UPI Wrong Payment: ಮಿಸ್ಸಾಗಿ ಬೇರೆಯವ್ರಿಗೆ ಹಣ ಕಳಿಸಿದ್ರಾ? ಡೋಂಟ್ ವರಿ, ವಾಪಸ್ ಪಡೆಯೋದು ಹೇಗೆ ಅಂತ ಇಲ್ಲಿದೆ ಓದಿ
UPI Wrong Payment: ಆರ್ಬಿಐ ಹೊರಡಿಸಿದ ಹೊಸ ಮಾರ್ಗಸೂಚಿ ಪ್ರಕಾರ, ಯುಪಿಐ ಮೂಲಕ ತಪ್ಪಾಗಿ ಬೇರೊಬ್ಬರಿಗೆ ಹಣ ಕಳುಹಿಸಿದರೆ, ನೀವು ಅದನ್ನು 24 ಗಂಟೆಗಳ ಅಥವಾ 48 ಗಂಟೆಗಳ ಒಳಗೆ ಮರಳಿ ಪಡೆಯಬಹುದು. ಅದು ಹೇಗೆ ಎಂಬುದನ್ನು ಈ ಮುಂದೆ ತಿಳಿಯೋಣ.
(1 / 7)
ಯುಪಿಐನಿಂದ ಹಣ ಪಾವತಿಸುವುದು ಎಷ್ಟು ಅನುಕೂಲವಾಗಿದೆಯೇ ಅಷ್ಟೇ ತೊಂದರೆಯೂ ಆಗುತ್ತಿದೆ. ಫೋನ್ಪೇ, ಗೂಗಲ್ ಪೇ ಮೂಲಕ ತಪ್ಪಾಗಿ ಬೇರೊಂದು ನಂಬರ್ಗೆ ಹಣವನ್ನು ಕಳುಹಿಸಿಬಿಟ್ಟರಾ? ಹಣ ಕಳುಹಿಸಿದ ನಂತರವೂ ಪೇಮೆಂಟ್ ರಿಜೆಕ್ಟ್ ಆಗುತ್ತಿದ್ಯಾ? ಪದೆಪದೇ ಈ ಸಮಸ್ಯೆಗಳಿಂದ ರೋಸಿ ಹೋಗಿದ್ದರೆ, ಇನ್ಮುಂದೆ ಚಿಂತೆ ಬಿಡಿ.
(2 / 7)
ಈ ಸಮಸ್ಯೆಗಳಿಂದ ಗ್ರಾಹಕರಿಗೆ ಮುಕ್ತಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮಗಳನ್ನು ಪರಿಚಯಿಸಿದೆ. ಇನ್ಮುಂದೆ, ತಪ್ಪಿ ಬೇರೋಂದು ನಂಬರ್ಗೆ ಕಳುಹಿಸಿದ್ದರೆ, ಸುಲಭವಾಗಿ ಮರಳಿ ಪಡೆಯಬಹುದು. ಅದು 24 ರಿಂದ 48 ಗಂಟೆಗಳಲ್ಲೇ ಹಣ ತಮ್ಮ ಖಾತೆಗೆ ಜಮೆ ಆಗಲಿದೆ? ಅದು ಹೇಗಂತೀರಾ? ಇಲ್ಲಿದೆ ವಿವರ.
(3 / 7)
ಆದರೆ ಇದಕ್ಕಾಗಿ ಹಲವು ಹಂತಗಳನ್ನು ಅನುಕರಿಸುವುದು ಕಡ್ಡಾಯ. ನೀವು ತಪ್ಪಾಗಿ ಹಣವನ್ನು ಕಳುಹಿಸಿದ ವ್ಯಕ್ತಿಯ ಬ್ಯಾಕ್ ಖಾತೆಯೂ ಒಂದೇ ಇದ್ದರೆ ನಿಮ್ಮ ಕೆಲಸ ಮತ್ತಷ್ಟು ಸುಲಭವಾಗುತ್ತದೆ. ಬೇರೆ ಬ್ಯಾಂಕ್ ಆಗಿದ್ದರೆ, ಹಣವನ್ನು ಮರಳಿ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಏನೇನು ಮಾಡಬೇಕು ಎಂಬುದರ ವಿವರ ಇಲ್ಲಿದೆ.
(4 / 7)
ತಪ್ಪಾದ ಯುಪಿಐಗೆ ಹಣವನ್ನು ಕಳುಹಿಸಿದ್ದರೆ ನೀವು ಮೊದಲಿಗೆ ಮಾಡಬೇಕಾದ ಕೆಲಸ ಏನೆಂದರೆ, ಹಣ ಸ್ವೀಕರಿಸಿದ ವ್ಯಕ್ತಿಯನ್ನು ಸಂಪರ್ಕಿಸಬೇಕು. ಅವರು ಹಣವನ್ನು ರಿಟರ್ನ್ ಕಳುಹಿಸುತ್ತಾರಾ ಎಂಬುದನ್ನು ಕೇಳಬೇಕು. ಒಂದ್ವೇಳೆ ಅವರು ಹಣವನ್ನು ಮರಳಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ.
(5 / 7)
ತಪ್ಪಾಗಿ ಕಳುಹಿಸಿದ ವ್ಯಕ್ತಿಯ ಸಂಪರ್ಕ ಸಿಗದೇ ಇದ್ದಾಗ ನಿಮ್ಮ ಯುಪಿಐ ಅಪ್ಲೆಕೇಷನ್ ಕಸ್ಟಮರ್ ಕೇರ್ ಜೊತೆಗೆ ಮಾತನಾಡಿ. ಅವರಿಗೆ ಅವರಿಗೆ ಸಂಪೂರ್ಣ ಸಮಸ್ಯೆ ತಿಳಿಸಿ. ಅವರು ಬಯಸಿದರೆ, ನೀವು ಅವರಿಗೆ ಅಗತ್ಯ ಮತ್ತು ತುರ್ತು ಮಾಹಿತಿ ನೀಡಬಹುದು. ಆಗ ಅವರು ಸಮಸ್ಯೆ ಪರಿಹರಿಸಿ ನಿಮ್ಮ ಹಣ ತಲುಪುವಂತೆ ನೋಡಿಕೊಳ್ಳುತ್ತಾರೆ.(REUTERS)
(6 / 7)
ಕಸ್ಟಮೇರ್ ಕೇರ್ ಸಮಸ್ಯೆಯನ್ನು ಪರಿಹರಿಸದಿದ್ದರೆ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ದೂರು ಸಲ್ಲಿಸಬಹುದು. ವಹಿವಾಟಿಗೆ ಸಂಬಂಧಿಸಿದ ಮಾಹಿತಿ ಮತ್ತು ಸಾಕ್ಷ್ಯಗಳನ್ನು ತನಿಖೆಗಾಗಿ ಅವರಿಗೆ ಹಸ್ತಾಂತರಿಸಬೇಕು. ನೀವದನ್ನು ನಿಮ್ಮ ಬ್ಯಾಂಕ್‌ಗೆ ವರದಿ ನೀಡಿ ಬೇಕಾದ ಸಹಾಯ ಪಡೆಯಬಹುದು. ಬ್ಯಾಂಕ್ನವರು ಹಣ ಹಿಂದಿರುಗಿಸಲು ಪ್ರಯತ್ನಿಸುತ್ತಾರೆ.
ಇತರ ಗ್ಯಾಲರಿಗಳು