ರೈಲಲ್ಲಿ ಕೂತು ಊಟ ತಿಂಡಿ ಸವಿಯುವ ವಿಶಿಷ್ಟ ಅನುಭವ! ಹಾಸನ-ಬೆಂಗಳೂರು ಮಾರ್ಗವಾಗಿ ಬರುವಾಗ ಕುಣಿಗಲ್ ಹತ್ತಿರ ಸಿಗುತ್ತೆ ಹೋಟೆಲ್ ಉಗಿಬಂಡಿ
ವೀರಕಪುತ್ರ ಎಂ ಶ್ರೀನಿವಾಸ್ ಅವರು ಹಾಸನದಿಂದ ಬರುವಾಗ ಕುಣಿಗಲ್ ಬಿಟ್ಟು ಎರಡೂವರೆ ಕಿಮಿ ದೂರದಲ್ಲಿ ಬಿದನಿಗೆರೆ ಬೈಪಾಸ್ ಹತ್ತಿರ ಈ ಹೋಟೆಲ್ ಗಮನಿಸಿದ್ದಾರೆ. ವಿಶೇಷವಾಗಿ ರೈಲಿನ ಮಾದರಿಯಲ್ಲಿ ವಿನ್ಯಾಸ ಮಾಡಲಾದ ಈ ಹೋಟೆಲ್ ಇಷ್ಟವಾಗಿ ಫೇಸ್ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡ ಒಂದಿಷ್ಟು ಫೋಟೋಸ್ ಇಲ್ಲಿದೆ.
(1 / 8)
ಮೊದಲಿಗೆ ಅವರಿಗೆ ಆಶ್ಚರ್ಯವಾಗಿ ಇದೇನಿದು ರೈಲು ಇಲ್ಲಿ ನಿಂತಿದೆಯಲ್ಲ ಎಂದು ಅನಿಸಿತಂತೆ. ಇದ್ಯಾಕ್ ಹಿಂಗೆ ಎಂದು ಅವರು ಕಾರು ನಿಲ್ಲಿಸಿ ಹತ್ತಿರ ಬಂದು ನೋಡಿದ್ದಾರೆ. ಚೂರು ಸಾವಧಾನವಾಗಿ ಅದನ್ನು ನೋಡಿದಾಗಲೇ ಅದು ಹೋಟೆಲ್ ಎಂದು ತಿಳಿಯಿತಂತೆ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್ )
(2 / 8)
ಹೋಟೆಲ್ ಮಾಲೀಕರಿಗೆ ಎಂಥಾ ಅಭಿರುಚಿ ಇರಬಹುದು ಅಲ್ವಾ? ಇಷ್ಟೊಂದು ಸೊಗಸಾಗಿ ನಿರ್ಮಾಣ ಮಾಡಿದ್ದಾರೆ ಎಂದು ತಮ್ಮ ಫೇಸ್ಬುಕ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್ )
(3 / 8)
ಇಂಜಿನ್ನು, ಬೋಗಿ, ಪ್ಲಾಟ್ ಫಾರ್ಮ್, ಟಿಕೇಟ್ ಕೌಂಟ್ರು, ಕಲೆಕ್ಟ್ರು, ಪೂಚಂತೆ, ಬುದ್ಧ ಒಂದೇ ಎರಡೇ! ಸುಮ್ಮನೆ ಸುತ್ತಾಡಿ ಬರೋಕೆ ಹತ್ತು ನಿಮಿಷ ಬೇಕು ಎಂದಿದ್ದಾರೆ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್ )
(4 / 8)
.ಹಾಸನ, ಮಂಗಳೂರು, ಧರ್ಮಸ್ಥಳ, ಶ್ರವಣಬೆಳಗೊಳದಿಂದ ಬರುವವರು ಇಲ್ಲೊಮ್ಮೆ ಹೋಗಿ ಒಂದು ಹೊಸ ಅನುಭವ ಪಡೆದುಕೊಂಡು ಬರಬಹುದು. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್ )
(5 / 8)
ಅದ್ಯಾರೋ ಪರವೂರಿನವರು ಫ್ಲಾಟ್ ಫಾರ್ಮ್ ಅನ್ನೋ ರೈಲಿನ ಥೀಮ್ ಇಟ್ಟು ಹೋಟೆಲ್ ಮಾಡಿದ್ರೆ ಗಂಟೆಗಟ್ಟಲೆ ಕಾದು ತಿಂದು ಬರ್ತೀವಿ. ಇಲ್ಲಿ ಕನ್ನಡಿಗರೇ ಇಂತಹದ್ದೊಂದು ಚೆಂದದ ಹೋಟೆಲ್ ಮಾಡಿದಾಗ ಸುಮ್ನಿರಬಾರದು ಎಂದು ಬರೆದುಕೊಂಡಿದ್ದಾರೆ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್ )
(6 / 8)
ಹಾಸನದ ದಾರೀಲಿ ಸಾಕಷ್ಟು ಹೋಟೆಲ್ಲುಗಳಿವೆ, ಅಲ್ಲೆಲ್ಲಾ ನೀವು ತಿಂದೇ ಇರ್ತೀರಿ. ಇದೊಂದು ಸಲ ಇಲ್ಲಿ ಹೊಸ ರುಚಿ ಸವಿದು ನೋಡಿ. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್ )
(7 / 8)
ನೀವು ಆರಾಮವಾಗಿ ಕುಳಿತು ಅಲ್ಲಿನ ವಾತಾವರಣವನ್ನು ಅನುಭವಿಸಿ ಬರಬಹುದು. (ಚಿತ್ರಕೃಪೆ: ವೀರಕಪುತ್ರ ಎಂ ಶ್ರೀನಿವಾಸ್ )
ಇತರ ಗ್ಯಾಲರಿಗಳು