Homemade Shampoo: ಕೂದಲು ಉದುರುವುದು ನಿಂತಿಲ್ವೇ? ಮನೆಯಲ್ಲಿಯೇ ಶಾಂಪೂ ಮಾಡಿ ಬಳಸಿ
- DIY Homemade Shampoo: ನೀವು ದುಬಾರಿ ಹಣ ಕೊಟ್ಟು ಖರೀದಿಸಿದ ಶಾಂಪೂ ಹಾಕಿದರೂ, ನಿಮ್ಮ ಕೂದಲು ಉದುರುತ್ತಿವೆಯೇ? ತಿಂಗಳಿಗೊಂದು ಶಾಂಪೂ ಬದಲಾಯಿಸಿದರೂ ನಿಮಗೆ ಯಾವುದರಿಂದಲೂ ಉತ್ತಮ ಫಲಿತಾಂಶ ಸಿಕ್ಕಿಲ್ಲವೇ? ಹಾಗಾದರೆ, ಯಾವುದೇ ರಾಸಾಯನಿಕಗಳಿಲ್ಲದೆ ನೀವೇ ಶಾಂಪೂ ತಯಾರಿಸಬಹುದು.

(1 / 7)
ಕೂದಲು ಉದುರುವುದನ್ನು ತಡೆಯಲು ನೀವು ವಿವಿಧ ಶ್ಯಾಂಪೂಗಳು ಅಥವಾ ತೈಲಗಳನ್ನು ಪ್ರಯತ್ನಿಸಿದರೂ, ನಿಮ್ಮ ಕೂದಲಿಗೆ ವಿಶೇಷ ಕಾಳಜಿಯ ಅಗತ್ಯವಿದೆ. ನೈಸರ್ಗಿಕ ಶ್ಯಾಂಪೂಗಳು ನಿಮ್ಮ ಕೂದಲಿಗೆ ಒಳ್ಳೆಯದು. ಅದು ಕೂದಲಿಗೆ ಪೋಷಣೆ ನೀಡುತ್ತವೆ.
(2 / 7)
ಅಂಗಡಿಯಿಂದ ನೀವು ಶಾಂಪೂ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಸ್ವಂತ ಶಾಂಪೂವನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದು ಎಂಬುದು ಇಲ್ಲಿದೆ.
(3 / 7)
ಈ ವಿಶೇಷ ಶಾಂಪೂ ತಯಾರಿಸಲು ನಿಮಗೆ ನೊರೆಕ್ಕಾಯಿ(Soapberries ಅಥವಾ ಅಂಟ್ಲುಕಾಯಿ) ಮತ್ತು ದಾಸವಾಳದ ಹೂವುಗಳು ಬೇಕಾಗುತ್ತವೆ.
(4 / 7)
ನೊರೆಕಾಯಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಅವುಗಳಿಂದ ಬೀಜಗಳನ್ನು ಬೇರ್ಪಡಿಸಿ, ನುಣ್ಣಗೆ ರುಬ್ಬಿಕೊಳ್ಳಿ.
(5 / 7)
ಇದರೊಂದಿಗೆ ದಾಸವಾಳದ ಹೂವುಗಳನ್ನು ಕೂಡಾ ಪೇಸ್ಟ್ ಮಾಡಿ. ಈಗ ಈ ಎರಡು ಪೇಸ್ಟ್‌ಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಶಾಂಪೂ ಸಿದ್ಧವಾಗುತ್ತದೆ.
(6 / 7)
ಈ ಮಿಶ್ರಣವನ್ನು ಶಾಂಪೂ ಆಗಿ ಬಳಸಿ. ಇದರಲ್ಲಿ ನೊರೆ ಸ್ವಲ್ಪ ಕಡಿಮೆ ಬರಬಹುದು. ಆದರೆ ಇದು ತಲೆಯನ್ನು ಸ್ವಚ್ಛಗೊಳಿಸುತ್ತದೆ.
ಇತರ ಗ್ಯಾಲರಿಗಳು