ಕನ್ನಡ ಸುದ್ದಿ  /  Photo Gallery  /  Up Warriorz And Gujarat Giants Eliminates From Wpl 2024 As Royal Challengers Bangalore Beat Mumbai Indians Rcb Vs Mi Jra

WPL 2024: ಆರ್‌ಸಿಬಿ ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಯುಪಿ ವಾರಿಯರ್ಸ್‌, ಗುಜರಾತ್‌ ಜೈಂಟ್ಸ್

  • ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿಯ ಪ್ಲೇಆಫ್‌ ಪ್ರವೇಶಿಸಿದೆ. ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದ ತಂಡವು, ಪ್ರಸಕ್ತ ಆವೃತ್ತಿಯ ವಿಮೆನ್ಸ್‌ ಪ್ರೀಮಿಯರ್ ಲೀಗ್‌ನಲ್ಲಿ ಮೂರನೇ ತಂಡವಾಗಿ ನಾಕೌಟ್‌ ಪ್ರವೇಶ ಮಾಡಿದೆ. ಇದೇ ವೇಳೆ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ.

ಆರ್‌ಸಿಬಿ ತಂಡವು ಅಧಿಕೃತವಾಗಿ ಪ್ಲೇ ಆಫ್‌ ಪ್ರವೇಶಿಸುವುದರೊಂದಿಗೆ ಯುಪಿ ವಾರಿಯರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.
icon

(1 / 6)

ಆರ್‌ಸಿಬಿ ತಂಡವು ಅಧಿಕೃತವಾಗಿ ಪ್ಲೇ ಆಫ್‌ ಪ್ರವೇಶಿಸುವುದರೊಂದಿಗೆ ಯುಪಿ ವಾರಿಯರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ.(PTI)

ಆರ್‌ಸಿಬಿ ತಂಡವು ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ 8 ಪಡೆದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಸ್ಥಾನವನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ. 
icon

(2 / 6)

ಆರ್‌ಸಿಬಿ ತಂಡವು ನಾಲ್ಕು ಪಂದ್ಯಗಳಲ್ಲಿ ಗೆಲುವಿನೊಂದಿಗೆ 8 ಪಡೆದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಈ ಸ್ಥಾನವನ್ನು ಕದಲಿಸಲು ಯಾರಿಂದಲೂ ಸಾಧ್ಯವಿಲ್ಲ. (PTI)

ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಮುಂಬೈ ಇಂಡಿಯನ್ಸ್‌ ಕಳೆದುಕೊಂಡಿದೆ. ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ತಂಡವು 10 ಅಅಂಕ ಪಡೆದಿದೆ. ಆದರೆ +0.024 ನೆಟ್‌ ರನ್‌ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
icon

(3 / 6)

ಆರ್‌ಸಿಬಿ ವಿರುದ್ಧದ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶವನ್ನು ಮುಂಬೈ ಇಂಡಿಯನ್ಸ್‌ ಕಳೆದುಕೊಂಡಿದೆ. ಆಡಿದ 8 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ತಂಡವು 10 ಅಅಂಕ ಪಡೆದಿದೆ. ಆದರೆ +0.024 ನೆಟ್‌ ರನ್‌ ರೇಟ್‌ನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.(PTI)

ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ 7ರಲ್ಲಿ 5 ಗೆಲುವು ಹಾಗೂ 2 ಸೋಲು ಕಂಡಿರುವ ತಂಡದ 10 ಅಂಕ ಪಡೆದಿದೆ. +0.918 ರನ್‌ ರೇಟ್‌ನೊಂದಿಗೆ ಮುಂಬೈಗಿಂತ ಭಾರಿ ಅಂತರದಲ್ಲಿದೆ. ಇದೀಗ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿರುವ ತಂಡ, ಅಲ್ಲಿಯೂ ಗೆದ್ದರೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಒಂದು ವೇಳೆ ಸಣ್ಣ ಅಂತರದಲ್ಲಿ ಸೋತರೂ ತಂಡ  ನೆಟ್‌ ರನ್‌ ರೇಟ್‌ ನೆರವಿನೊಂದಿಗೆ ಮುಂದಿನ ಹಂತ ಆಡಲಿದೆ.
icon

(4 / 6)

ಡೆಲ್ಲಿ ಕ್ಯಾಪಿಟಲ್ಸ್ ಸದ್ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ 7ರಲ್ಲಿ 5 ಗೆಲುವು ಹಾಗೂ 2 ಸೋಲು ಕಂಡಿರುವ ತಂಡದ 10 ಅಂಕ ಪಡೆದಿದೆ. +0.918 ರನ್‌ ರೇಟ್‌ನೊಂದಿಗೆ ಮುಂಬೈಗಿಂತ ಭಾರಿ ಅಂತರದಲ್ಲಿದೆ. ಇದೀಗ ತನ್ನ ಕೊನೆ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿರುವ ತಂಡ, ಅಲ್ಲಿಯೂ ಗೆದ್ದರೆ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಒಂದು ವೇಳೆ ಸಣ್ಣ ಅಂತರದಲ್ಲಿ ಸೋತರೂ ತಂಡ  ನೆಟ್‌ ರನ್‌ ರೇಟ್‌ ನೆರವಿನೊಂದಿಗೆ ಮುಂದಿನ ಹಂತ ಆಡಲಿದೆ.(PTI)

ಆರ್‌​​ಸಿಬಿ ಸೋಲಿಗಾಗಿ ಎದುರು ನೋಡುತ್ತಿದ್ದ ಯುಪಿ ವಾರಿಯರ್ಸ್‌ ತಂಡವು, ಟೂರ್ನಿಯಿಂದ ಅಧಿಕೃತ ಅಗಿ ಹೊರಬಿದ್ದಿದೆ. ಸದ್ಯ ತಂಡವು 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
icon

(5 / 6)

ಆರ್‌​​ಸಿಬಿ ಸೋಲಿಗಾಗಿ ಎದುರು ನೋಡುತ್ತಿದ್ದ ಯುಪಿ ವಾರಿಯರ್ಸ್‌ ತಂಡವು, ಟೂರ್ನಿಯಿಂದ ಅಧಿಕೃತ ಅಗಿ ಹೊರಬಿದ್ದಿದೆ. ಸದ್ಯ ತಂಡವು 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.(WPL-X)

ಗುಜರಾತ್​ ಜೈಂಟ್ಸ್ ತಂಡವು, ಕೊನೆಯ ಲೀಗ್‌ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದರೂ ಪ್ಲೇಆಫ್ ಪ್ರವೇಶ ಅಸಾಧ್ಯ. ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
icon

(6 / 6)

ಗುಜರಾತ್​ ಜೈಂಟ್ಸ್ ತಂಡವು, ಕೊನೆಯ ಲೀಗ್‌ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆದ್ದರೂ ಪ್ಲೇಆಫ್ ಪ್ರವೇಶ ಅಸಾಧ್ಯ. ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.(PTI)


IPL_Entry_Point

ಇತರ ಗ್ಯಾಲರಿಗಳು