡಿಸಿದ್ದ ಮಧ್ಯಂತರ ಬಜೆಟ್ ಮೊದಲ ಕಡಿಮೆ ಅವಧಿಯ ಬಜೆಟ್ ಎನಿಸಿಕೊಂಡಿದೆ. 56 ನಿಮಿಷಗಳಲ್ಲೇ ಮುಗಿಸಿದ್ದರು.
(Sansad Tv)(3 / 10)
ಭಾರತ ಸ್ವಾತಂತ್ರ್ಯ ಪಡೆದ ನಂತರ 1947ರ ನವೆಂಬರ್ನಲ್ಲಿ ಅಂದಿನ ಹಣಕಾಸು ಸಚಿವರಾಗಿದ್ದ ಷಣ್ಮುಖಂ ಚೆಟ್ಟಿ ಅವರು ದೇಶದ ಮೊದಲ ಬಜೆಟ್ ಮಂಡಿಸಿದ್ದರು. ವರ್ಷಗಳು ಉರುಳಿದಂತೆ ಅನೇಕರು ತಮ್ಮದೇ ಆದ ಶೈಲಿಗಳಲ್ಲಿ ಬಜೆಟ್ ಭಾಷಣಗಳನ್ನು ನೀಡಿದ್ದಾರೆ.
(4 / 10)
ಹಾಗಾದರೆ, ಕೇಂದ್ರ ಬಜೆಟ್ ಇತಿಹಾಸದಲ್ಲಿ ಕಿರು ಬಜೆಟ್ ಮತ್ತು ದೀರ್ಘ ಬಜೆಟ್ ಭಾಷಣಗಳ ನೋಟ ಹೀಗಿದೆ.
(Jitender Gupta)(5 / 10)
ಎಂಟು ಕೇಂದ್ರ ಬಜೆಟ್‌ಗಳನ್ನು ಮಂಡಿಸಿದ ದೇಶದ ಏಕೈಕ ಹಣಕಾಸು ಸಚಿವರಾಗಿರುವ ನಿರ್ಮಲಾ ಅವರು ಇತಿಹಾಸದಲ್ಲಿ ಸುದೀರ್ಘ ಬಜೆಟ್ ಭಾಷಣದ ದಾಖಲೆಯನ್ನು ಹೊಂದಿದ್ದಾರೆ.
(Hindustan Times)(6 / 10)
2020ರಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಕೇಂದ್ರ ಬಜೆಟ್ ಭಾಷಣ ಇತಿಹಾಸದಲ್ಲೇ ಅತಿ ಸುದೀರ್ಘವಾದ ಬಜೆಟ್ ಭಾಷಣವಾಗಿದೆ. 2 ಗಂಟೆ 40 ನಿಮಿಷಗಳ ಕಾಲ ಬಜೆಟ್ ಭಾಷಣ ಮಾಡಿದ್ದರು.
(Sansad TV)(7 / 10)
2019ರಲ್ಲಿ ಭಾರತದ ಮೊದಲ ಪೂರ್ಣ ಪ್ರಮಾಣದ ಮಹಿಳಾ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅವರಿಂದ ಮೊದಲ ಬಜೆಟ್ ಮಂಡನೆಯಾಗಿತ್ತು. ಅಂದು 2 ಗಂಟೆ 17 ನಿಮಿಷಗಳ ಕಾಲ ಭಾಷಣ ಮಾಡಿದ್ದರು. ಇದು ಇತಿಹಾಸದಲ್ಲಿ ಎರಡನೇ ಅತಿ ಉದ್ದದ ಭಾಷಣ.
(Hindustan Times)(8 / 10)
ನಿರ್ಮಲಾ ಸೀತಾರಾಮನ್ ಅವರಿಗಿಂತ ಮೊದಲು ಈ ದಾಖಲೆ ಬಿಜೆಪಿ ನಾಯಕ ಜಸ್ವಂತ್ ಸಿಂಗ್ ಹೆಸರಿನಲ್ಲಿತ್ತು. 2003ರ ಬಜೆಟ್ ಭಾಷಣವು 2 ಗಂಟೆ 15 ನಿಮಿಷಗಳ ಕಾಲ ನಡೆಯಿತು. ಇದು ಮೂರನೇ ಸುದೀರ್ಘ ಭಾಷಣ.
(livemint)(9 / 10)
ದಿವಂಗತ ವಿತ್ತ ಸಚಿವ ಅರುಣ್ ಜೇಟ್ಲಿ ಅತಿ ದೊಡ್ಡ ಭಾಷಣ ಮಾಡಿದವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅವರು 2014ರಲ್ಲಿ ಮಾಡಿದ ಭಾಷಣವು 2 ಗಂಟೆ 10 ನಿಮಿಷ.
(Livemint)ಇತರ ಗ್ಯಾಲರಿಗಳು