ಬಜೆಟ್ ದಿನ ಟ್ರೆಂಡ್ ಆಗುತ್ತೆ ನಿರ್ಮಲಾ ಸೀತಾರಾಮನ್ ಸೀರೆ; ಕೆನೆ ಬಣ್ಣದ ಮಧುಬನಿ ಸೀರೆಯಲ್ಲಿ 8ನೇ ಬಜೆಟ್ ಮಂಡಿಸಲಿರುವ ಹಣಕಾಸು ಸಚಿವೆ
- Central Budget 2025: ಕೇಂದ್ರ ಬಜೆಟ್ 2025ರ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಬಜೆಟ್ ದಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ ಜೊತೆಗೆ ಅವರ ಸೀರೆಯೂ ಗಮನ ಸೆಳೆಯುತ್ತದೆ. ಈ ಬಾರಿ ಕೆನೆ ಬಣ್ಣದ ಮಧುಬನಿ ಸೀರೆ ಉಟ್ಟಿರುವ ನಿರ್ಮಲಾ ಅವರು ಕೆಂಪು ಬಣ್ಣದ ಬ್ಲೌಸ್ ತೊಟ್ಟಿದ್ದಾರೆ. 8ನೇ ಬಜೆಟ್ ಮಂಡಿಸಲಿರುವ ಅವರ ಲುಕ್ ಹೀಗಿದೆ.
- Central Budget 2025: ಕೇಂದ್ರ ಬಜೆಟ್ 2025ರ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ಬಜೆಟ್ ದಿನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ ಜೊತೆಗೆ ಅವರ ಸೀರೆಯೂ ಗಮನ ಸೆಳೆಯುತ್ತದೆ. ಈ ಬಾರಿ ಕೆನೆ ಬಣ್ಣದ ಮಧುಬನಿ ಸೀರೆ ಉಟ್ಟಿರುವ ನಿರ್ಮಲಾ ಅವರು ಕೆಂಪು ಬಣ್ಣದ ಬ್ಲೌಸ್ ತೊಟ್ಟಿದ್ದಾರೆ. 8ನೇ ಬಜೆಟ್ ಮಂಡಿಸಲಿರುವ ಅವರ ಲುಕ್ ಹೀಗಿದೆ.
(1 / 6)
2025–26ನೇ ಸಾಲಿನ ಮೋದಿ ಸರ್ಕಾರದ ಬಜೆಟ್ ಮಂಡನೆ ಇಂದು ನಡೆಯಲಿದೆ. ಕಳೆದ 7 ಬಾರಿ ಬಜೆಟ್ ಮಂಡಿಸಿರುವ ಹಣಕಾಸು ಸಚಿವೆ ಈ ಬಾರಿ ಅಂದರೆ 8ನೇ ಬಾರಿಯೂ ಬಜೆಟ್ ಮಂಡಿಸಲಿದ್ದಾರೆ. ಪ್ರತಿ ಬಾರಿಯೂ ಬಜೆಟ್ ದಿನ ನಿರ್ಮಲಾ ಸೀತಾರಾಮನ್ ಅವರು ಧರಿಸಿರುವ ಸೀರೆ ಟ್ರೆಂಡ್ ಆಗುತ್ತೆ. ಈ ಬಾರಿ ಅವರು ಕೆನೆ ಬಣ್ಣದ ಮೇಲೆ ಸುಂದರ ಚಿತ್ತಾರವಿರುವ ಮಧುಬನಿ ಸೀರೆಯನ್ನು ಧರಿಸಿದ್ದಾರೆ. ಅದರ ಜೊತೆಗೆ ಕೆಂಪು ಬಣ್ಣದ ರವಿಕೆ ತೊಟ್ಟಿದ್ದಾರೆ.
(All Image Credit: ANI)(2 / 6)
ಈ ಬಾರಿಯ ಬಜೆಟ್ ಮೇಲೆ ಜನರ ನಿರೀಕ್ಷೆಗಳು ಹೆಚ್ಚಿದ್ದು, ಯಾವ ಕ್ಷೇತ್ರಕ್ಕೆ ಏನೇನು ಕೊಡುಗೆ ನೀಡಬಹುದು ಎಂದು ಜನ ಕಾತರದಿಂದ ಕಾಯುತ್ತಿದ್ದಾರೆ. ಬಜೆಟ್ ಮಂಡನೆಯ ದಿನವಾಗಿರುವ ಇಂದು ಹಣಕಾಸು ಸಚಿವಾಲಯಕ್ಕೆ ಭೇಟಿ ನೀಡಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಪ್ರತಿ ಹಿಡಿದು ಹೊರಗಡೆ ಬಂದು ತಮ್ಮ ಆಡಳಿತ ಸಿಬ್ಬಂದಿ ಜೊತೆ ಪೋಸ್ ನೀಡಿದ್ದಾರೆ.
(3 / 6)
ಬಜೆಟ್ ಪ್ರತಿಯನ್ನು ಎತ್ತಿ ಹಿಡಿದು ಮಾಧ್ಯಮದವರಿಗೆ ತೋರಿಸುತ್ತಾ ನಗುತ್ತಿರುವ ನಿರ್ಮಲಾ ಸೀತಾರಾಮನ್ ಇನ್ನೇನು ಕೆಲವು ಗಂಟೆಗಳಲ್ಲಿ 8ನೇ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಯಾವ ಯಾವ ಕ್ಷೇತ್ರಕ್ಕೆ ಏನೆಲ್ಲಾ ಸವಲತ್ತುಗಳು ಸಿಗಬಹುದು ಎಂಬುದನ್ನು ಇನ್ನಷ್ಟೇ ನಿರೀಕ್ಷಿಸಬೇಕಿದೆ.
(4 / 6)
ಈ ಬಾರಿಯ ಬಜೆಟ್‌ನಲ್ಲಿ ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿಯ ಕೌಶಲದ ಗೌರವಾರ್ಥ ಈ ಸೀರೆಯನ್ನು ಧರಿಸಿದ್ದಾರೆ ನಿರ್ಮಲಾ. ದುಲಾರಿ ದೇವಿ 2021 ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಮಿಥಿಲಾ ಕಲಾ ಸಂಸ್ಥೆಯಲ್ಲಿ ಕ್ರೆಡಿಟ್ ಔಟ್ರೀಚ್ ಚಟುವಟಿಕೆಗಾಗಿ ನಿರ್ಮಲಾ ಸೀತಾರಾಮನ್ ಮಧುಬನಿಗೆ ಭೇಟಿ ನೀಡಿದಾಗ ದುಲಾರಿ ದೇವಿಯವರನ್ನೂ ಭೇಟಿ ಮಾಡಿದ್ದರು. ಬಿಹಾರದಲ್ಲಿ ಮಧುಬನಿ ಕಲೆಯ ಬಗ್ಗೆ ಆತ್ಮೀಯ ವಿಚಾರ ವಿನಿಮಯ ಮಾಡಿಕೊಂಡರು. ಆ ಸಂದರ್ಭ ದುಲಾರಿ ದೇವಿ ಅವರು ಈ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು ಮತ್ತು ಬಜೆಟ್ ದಿನಕ್ಕೆ ಅದನ್ನು ಧರಿಸಲು ಹಣಕಾಸು ಸಚಿವೆ ಅವರನ್ನು ಕೇಳಿದ್ದರು.
(5 / 6)
ಪ್ರತಿ ಬಾರಿಯಂತೆ ಈ ಬಾರಿಯೂ ಆಕೆ ಸರಳವಾಗಿ ಅಲಂಕರಿಸಿಕೊಂಡಿದ್ದಾರೆ. ಕೆನೆ ಬಣ್ಣದ ಮಧುಬನಿ ಸೀರೆ ಜೊತೆಗೆ ಚಿನ್ನದ ಬಳೆ, ಸರ ಹಾಗೂ ಕಿವಿಯೋಲೆ ಧರಿಸಿದ್ದಾರೆ.
ಇತರ ಗ್ಯಾಲರಿಗಳು