ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿದ ಅಮೆರಿಕ ಉಪಾಧ್ಯಕ್ಷ ಪತ್ನಿ ಉಷಾ ವ್ಯಾನ್ಸ್; ಪೈಜಾ, ಕುರ್ತಾದೊಂದಿಗೆ ಮಿಂಚಿದ ಮಕ್ಕಳು
- ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಪತ್ನಿ ಉಷಾ ಅವರೊಂದಿಗೆ ಭಾರತಕ್ಕೆ ಆಗಮಿಸಿದ್ದು, ಮೊದಲ ದಿನವೇ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
- ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಪತ್ನಿ ಉಷಾ ಅವರೊಂದಿಗೆ ಭಾರತಕ್ಕೆ ಆಗಮಿಸಿದ್ದು, ಮೊದಲ ದಿನವೇ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
(1 / 8)
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ತಮ್ಮ ನಾಲ್ಕು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿದ್ದಾರೆ. ಅವರ ಪತ್ನಿ ಉಷಾ ವ್ಯಾನ್ಸ್ ಮತ್ತು ಮಕ್ಕಳೂ ಭಾರತಕ್ಕೆ ಬಂದಿದ್ದಾರೆ. ಆದರೆ, ಪತ್ನಿ ಮತ್ತು ಮಕ್ಕಳು ಧರಿಸಿದ ಉಡುಪು ಎಲ್ಲರ ಗಮನ ಸೆಳೆದಿದೆ.
(ANI Video Grab)(2 / 8)
ಭಾರತೀಯ-ಅಮೆರಿಕನ್ ಸೆಕೆಂಡ್ ಲೇಡಿ ತಮ್ಮ ಸೊಗಸಾದ ನೋಟದಿಂದ ಗಮನಾರ್ಹ ಪ್ರಭಾವ ಬೀರಿದ್ದಾರೆ. ಅವರು ಸಮಚಿತ್ತ ಮತ್ತು ಆಕರ್ಷಕ ನಡವಳಿಕೆಯನ್ನು ಸುಂದರವಾಗಿ ಪೂರೈಸುವ ಪ್ರಕಾಶಮಾನವಾದ ಕೆಂಪು ಉಡುಪಿನಲ್ಲಿ ಹೆಜ್ಜೆ ಹಾಕಿದ್ದಾರೆ.
(AFP)(3 / 8)
ಉಷಾ ವ್ಯಾನ್ಸ್ ಪವರ್ ಸೂಟ್‌ಗಳು ಮತ್ತು ಸಾಮಾನ್ಯ ಪ್ಯಾಸ್ಟಲ್ ಬಿಟ್ಟು ಸಖತ್ ಬೋಲ್ಡ್ ಆಗಿರುವ ಕೆಂಪು ಬಣ್ಣದ ಉಡುಪಿನಲ್ಲಿ ಮಿಂಚಿದ್ದಾರೆ. ಇದು ಎಲ್ಲರನ್ನೂ ಆಕರ್ಷಿಸಿತು. ಇವರ ಜೊತೆಗೆ ಅವರ ಮಕ್ಕಳ ಉಡುಪೂ ಗಮನ ಸೆಳೆಯಿತು.
( )(4 / 8)
ಹೈ ನೆಕ್‌ಲೈನ್, ಪೆನ್ಸಿಲ್ ಸಿಲೂಯೆಟ್, ಮ್ಯಾಕ್ಸಿ ಲೆಂಥ್ ಹೆಮ್‌ಲೈನ್ ಸ್ಪೀವ್ ಲೆಸ್ ಉಡುಪು ಅವರಿಗೊಂದು ಪರಿಪೂರ್ಣ ಲುಕ್ ನೀಡಿದೆ. ಈಗಿನ ಲೆಟೆಸ್ಟ್ ಟ್ರೆಂಡ್ಗೆ ತಕ್ಕಂತೆ ಸಮಕಾಲೀನ ಶೈಲಿಯನ್ನು ಮಿಶ್ರಣಗೊಳಿಸಿದ್ದು ಇಲ್ಲಿ ಪ್ರಮುಖ ಹೈಲೈಟ್ ಆಗಿದೆ.
(via REUTERS)(5 / 8)
ಅವರ ಮಕ್ಕಳು ಭಾರತೀಯ ಸಾಂಪ್ರದಾಯಿಕ ಉಡುಗೆ ತೊಟ್ಟು ಮಿಂಚಿದರು. ಇವಾನ್, ವಿವೇಕ್, ಪುಟ್ಟ ಮಾರಿಬೆಲ್ ಎಲ್ಲರೂ ಭಾರತೀಯ ಉಡುಪು ಧರಿಸಿದ್ದರು. ಮಕ್ಕಳು ಕ್ಲಾಸಿಕ್ ಕುರ್ತಾ-ಪೈಜಾಮಾಗಳಲ್ಲಿ ಆಕರ್ಷಕವಾದ ಕಾಣುತ್ತಿದ್ದರು.
(PTI)(6 / 8)
ಏತನ್ಮಧ್ಯೆ, ಮಾರಿಬೆಲ್ ಅನಾರ್ಕಲಿ ಶೈಲಿಯ ಸೂಟ್‌ನ ಮಿನಿ ಆವೃತ್ತಿಯಲ್ಲಿ ಎಲ್ಲರ ಗಮನ ಸೆಳೆದರು. ಇಡೀ ಕುಟುಂಬ ಸಾಂಸ್ಕೃತಿಕ ಉಡುಪುಗಳೊಂದಿಗೆ ಭಾರತೀಯರ ಗಮನ ಸೆಳೆದಿದ್ದಾರೆ. ಇವರ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
(via REUTERS)(7 / 8)
ಉಷಾ ವ್ಯಾನ್ಸ್ ಒಬ್ಬ ನಿಪುಣ ವಕೀಲೆ ಮತ್ತು ಅಮೆರಿಕಾದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಪತ್ನಿ. ಇವರು ಭಾರತದ ಮೂಲದವರು. ಉಷಾ ಅವರ ಪೋಷಕರು ಬಹಳ ಹಿಂದೆಯೇ ಅಮೆರಿಕದಲ್ಲಿ ನೆಲೆಸಿದ್ದರು. ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವಡ್ಲೂರು ಗ್ರಾಮದವರು.
(Akshardham temple)ಇತರ ಗ್ಯಾಲರಿಗಳು