Sirsi News:ಕೊನೆಗೂ ಗಂಗೆ ಹರಿಸಿದ ಶಿರಸಿ ಗೌರಿ, ಮಹಿಳಾ ದಿನಕ್ಕೂ ಮುನ್ನಾ ಗೌರವ ಹೆಚ್ಚಿಸಿದ ಗಟ್ಟಿಗಿತ್ತಿ, ಕಳವೆ ಹಂಚಿಕೊಂಡರು ಖುಷಿ photos
- ಇವರು ಶಿರಸಿ ಗೌರಿ ನಾಯ್ಕ. ಬಾವಿ ತೋಡುವುದು, ನೀರು ಕೊಡುವುದು ಇವರ ಶ್ರದ್ದೆಯ ಕಾಯಕ. ಶಿರಸಿಯಲ್ಲಿ ಅಂಗನವಾಡಿ ಮಕ್ಕಳ ಜಲದಾಹಕ್ಕೆ ಬಾವಿ ತೆಗೆಯಲು ಹೋದ ಗೌರಿ ಅವರಿಗೆ ಸರ್ಕಾರದಿಂದಲೇ ಅಡ್ಡಿ. ತಾವು ನೀರು ಕೊಡರು, ನೀರು ಕೊಡುವವರನ್ನು ಬಿಡರು ಎನ್ನುವ ನೀತಿ. ಇದು ಸದ್ದು ಮಾಡಿ ಕೊನೆಗೂ ಗೌರಿ ನಾಯ್ಕ ಬಾವಿ ತೋಡಿ ನೀರು ತಂದಿದ್ದಾರೆ. ಅವರ ಶ್ರಮದ ಚಿತ್ರ ನೋಟ ಇಲ್ಲಿದೆ.

(1 / 6)
ಶಿರಸಿಯ ಗೌರಿ ನಾಯ್ಕ ಅವರು ಅಂಗನವಾಡಿ ಮಕ್ಕಳಿಗೆಂದು ಬಾವಿ ತೆಗೆದು ನೀರು ಹರಿಸಲು ಮುಂದಾದರು. ಆಗಲೇ ಅರ್ಧ ಬಾವಿ ತೆಗೆದಾಗ ಅಧಿಕಾರಿಗಳು ತಗಾದೆ ತೆಗೆದರು.(ಶಿವಾನಂದ ಕಳವೆ)
(2 / 6)
ಸಾಕಷ್ಟು ಪರ ವಿರೋಧದ ನಡುವೆ ಒಂದೆರಡು ದಿನ ಬಾವಿ ತೆಗೆಯುವ ಕೆಲಸ ನಿಂತಿತು. ಕೊನೆಗೆ ಅಧಿಕಾರಿಗಳು ಅನುಮತಿ ನೀಡಿದರು. ಗೌರಿ ನಾಯ್ಕ ಮತ್ತೆ ಕಾಯಕ ಶುರು ಮಾಡಿದರು.
(3 / 6)
ಸತತ ಹದಿನೈದು ದಿನದ ಕಾಲ ತಾವೇ ಮಣ್ಣು ಅಗೆದು, ಮೇಲಕ್ಕೆ ಹಾಕಿ ಅಚ್ಚುಕಟ್ಟಾಗಿ ಬಾವಿಯನ್ನೂ ಅಣಿಗೊಳಿಸಿದರು. ಇದನ್ನು ಹಲವಾರು ವರ್ಷಗಳಿಂದಲೂ ಗೌರಿ ಅವರು ಮಾಡಿಕೊಂಡು ಬರುತ್ತಿದ್ದಾರೆ.
(4 / 6)
ಒಂದು ದಿನವೂ ವಿರಾಮ ನೀಡದೇ ಸತತವಾಗಿ ಮಣ್ಣುತೆಗೆದು ಬಾವಿಯನ್ನು ರೂಪಿಸಿದ ಗೌರಿ ನಾಯ್ಕ ಅವರ ನಿಜ ಕಾಯಕಕ್ಕೆ ಫಲ ಸಿಕ್ಕಿದೆ. ಬಾವಿಯಲ್ಲಿ ನೀರು ಬಂದಿದೆ.
(5 / 6)
ಗಂಗೆಯನ್ನು ಹರಿಸಲೆಂದು ಗೌರಿ ನಾಯ್ಕ ಅವರು ಪಡುತ್ತಿರುವ ಶ್ರಮ ಅಷ್ಟಿಷ್ಟಲ್ಲ. ಇದಕ್ಕೆ ಅವರು ಅಭಿನಂದನಾರ್ಹರು. ಇಡೀ ಘಟನಾವಳಿಗಳನ್ನು ವೀಕ್ಷಿಸಿ ಗೌರಿ ನಾಯ್ಕ ಪರ ನಿಂತರ ಪರಿಸರ ಹೋರಾಟಗಾರ, ಲೇಖಕ ಶಿವಾನಂದ ಕಳವೆ ಅವರು ಖುಷಿಯಿಂದಲೇ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.ಇದಕ್ಕಿಂತ ಖುಷಿ ಬೇರೆಯಿಲ್ಲ. ಶಿರಸಿ ಗಣೇಶ ನಗರದ ಅಂಗನವಾಡಿ ಬಾವಿಯಲ್ಲಿ ನೀರು ಬಂತು ಎಂದು ಗೌರಮ್ಮನ ಮಗ ವಿನಾಯಕ ಈಗ ಫೋನ್ ಮಾಡಿ ಹೇಳಿದರು. ಒಂಟಿಯಾಗಿ ಬಾವಿ ತೋಡುವ ಮೂಲಕ ನಾಡಿನ ಜನರಿಗೆ ಚಿರ ಪರಿಚಿತರಾದ ಗೌರಮ್ಮನ ಹುಡುಕಿ ಈಗ ಗಂಗಮ್ಮ ಬಂದಳು!ಸಾಧಕಿಗೆ ಶರಣು ಶರಣು
ಇತರ ಗ್ಯಾಲರಿಗಳು