Union Budget 2023: ಪಿಎಂ ಆವಾಸ್‌ ಯೋಜನೆಯಡಿ 84 ಲಕ್ಷ ಮನೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ದೊರೆಯಲಿದೆ ದೊಡ್ಡ ನೆರವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Union Budget 2023: ಪಿಎಂ ಆವಾಸ್‌ ಯೋಜನೆಯಡಿ 84 ಲಕ್ಷ ಮನೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ದೊರೆಯಲಿದೆ ದೊಡ್ಡ ನೆರವು

Union Budget 2023: ಪಿಎಂ ಆವಾಸ್‌ ಯೋಜನೆಯಡಿ 84 ಲಕ್ಷ ಮನೆಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ದೊರೆಯಲಿದೆ ದೊಡ್ಡ ನೆರವು

  • ಈ ಬಾರಿಯ ಕೇಂದ್ರ ಬಜೆಟ್‌ 2023ರಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಗೆ, ಭಾರೀ ಹಣಕಾಸು ನೆರವು ದೊರೆಯುವ ಸಾಧ್ಯತೆ ದಟ್ಟವಾಗಿದೆ. ಒಟ್ಟು 84 ಲಕ್ಷ ಮನೆಗಳ ನಿರ್ಮಾಣಕ್ಕೆ, ಈ ಬಾರಿಯ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ. ಈ ಕುರಿತು ಇಲ್ಲಿದೆ ಮಾಹಿತಿ..

ಹಳ್ಳಿಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ, 84 ಲಕ್ಷ ಮನೆಗಳ ನಿರ್ಮಾಣಕ್ಕೆ, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹಣ ಮೀಸಲಿಡುವ  ಸಾಧ್ಯತೆಯಿದೆ. ಬಲ್ಲ ಮೂಲಗಳ ಪ್ರಕಾರ 2024ರ ಲೋಕಸಭೆ ಚುನಾವಣೆಗೂ ಮೊದಲೇ, ಈ ಮನೆಗಳನ್ನು ಫಲಾನುಭವಿಗಳಿಗೆ ಹಂಚಲು ಮೋದಿ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. (ಸಂಗ್ರಹ ಚಿತ್ರ)
icon

(1 / 5)

(PMAY)

ಈ ಯೋಜನೆಯ ಅನುಷ್ಠಾನಕ್ಕಾಗಿ ಈ ವರ್ಷದ ಬಜೆಟ್‌ನಲ್ಲಿ ಸುಮಾರು 40 ಸಾವಿರ ಕೋಟಿ ರೂ. ಮೀಸಲಿಡಲಾಗುವುದು ಎಂದು ಹೇಳಲಾಗಿದೆ. (ಸಂಗ್ರಹ ಚಿತ್ರ)
icon

(2 / 5)

ಪ್ರಧಾನಮಂತ್ರಿ ಆವಾಸ್ ಯೋಜನೆ 2015 ರಲ್ಲಿ ಪ್ರಾರಂಭವಾಯಿತು. ಇದು 2022ರವರೆಗೆ ಮಾತ್ರ ಜಾರಿಯಲ್ಲಿ ಇರಬೇಕಿತ್ತು. ಆದರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು 2024 ರವರೆಗೆ ವಿಸ್ತರಿಸಿದೆ. ಈ ಯೋಜನೆಯಡಿ ಇದುವರೆಗೆ ದೇಶಾದ್ಯಂತ 1.22 ಕೋಟಿಗೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಗಿದೆ. ಇದು ಪೂರ್ವ ನಿಗದಿತ ಗುರಿಗಿಂತ ಹೆಚ್ಚು. (ಸಂಗ್ರಹ ಚಿತ್ರ)
icon

(3 / 5)

(ANI)

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಈಗಾಗಲೇ ಸುಮಾರು 68.02 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಲಕ್ಷಾಂತರ ಕುಟುಂಬಗಳು ತಮ್ಮ ಕನಸಿನ ಮನೆಯನ್ನು ಪಡೆದುಕೊಂಡಿವೆ. (ಸಂಗ್ರಹ ಚಿತ್ರ)
icon

(4 / 5)

ಮೂಲಗಳ ಪ್ರಕಾರ 2024ರ ವೇಳೆಗೆ 8.4 ಲಕ್ಷ ಮನೆಗಳ ನಿರ್ಮಾಣದ ಗುರಿ ನಿಗದಿಯಾಗಬಹುದು. ಇದಕ್ಕಾಗಿ ಸುಮಾರು 40 ಸಾವಿರ ಕೋಟಿ ರೂ. ಅನುದಾನದ ಅವಶ್ಯಕತೆ ಇದೆ.  ಹಿಂದಿನ ವರ್ಷದ ಬಜೆಟ್‌ನಲ್ಲಿ ಈ ಯೋಜನೆಗಾಗಿ ಒಟ್ಟು 48 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಇದರಲ್ಲಿ 28 ​​ಸಾವಿರ ಕೋಟಿ ರೂ. ನಗರ ಪ್ರದೇಶಗಳಿಗೆ ಹಾಗೂ 20 ಸಾವಿರ ಕೋಟಿ ರೂ. ಗ್ರಾಮೀಣ ಪ್ರದೇಶಗಳಿಗೆ ವಿನಿಯೋಗಿಸಲಾಗಿದೆ. (ಸಂಗ್ರಹ ಚಿತ್ರ)
icon

(5 / 5)

(HT)

ಇತರ ಗ್ಯಾಲರಿಗಳು