ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು, ದಕ್ಷಿಣ ಅಮೆರಿಕದಲ್ಲಿ ಅಪರೂಪದ ಹಿಮಪಾತ; ವೈರುಧ್ಯಗಳ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು, ದಕ್ಷಿಣ ಅಮೆರಿಕದಲ್ಲಿ ಅಪರೂಪದ ಹಿಮಪಾತ; ವೈರುಧ್ಯಗಳ ಚಿತ್ರನೋಟ

ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು, ದಕ್ಷಿಣ ಅಮೆರಿಕದಲ್ಲಿ ಅಪರೂಪದ ಹಿಮಪಾತ; ವೈರುಧ್ಯಗಳ ಚಿತ್ರನೋಟ

ಪಶ್ಚಿಮ ಅಮೆರಿಕದ ಕ್ಯಾಲಿಫೋರ್ನಿಯಾ ಅಭೂತಪೂರ್ವ ಕಾಡ್ಗಿಚ್ಚಿನ ವಿರುದ್ಧ ಹೋರಾಡುತ್ತಿದ್ದರೆ, ದೇಶದ ದಕ್ಷಿಣ ಭಾಗಗಳು ಹವಾಮಾನಕ್ಕೆ ವ್ಯತಿರಿಕ್ತವಾಗಿ ಅಪರೂಪದ ಹಿಮ ಬಿರುಗಾಳಿಗೆ ತತ್ತರಿಸಿವೆ. ಈ ವೈರುಧ್ಯಗಳ ಚಿತ್ರನೋಟ ಇಲ್ಲಿದೆ. 

ಅಮೆರಿಕ ಸದ್ಯ ಎರಡು ವಿಪರೀತ ವಿಕೋಪಗಳನ್ನು ಎದುರಿಸುತ್ತಿದೆ. ಪಶ್ಚಿಮ ಅಮೆರಿಕದ ಕ್ಯಾಲಿಫೋರ್ನಿಯಾ ಅಭೂತಪೂರ್ವ ಕಾಡ್ಗಿಚ್ಚಿನ ವಿರುದ್ಧ ಹೋರಾಡುತ್ತಿದೆ. ಈ ಕಾಡ್ಗಿಚ್ಚಿನ ಪರಿಣಾಮ ಭಾರಿ ನಾಶ ನಷ್ಟ ಸಂಭವಿಸಿದೆ. ಇನ್ನೊಂದೆಡೆ, ಅಮೆರಿಕದ ದಕ್ಷಿಣ ಭಾಗಗಳಲ್ಲಿ ಹವಾಮಾನಕ್ಕೆ ವ್ಯತಿರಿಕ್ತವಾಗಿ ಅಪರೂಪದ ಹಿಮ ಬಿರುಗಾಳಿಗೆ ಜನ ತತ್ತರಿಸಿದ್ದಾರೆ. ಈ ವೈರುಧ್ಯದ ಚಿತ್ರನೋಟ ಮತ್ತು ವಿವರ ಇಲ್ಲಿದೆ.
icon

(1 / 13)

ಕ್ಯಾಲಿಫೋರ್ನಿಯಾದ ಕಾಡ್ಗಿಚ್ಚು ಪಾಲಿಸೇಡ್ಸ್ ಫೈರ್ ಲಾಸ್ ಏಂಜಲೀಸ್‌ನ ಪೆಸಿಫಿಕ್ ಪಾಲಿಸೇಡ್ಸ್ ನೆರೆಹೊರೆಯಲ್ಲಿ ವಾಹನಗಳು ಮತ್ತು ಸುತ್ತಮುತ್ತಲಿನ ಕಟ್ಟಡ, ಮರಗಿಡಗಳನ್ನು ಸುಟ್ಡು ಕರಕಲಾಗಿಸಿತು. ಜನವರಿ 7 ರ ದೃಶ್ಯ. 
icon

(2 / 13)

(AP)

ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಪೆಸಿಫಿಕ್ ಪಾಲಿಸೇಡ್ಸ್ ನೆರೆಹೊರೆಯಲ್ಲಿ ಪಾಲಿಸೇಡ್ಸ್ ಬೆಂಕಿಗೆ ಸುಟ್ಟುಕರಲಾದ ವಾಹನಗಳ ನೋಟ. ಜನವರಿ 10ರ ಚಿತ್ರ
icon

(3 / 13)

(REUTERS)

ಲಾಸ್ ಏಂಜಲೀಸ್‌ನಲ್ಲಿರುವ ಪೆಸಿಫಿಕ್ ಪಾಲಿಸೇಡ್ಸ್ ನೆರೆಹೊರೆಯನ್ನು ಕಾಡ್ಗಿಚ್ಚು ಸುಟ್ಟುಹಾಕಿದೆ. ಆ ಪ್ರದೇಶದ ವೈಮಾನಿಕ ನೋಟ ಇದು.
icon

(4 / 13)

ಲಾಸ್ ಏಂಜಲೀಸ್ ಕಾಳ್ಗಿಚ್ಚು ಕಾರಣ ಐಷಾರಾಮಿ ಗುಡ್ಡಗಾಡು ಕರಾವಳಿ ಮತ್ತು ನೆರೆಹೊರೆಯ ಪ್ರದೇಶಗಳನ್ನು ನಾಶಮಾಡಿದೆ. ಚಿತ್ರದಲ್ಲಿ ಪಾಲಿಸೇಡ್ಸ್ ಬೆಂಕಿಯಿಂದ ಸುಟ್ಟುಹೋದ ಮನೆಗಳು ಚಿತ್ರಣವನ್ನು ಕಾಣಬಹುದು. ಇದು ಜನವರಿ 10ರ ದೃಶ್ಯ.
icon

(5 / 13)

(Getty Images via AFP)

ಲಾಸ್ ಏಂಜಲೀಸ್‌ನ ಐಷಾರಾಮಿ ಪ್ರದೇಶಗಳಲ್ಲಿ ಉರಿಯುತ್ತಿರುವ ಬೆಂಕಿಯು ಸುಮಾರು 12,000ಕ್ಕೂ ಹೆಚ್ಚು ಕಟ್ಟಡಗಳನ್ನು ಸುಟ್ಟುಬೂದಿ ಮಾಡಿದ್ದಲ್ಲದೆ, ಮರಗಿಡಗಳನ್ನೂ ಸುಟ್ಟುಹಾಕಿತು. ಈ ದುರಂತದಲ್ಲಿ ಕನಿಷ್ಠ 11 ಜನ ಮೃತಪಟ್ಟಿದ್ದಾರೆ. ಕಾಡ್ಗಿಚ್ಚು ಸುಟ್ಟ ನಂತರ ಸುಡುಗಾಡಿನಂತಾದ ಪ್ರದೇಶದ ಒಂದು ನೋಟ.
icon

(6 / 13)

'ಸಾಂತಾ ಅನಾ' ಎಂಬ ಒಣ ಚಂಡಮಾರುತದಿಂದ ಮಂಗಳವಾರ ಕಾಡ್ಗಿಚ್ಚು ಹರಡಲಾರಂಭಿಸಿತು. ಚಿತ್ರದಲ್ಲಿ ಪೆಸಿಫಿಕ್ ಪಾಲಿಸೇಡ್ಸ್ ನೆರೆಹೊರೆಯಲ್ಲಿ ಪಾಲಿಸೇಡ್ಸ್ ಬೆಂಕಿ ಅನಾಹುತದ ಬಳಿಕ ಪೊಲೀಸ್ ಹೆಲಿಕಾಪ್ಟರ್ ಸುಟ್ಟ ಪ್ರದೇಶಗಳಲ್ಲಿ ಹಾರಾಟ ನಡೆಸಿ ಸಂತ್ರಸ್ತರ ರಕ್ಷಣಾಕಾರ್ಯ ನಡೆಸಿದ ದೃಶ್ಯ ಕಾಣಬಹುದು. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿ ಪಾಲಿಸೇಡ್ಸ್ ಬೆಂಕಿ ಇನ್ನೂ ನಂದಿಲ್ಲ. ಅದರ ಹೊಗೆ ದೂರದ ತನಕವೂ ಕಾಣುತ್ತಿದೆ.
icon

(7 / 13)

ಕ್ಯಾಲಿಫೋರ್ನಿಯಾದ ಕಾಳ್ಗಿಚ್ಚಿಗೆ ಸಿಲುಕಿ ಸಂಪೂರ್ಣ ನಾಶವಾದ ಕಟ್ಟಡದ ಅವಶೇಷ. ಜನವರಿ 10ರ ಚಿತ್ರ ಇದು.
icon

(8 / 13)

ಹಿಮಚಂಡಮಾರುತದ ಪ್ರಭಾವದಿಂದಾಗಿ ಗಟರ್‌ನಲ್ಲಿ ಹರಿಯತ್ತಿದ್ದ ನೀರು ಮಂಜುಗಡ್ಡೆಯಂತಾಗಿದೆ. ಇದು ಅಟ್ಲಾಂಟಾ, ಜಾರ್ಜಿಯಾದಲ್ಲಿ ಜನವರಿ 10ರಂದು ಕಂಡುಬಂದ ದೃಶ್ಯ.
icon

(9 / 13)

ಹಿಮಚಂಡಮಾರುತದ ಪ್ರಭಾವದಿಂದಾಗಿ ಗಟರ್‌ನಲ್ಲಿ ಹರಿಯತ್ತಿದ್ದ ನೀರು ಮಂಜುಗಡ್ಡೆಯಂತಾಗಿದೆ. ಇದು ಅಟ್ಲಾಂಟಾ, ಜಾರ್ಜಿಯಾದಲ್ಲಿ ಜನವರಿ 10ರಂದು ಕಂಡುಬಂದ ದೃಶ್ಯ.

(Getty Images via AFP)

ಚಳಿಗಾಲದ ಪ್ರಬಲ ಚಂಡಮಾರುತವು ಟೆಕ್ಸಾಸ್ ಮತ್ತು ಒಕ್ಲಹೋಮಾದ ಬಹುಪಾಲು ಪ್ರದೇಶವನ್ನು ಹಿಮದ ಹೊದಿಕೆಯೊಂದಿಗೆ ಮುಚ್ಚಿಬಿಟ್ಟಿತು. ಜನವರಿ 10 ರಂದು ಹಿಮಪಾತದ ನಂತರ ಅಟ್ಲಾಂಟಾದ ರಸ್ತೆಯೊಂದ ದೃಶ್ಯ ಹೀಗಿತ್ತು
icon

(10 / 13)

ಲೂಯಿಸಿಯಾನ, ಮಿಸ್ಸಿಸ್ಸಿಪ್ಪಿ, ಅಲಬಾಮಾ ಮತ್ತು ಜಾರ್ಜಿಯಾದಲ್ಲಿ ಹಿಮಚಂಡಮಾರುತ ಜನಜೀವನವನ್ನು ಸಂಕಷ್ಟಕ್ಕೀಡುಮಾಡಿದೆ. ಅಟ್ಲಾಂಟಾದ ಕೆಲವು ಭಾಗಗಳಲ್ಲಿ ದಕ್ಷಿಣ ಕೆರೊಲಿನಾ ಮತ್ತು ಉತ್ತರ ಕೆರೊಲಿನಾದಲ್ಲಿ ಬಿದ್ದ ಹಿಮ ಮತ್ತು ಹಿಮವು ಘನೀಕರಿಸುವ ಮಳೆಯಾಗಿ ಬದಲಾಗಿದೆ ಎಂದು ವರದಿ ಹೇಳಿದೆ.
icon

(11 / 13)

ಟೆಕ್ಸಾಸ್, ಒಕ್ಲಹೋಮ, ಲೂಯಿಸಿಯಾನ, ಮಿಸ್ಸಿಸ್ಸಿಪ್ಪಿ, ಅಲಬಾಮಾ ಮತ್ತು ಜಾರ್ಜಿಯಾವನ್ನು ದಾಟಿದ ಹಿಮಪಾತವು ಶುಕ್ರವಾರ ರಾತ್ರಿ ವರ್ಜೀನಿಯಾದ ರಿಚ್ಮಂಡ್‌ಗೆ ತಲುಪಲಿದೆ. ಚಿತ್ರದಲ್ಲಿ ಅಟ್ಲಾಂಟಾ ನಿವಾಸಿಗಳು ಹಿಮದ ಚೆಂಡು ಎಸೆದು ಸಂಭ್ರಮಿಸಿದ ದೃಶ್ಯ ಕಾಣಬಹುದು.
icon

(12 / 13)

ಜಾರ್ಜಿಯಾದ ಅಟ್ಲಾಂಟಾದಲ್ಲಿ ಜನವರಿ 10 ರಂದು ಹಿಮಪಾತದ ನಂತರ ಅಟ್ಲಾಂಟಾದ ಕೆಲವು ಭಾಗಗಳನ್ನು ಹಿಮ ಆವರಿಸಿದೆ.
icon

(13 / 13)

ಇತರ ಗ್ಯಾಲರಿಗಳು