G20 Summit: ದೆಹಲಿ ಆಟೋ ಪ್ರಮಾಣ ಎಂಜಾಯ್ ಮಾಡಿದ ಅಮೆರಿಕ ವಿದೇಶಾಂಗ ಕಾರ್ಯದರ್ಶಿ; ಜಿ20 ಹೈವೋಲ್ಟೇಜ್ ಫೋಟೋಸ್
ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಇವತ್ತು ಭಾರತದಲ್ಲಿ ಅಮೆರಿಕದ ಕಾನ್ಸುಲೇಟ್ ಸಿಬ್ಬಂದಿಯನ್ನ ಭೇಟಿಯಾದರು. ಅವರು ಆ ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ. ಜೊತೆಗೆ ಬ್ಲಿಂಕೆನ್ ದೆಹಲಿಯ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿ ಇಲ್ಲಿ ಆಟೋ ಸೇವೆಯನ್ನು ಎಂಜಾಯ್ ಮಾಡಿದ್ದಾರೆ.
(1 / 5)
ಈ ಬಾರಿಯ ಜಿ 20 ಶೃಂಗಸಭೆ ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ. ಇದರ ನಡುವೆ ದೆಹಲಿಯಲ್ಲಿ 'ರೈಸಿನಾ ಡೈಲಾಗ್' ಅನ್ನು ಇಂದು ಆಯೋಜಿಸಲಾಗಿತ್ತು. ಕ್ವಾಡ್ ಆಧಾರಿತ ದೇಶಗಳ ವಿದೇಶಾಂಗ ಮಂತ್ರಿಗಳ ಚರ್ಚೆ ಈ ದಿನ ದೆಹಲಿಯಲ್ಲಿ ನಡೆಯಿತು. (ANI Photo)(Secretary Antony Blinken Twitter)
(2 / 5)
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಇಂದು ಭಾರತದ ಯುಎಸ್ ಕಾನ್ಸುಲೇಟ್‌ನಲ್ಲಿ ಅಲ್ಲಿನ ಸಿಬ್ಬಂದಿಯನ್ನು ಭೇಟಿ ಮಾಡಿದರು. ಆ ಫೋಟೋವನ್ನೂ ಅವರು ಟ್ವೀಟ್ ಮಾಡಿದ್ದಾರೆ.
(3 / 5)
ಆಂಟೋನಿ ಬ್ಲಿಂಕೆನ್ ಪೋಸ್ಟ್ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ದೆಹಲಿಯ ಬೀದಿಗಳಲ್ಲಿ ಆಟೋದಲ್ಲಿ ಸುತ್ತಾಡಿದ್ದಾರೆ. ಜಿ 20 ಶೃಂಗಸಭೆಗಾಗಿ ಭಾರತ ಪ್ರವಾಸದಲ್ಲಿರರುವ ಬ್ಲಿಂಕೆನ್ ಅವರ ಫೋಟೋಗಳು ವೈರಲ್ ಆಗಿದೆ. 'ಭಾರತದ ಆತಿಥ್ಯ ಮತ್ತು ನಾಯಕತ್ವಕ್ಕೆ ಕೃತಜ್ಞರಾಗಿರಬೇಕು. ಅವರು ತಮ್ಮ ಜಿ 20 ರ ಅಡಿಯಲ್ಲಿ ಮಹತ್ವಾಕಾಂಕ್ಷೆಯ ಕಾರ್ಯಸೂಚಿಯಲ್ಲಿ ಭಾಗವಹಿಸಲು ಸಿದ್ಧರಾಗಿದ್ದಾರೆ ಅಂತ ಯುಎಸ್ ವಿದೇಶಾಂಗ ಕಾರ್ಯದರ್ಶಿ ಬರೆದುಕೊಂಡಿದ್ದಾರೆ.
(4 / 5)
ಬ್ಲಿಂಕೆನ್ ಇವತ್ತಿನ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲಿರುವ ಅವರು, ಭಾರತ ನಮ್ಮ ವಿಘಟನೆಯ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ಇಂಡೋ ಪೆಸಿಫಿಕ್ ಪ್ರದೇಶವನ್ನು ರಕ್ಷಿಸುವ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಇತರ ಗ್ಯಾಲರಿಗಳು