Volodymyr Zelensky Visits US: ಗುಪ್ತವಾಗಿ ಅಮೆರಿಕ ತಲುಪಿದ ಉಕ್ರೇನ್ ಅಧ್ಯಕ್ಷ: ವೈಟ್‌ಹೌಸ್‌ನಲ್ಲಿ ಝೆಲೆನ್ಸ್ಕಿ ಕಂಡ ಪುಟಿನ್‌ಗೆ ಆಘಾತ!
- ವಾಷಿಂಗ್ಟನ್: ಕಳೆದ ಹತ್ತು ತಿಂಗಳಿಗೂ ಅಧಿಕ ಸಮಯದಿಂದ ರಷ್ಯಾದ ಬಲಾಢ್ಯ ಸೇನೆಯನ್ನು ಎದುರಿಸುತ್ತಾ, ತನ್ನ ಸೈನಿಕರಿಗೆ ಯುದ್ಧಭೂಮಿಯಿಂದಲೇ ಆದೇಶ ನೀಡುತ್ತಾ, ತಾಯ್ನಾಡಿನ ರಕ್ಷಣೆಯಲ್ಲಿ ನಿರತವಾಗಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಜಾಗತಿಕವಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ಝೆಲೆನ್ಸ್ಕಿ ಗುಪ್ತವಾಗಿ ಅಮೆರಿಕ ತಲುಪಿ, ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..

(1 / 5)
ಹೌದು, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ತಲುಪಿದ್ದು, ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷ, ಉಕ್ರೇನ್‌ಗೆ ಅಮೆರಿಕದ ಸಾಮರಿಕ ನೆರವು ಮುಂದುವರಿಕೆ, ಹೀಗೆ ಹಲವು ವಿಷಯಗಳ ಕುರಿತು ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ.(ANI)
(2 / 5)
ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶ್ವೇತಭವನದಲ್ಲಿ ಆತ್ಮೀಯವಾಗಿ ಸ್ವಾಗತಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, ಈ ಸನ್ನಿವೇಶದಲ್ಲಿ ಉಕ್ರೇನ್ ಎಂದಿಗೂ ಏಕಾಂಗಿಯಾಗಿ ಉಳಿಯದು ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಉಕ್ರೇನ್‌ಗೆ ಸಾಮರಿಕ ಬೆಂಬಲವನ್ನು ಅಮೆರಿಕ ಮುಂದುವರೆಸಲಿದೆ ಎಂದು ಬೈಡನ್ ಇದೇ ವೇಳೆ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಭರವಸೆ ನೀಡಿದ್ದಾರೆ. (ANI)
(3 / 5)
ಇನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಭೇಟಿಯ ಭಾಗವಾಗಿ, ಅಮೆರಿಕದ ರಕ್ಷಣಾ ಇಲಾಖೆಯು ಉಕ್ರೇನ್‌ಗೆ 1.85 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಹೆಚ್ಚುವರಿ ಭದ್ರತಾ ನೆರವನ್ನು ಘೋಷಿಸಿದೆ.(ANI)
(4 / 5)
ಇದೇ ವೇಳೆ ವಿಷಮ ಪರಿಸ್ಥಿತಿಯಲ್ಲಿ ಉಕ್ರೇನ್‌ಗೆ ಅಮೆರಿಕ ನೀಡುತ್ತಿರುವ ಸಾಮರಿಕ ನೆರವನ್ನು ಕೊಂಡಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕಾಗಿ ಉಕ್ರೇನ್ ನಡೆಸುತ್ತಿರುವ ಹೋರಾಟದಲ್ಲಿ ಅಮೆರಿಕ ನಮ್ಮೊಂದಿಗೆ ಕೈಜೋಡಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. (ANI)
ಇತರ ಗ್ಯಾಲರಿಗಳು