ಮಹಾ ಕುಂಭ ಮೇಳ ಕಾಲ್ತುಳಿತ ದುರಂತ; ಕರ್ನಾಟಕದ ನಾಲ್ವರಿಗೆ ಗಾಯ, ಬೆಳಗಾವಿಯ ಇನ್ನೂ ಐವರು ಭಕ್ತರು ನಾಪತ್ತೆ?
ಮಹಾಕುಂಭದಲ್ಲಿ ಮೌನಿ ಅಮಾವಾಸ್ಯೆ ಸ್ನಾನಕ್ಕೆ ಸ್ವಲ್ಪ ಮೊದಲು ಕಾಲ್ತುಳಿತ ಸಂಭವಿಸಿದ್ದು, 15 ಭಕ್ತರು ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದು, ಈ ಪೈಕಿ ಕರ್ನಾಟಕದವರೂ ಇದ್ದಾರೆ.
(1 / 9)
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ 15 ಮಂದಿ ಮೃತಪಟ್ಟಿಟ್ಟು, ನೂರಾರು ಯಾತ್ರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
(2 / 9)
ಮೌನಿ ಅಮಾವಾಸ್ಯೆ ನಿಮಿತ್ತ ಸ್ನಾನಕ್ಕೆ ತೆರಳಿದ ವೇಳೆ ನೂಕುನುಗ್ಗಲು ಉಂಟಾಗಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಗಾಯಗೊಂಡ ಯಾತ್ರಿಕರ ಪೈಕಿ ಕರ್ನಾಟಕದ ನಾಲ್ವರು ಭಕ್ತರಿದ್ದಾರೆ ಎನ್ನಲಾಗಿದೆ. ಮೂರು ದಿನಗಳ ಹಿಂದೆ ಬೆಳಗಾವಿಯ 500ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಗ್‌ರಾಜ್‌ಗೆ ತೆರಳಿದ್ದರು ಎನ್ನಲಾಗಿದೆ.
(3 / 9)
ಬೆಳಗಾವಿಯ ಇಬ್ಬರು ಮಹಿಳೆಯರು, ಇಬ್ಬರು ಬಾಲಕಿಯರು ಗಾಯಗೊಂಡಿದ್ದಾರೆ ಎಂದು ಎನ್ನಲಾಗಿದೆ. ಇಬ್ಬರು ಮಹಿಳೆಯರು ಬಿಜೆಪಿ ಕಾರ್ಯಕರ್ತರು ಎಂದು ತಿಳಿದು ಬಂದಿದೆ. ಅವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
(4 / 9)
ವಡಗಾಂವ್ ಉಪನಗರದ ನಿವಾಸಿಗಳಾದ ಬಿಜೆಪಿ ಕಾರ್ಯಕರ್ತರಾದ ಸರೋಜಿನಿ ನಡುವಿನಹಳ್ಳಿ ಮತ್ತು ಕಾಂಚನ್ ಘೋರ್ಪಡೆ, ಇಬ್ಬರು ಬಾಲಕಿಯರಾದ ಮೇಘಾ ಮತ್ತು ಜ್ಯೋತಿ ಎಂಬವರು ಕಾಲ್ತುಳಿತದಲ್ಲಿ ಗಾಯಗಳೊಂದಿಗೆ ಪಾರಾಗಿದ್ದು, ಕಣ್ಣೀರು ಹಾಕಿದ್ದಾರೆ.
(5 / 9)
ಕಳೆದ ವಾರದಿಂದ ಬೆಳಗಾವಿಯ ಜನರು ವಿವಿಧ ಗುಂಪುಗಳಾಗಿ ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದಾರೆ. ಕೆಲವರು ರೈಲು ಮತ್ತು ವಿಮಾನದಲ್ಲಿ ಪ್ರಯಾಣಿಸಿದರೆ, ಕೆಲವರು ಮಿನಿ ಬಸ್ ಮತ್ತು ಇತರ ವಾಹನಗಳಲ್ಲಿ ಹೊರಟಿದ್ದಾರೆ.
(6 / 9)
ಕುಂಭಮೇಳಕ್ಕೆ ತೆರಳಿರುವ ಬೆಳಗಾವಿಯ ಇನ್ನೂ 5 ಭಕ್ತರು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಕುಟುಂಬದವರು ಡಿಸಿ ಕಚೇರಿಗೆ ಭೇಟಿ ನೀಡುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ.
(7 / 9)
ಕಾಲ್ತುಳಿತ ಪ್ರಕರಣದ ನಂತರ ಅಮೃತ ಸ್ನಾನವನ್ನು ರದ್ದುಗೊಳಿಸಲಾಯಿತು. ಶ್ರೀ ಪಂಚಾಯತ್ ಅಖಾರಾ ಮಹಾನಿರ್ವಾಣಿಯ ಸಾಧುಗಳು 'ಮೌನಿ ಅಮಾವಾಸ್ಯೆ ಅಮೃತ ಸ್ನಾನ' ಮಾಡದೆ ಮರಳಿದರು.
(8 / 9)
ಕಾಲ್ತುಳಿತದ ನಂತರ ಗಾಯಗೊಂಡವರನ್ನು ಕರೆತಂದ ಆಸ್ಪತ್ರೆಗಳಲ್ಲಿಯೂ ಜನರು ಕಿಕ್ಕಿರಿದಿದ್ದರು. ಅನೇಕರು ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಆಸ್ಪತ್ರೆಗಳತ್ತ ಹೆಜ್ಜೆ ಹಾಕಿದ್ದಾರೆ. ಆದರೆ, ಯಾರಿಗೂ ಆಸ್ಪತ್ರೆಗಳ ಒಳಗೆ ಪ್ರವೇಶಿಸಲು ನೀಡಲಿಲ್ಲ.
ಇತರ ಗ್ಯಾಲರಿಗಳು