ಮೇ 8ರಿಂದ ಮೇ 16ರ ವರೆಗೆ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಬ್ಲಾಕ್‌ಬಸ್ಟರ್‌ ಸಿನಿಮಾಗಳಿವು; ಕನ್ನಡ ಚಿತ್ರವೂ ಒಂದಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೇ 8ರಿಂದ ಮೇ 16ರ ವರೆಗೆ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಬ್ಲಾಕ್‌ಬಸ್ಟರ್‌ ಸಿನಿಮಾಗಳಿವು; ಕನ್ನಡ ಚಿತ್ರವೂ ಒಂದಿದೆ

ಮೇ 8ರಿಂದ ಮೇ 16ರ ವರೆಗೆ ಒಟಿಟಿಯಲ್ಲಿ ಬಿಡುಗಡೆ ಆಗಲಿರುವ ಬ್ಲಾಕ್‌ಬಸ್ಟರ್‌ ಸಿನಿಮಾಗಳಿವು; ಕನ್ನಡ ಚಿತ್ರವೂ ಒಂದಿದೆ

ಒಟಿಟಿಯಲ್ಲಿ ಮೇ 8ರಿಂದ 16ರ ಅವಧಿಯಲ್ಲಿ ಹಲವು ಸಿನಿಮಾಗಳು ಸ್ಟ್ರೀಮಿಂಗ್‌ ಆರಂಭಿಸಲಿವೆ. ಕ್ರೈಂ ಥ್ರಿಲ್ಲರ್‌, ಸಸ್ಪೆನ್ಸ್‌, ಕಾಮಿಡಿ ಸೇರಿ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗಲಿವೆ. ಕನ್ನಡದ ಒಂದು ಸಿನಿಮಾ ಸಹ ರಿಲೀಸ್‌ ಆಗುವ ಸಾಧ್ಯತೆ ಇದೆ. ಹೀಗಿದೆ ವಿವರ.

ಮರಣಮಾಸ್‌: ಮಾಲಿವುಡ್‌ ನಟ ಬಾಸಿಲ್ ಜೋಸೆಫ್ ನಾಯಕನಾಗಿ ನಟಿಸಿರುವ ‌ʻಮರಣಮಾಸ್ʼ ಏಪ್ರಿಲ್‌ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು. ಇದೀಗ ಮೇ 15ರಂದು ಸೋನಿಲೀವ್‌ ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
icon

(1 / 6)

ರಾಬಿನ್‌ಹುಡ್‌: ಟಾಲಿವುಡ್‌ ನಟ ನಿತಿನ್‌ ನಾಯಕನಾಗಿ ನಟಿಸಿರುವ ʻರಾಬಿನ್ ಹುಡ್ʼ ಸಿನಿಮಾ ಚಿತ್ರಮಂದಿರಗಳ ಬಳಿಕ ಒಟಿಟಿಗೆ ಆಗಮಿಸುವ ಸಿನಿಹದಲ್ಲಿದೆ. ವೆಂಕಿ ಕುಡುಮುಲ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ನಿರ್ಮಾಣ ಮಾಡಿದೆ. ಈ ಸಿನಿಮಾದ ಡಿಜಿಟಲ್‌ ಸ್ಟ್ರೀಮಿಂಗ್‌ ಹಕ್ಕುಗಳನ್ನು ಜೀ5 ಪಡೆದುಕೊಂಡಿದೆ. ಮೇ 10ರಂದು ಈ ಸಿನಿಮಾ ಒಟಿಟಿಗೆ ಆಗಮಿಸುವ ಸಾಧ್ಯತೆಯಿದೆ.
icon

(2 / 6)

ಅಜ್ಞಾತವಾಸಿ: ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ ನಿರ್ದೇಶನದ ಅಜ್ಞಾತವಾಸಿ ಸಿನಿಮಾ ಮೇ 16ರಂದು ಜೀ5 ಒಟಿಟಿಗೆ ಆಗಮಿಸುವ ಸಾಧ್ಯತೆ ಇದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾದಲ್ಲಿ ರಂಗಾಯಣ ರಘು, ಪಾವನಾ ಗೌಡ, ಸಿದ್ದು ಮೂಲಿಮನಿ ಮುಖ್ಯಭೂಮಿಕೆಯಲ್ಲಿದ್ದಾರೆ.
icon

(3 / 6)

ಜಾಕ್‌: ತೆಲುಗು ನಟ ಸಿದ್ದು ಜೊನ್ನಲಗಡ್ಡ ನಟನೆಯ ಜಾಕ್‌ ಸಿನಿಮಾ ಇತ್ತೀಚೆಗಷ್ಟೇ ಥಿಯೇಟರ್‌ಗಳಲ್ಲಿ ತೆರೆಕಂಡಿತ್ತು. ಬಾಕ್ಸ್‌ಆಫೀಸ್‌ನಲ್ಲಿ ಸದ್ದು ಮಾಡದ ಈ ಸಿನಿಮಾ, ಇದೀಗ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ. ಮೇ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ. ಕನ್ನಡದಲ್ಲಿಯೂ ಈ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.
icon

(4 / 6)

ಗುಡ್‌ ಬ್ಯಾಡ್‌ ಅಗ್ಲಿ: ತಮಿಳು ನಟ ಅಜಿತ್ ಕುಮಾರ್‌ ನಟಿಸಿರುವ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾ ಕಳೆದ ತಿಂಗಳ ಏಪ್ರಿಲ್‌ 10ರಂದು ಚಿತ್ರಮಂದಿರಗಳಿಗೆ ಬಂದಿತ್ತು. ಅಧಿಕ್‌ ರವಿಚಂದ್ರನ್‌ ನಿರ್ದೇಶನದ ಈ ಚಿತ್ರ ಮೇ 8ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಪ್ರಭು, ಅರ್ಜುನ್ ದಾಸ್, ಪ್ರಸನ್ನ, ಸುನಿಲ್, ರಾಹುಲ್ ದೇವ್, ಯೋಗಿ ಬಾಬು, ಪ್ರಿಯಾ ಪ್ರಕಾಶ್ ವಾರಿಯರ್ ಸೇರಿ ಇನ್ನೂ ಹಲವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
icon

(5 / 6)

ದಿ ಡಿಪ್ಲೊಮ್ಯಾಟ್: ಬಾಲಿವುಡ್‌ ನಟ ಜಾನ್ ಅಬ್ರಹಾಂ ಅಭಿನಯದ ದಿ ಡಿಪ್ಲೊಮ್ಯಾಟ್ ಸಿನಿಮಾ ಮೇ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರೀಮಿಯರ್ ಆಗಲಿದೆ. ಶಿವಮ್‌ ನಾಯರ್‌ ನಿರ್ದೇಶನದ ಈ ಸಿನಿಮಾ, ಮಾರ್ಚ್‌ 14ರಂದು ಚಿತ್ರಮಂದಿರಗಳಲ್ಲಿ ತೆರೆಗೆ ಬಂದಿತ್ತು.
icon

(6 / 6)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು