ಕೇಂದ್ರ ಬಜೆಟ್ 2025 ಹಿಂದಿನ ಸೂತ್ರಧಾರಿಗಳು ಇವರೇ; ನಿರ್ಮಲಾ ಸೀತಾರಾಮನ್‌ ತಂಡದ ಪ್ರಮುಖರ ಪರಿಚಯ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೇಂದ್ರ ಬಜೆಟ್ 2025 ಹಿಂದಿನ ಸೂತ್ರಧಾರಿಗಳು ಇವರೇ; ನಿರ್ಮಲಾ ಸೀತಾರಾಮನ್‌ ತಂಡದ ಪ್ರಮುಖರ ಪರಿಚಯ ಇಲ್ಲಿದೆ

ಕೇಂದ್ರ ಬಜೆಟ್ 2025 ಹಿಂದಿನ ಸೂತ್ರಧಾರಿಗಳು ಇವರೇ; ನಿರ್ಮಲಾ ಸೀತಾರಾಮನ್‌ ತಂಡದ ಪ್ರಮುಖರ ಪರಿಚಯ ಇಲ್ಲಿದೆ

  • Union Budget 2025: ಏಪ್ರಿಲ್ 2025ರಿಂದ ಪ್ರಾರಂಭವಾಗುವ 2025-26ರ ಹಣಕಾಸು ವರ್ಷಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ದಾಖಲೆಯ 8ನೇ ಬಜೆಟ್​ ಅನ್ನು 75 ನಿಮಿಷಗಳಲ್ಲಿ ಮಂಡಿಸಿದರು. ಹಾಗಾದರೆ ಕೇಂದ್ರ ಬಜೆಟ್ 2025 ಹಿಂದಿನ ಸೂತ್ರಧಾರಿಗಳು ಯಾರು? ಇಲ್ಲಿದೆ ವಿವರ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ ತಮ್ಮ ಸತತ 8ನೇ ಬಜೆಟ್ ಅನ್ನು ಶನಿವಾರ (ಫೆಬ್ರವರಿ 1) ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 3ನೇ ಅವಧಿಯ 2ನೇ ಬಜೆಟ್ ಇದಾಗಿದೆ. ಬಜೆಟ್ ನಿರ್ಮಿಸುವವರ ಪಟ್ಟಿಯಲ್ಲಿ ನಿರ್ಮಲಾ ಕೂಡ ಒಬ್ಬರು. ಇವರು ಸೇರಿ ಒಟ್ಟು 7 ಮಂದಿ ಬಜೆಟ್ ತಯಾರಿಸಲಿದ್ದಾರೆ.
icon

(1 / 7)

(Rahul Singh )

ಒಡಿಶಾ ಕೇಡರ್‌ನ 1987 ಬ್ಯಾಚ್‌ನ ಐಎಎಸ್ ಅಧಿಕಾರಿ ತುಹಿನ್ ಕಾಂತ್ ಪಾಂಡೆ ಅವರು ಪ್ರಸ್ತುತ ಹಣಕಾಸು ಮತ್ತು ಕಂದಾಯ ಕಾರ್ಯದರ್ಶಿಯನ್ನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಅವರು ಡಿಐಪಿಎಎಂ ಅಂದರೆ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಬಜೆಟ್‌ಗೆ ಕೆಲವೇ ದಿನಗಳ ಮೊದಲು, ಆದಾಯ ತೆರಿಗೆ ಕಾನೂನುಗಳಲ್ಲಿನ ಸುಧಾರಣೆಗಳ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿರುವುದು ಇವರೇ.
icon

(2 / 7)

(HT_PRINT)

ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ್ ನಾಗೇಶ್ವರನ್ ಬಜೆಟ್ ಮೇಕಿಂಗ್ ತಂಡದ ಪ್ರಮುಖ ಸದಸ್ಯರಲ್ಲಿ ಒಬ್ಬರು. ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸುವ ಜವಾಬ್ದಾರಿ ಅವರ ಮೇಲಿತ್ತು. ಐಐಎಂ ಅಹಮದಾಬಾದ್‌ನಿಂದ ಪದವಿ ಪಡೆದಿರುವ ನಾಗೇಶ್ವರನ್, ಅಮೆರಿಕದ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ. ಅವರು ಆರ್ಥಿಕತೆಯ ಸ್ಥಿತಿ ಮತ್ತು ಅಭಿವೃದ್ಧಿ ವೇಗಗೊಳಿಸಲು ಸಲಹೆ ನೀಡಿದ್ದಾರೆ.
icon

(3 / 7)

(Hindustan Times)

1991ರ ಬ್ಯಾಚ್‌ನ ಐಎಎಸ್ ಅಧಿಕಾರಿ ಮನೋಜ್ ಗೋವಿಲ್ ಮಧ್ಯಪ್ರದೇಶ ಕೇಡರ್‌ಗೆ ಸೇರಿದವರು. ಸರ್ಕಾರದ ವೆಚ್ಚವನ್ನು ನಿರ್ವಹಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ. ವೆಚ್ಚ ಖಾತೆಯನ್ನು ವಹಿಸಿಕೊಳ್ಳುವ ಮೊದಲು ಅವರು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಗೋವಿಲ್ ಅವರ ಕೆಲಸವೆಂದರೆ ಆದಾಯದ ಗುರಿ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಖರ್ಚು ಅಗತ್ಯವಿರುವ ಕ್ಷೇತ್ರಗಳಿಗೆ ಆದ್ಯತೆ ನೀಡುವುದು.
icon

(4 / 7)

(conclave.insolindia.com)

ಆರ್ಥಿಕ ವ್ಯವಹಾರಗಳ ಇಲಾಖೆಯ ಮುಖ್ಯಸ್ಥ ಅಜಯ್ ಸೇಠ್ 1987ರ ಬ್ಯಾಚ್ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ. ಬಜೆಟ್ ಸಂಬಂಧಿತ ದಾಖಲೆಗಳನ್ನು ಸಿದ್ಧಪಡಿಸುವುದು ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಅವರ ಕೆಲಸ. ಬದಲಾಗುತ್ತಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಗಳ ನಡುವೆಯೂ ಅವರ ಇಲಾಖೆಯು ಆರ್ಥಿಕ ನೀತಿಗಳನ್ನು ನಿರ್ಧರಿಸಲು ಕೆಲಸ ಮಾಡುತ್ತದೆ.
icon

(5 / 7)

(Ministry of Finance-X)

1993ರ ಬ್ಯಾಚ್ ತ್ರಿಪುರ ಕೇಡರ್ ಐಎಎಸ್ ಅಧಿಕಾರಿ ಎಂ. ನಾಗರಾಜು ಅವರು ಹಣಕಾಸು ಸೇವೆಗಳ ಇಲಾಖೆಯನ್ನು ನಿರ್ವಹಿಸುತ್ತಾರೆ. ಇದಕ್ಕೂ ಮೊದಲು ಅವರು ಕಲ್ಲಿದ್ದಲು ಸಚಿವಾಲಯದ ಭಾಗವಾಗಿದ್ದರು. ಅಲ್ಲಿ ಅವರು ಕಲ್ಲಿದ್ದಲು ವಲಯವನ್ನು ಖಾಸಗಿ ವಲಯಕ್ಕೆ ತೆರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಾಗರಾಜು ಅವರು ಭಾರತದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳನ್ನು ಬಲಪಡಿಸಲು ಸಹ ಕೆಲಸ ಮಾಡುತ್ತಾರೆ.
icon

(6 / 7)

ಬಿಹಾರ ಕೇಡರ್‌ನ 199 ರ ಬ್ಯಾಚ್ ಐಎಎಸ್ ಅಧಿಕಾರಿ ಅರುಣೀಶ್ ಚಾವ್ಲಾ ಅವರು ಡಿಐಪಿಎಎಂ ಅಂದರೆ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು ನಿರ್ವಹಿಸುತ್ತಾರೆ. ಸರ್ಕಾರದ ಹೂಡಿಕೆ ಹಿಂತೆಗೆತ ಕಾರ್ಯಕ್ರಮವನ್ನು ಮುನ್ನಡೆಸುವುದು ಅವರ ಮುಖ್ಯ ಕೆಲಸ. (ಫೋಟೋದಲ್ಲಿ ಎಡಗಡೆ ಮೊದಲು ಇರುವವರು ಅರುಣೀಶ್ ಚಾವ್ಲಾ)
icon

(7 / 7)

(PTI)

ಇತರ ಗ್ಯಾಲರಿಗಳು