Vadhu Serial: ಲಾಯರ್ ಹಾಗೂ ಹೆಂಡತಿ ಪ್ರಿಯಾಂಕಾ ನಡುವೆ ಸಿಲುಕಿ ಒದ್ದಾಡಿದ ಸಾರ್ಥಕ್; ಆತ್ಮಗೌರವ ಅಡ ಇಡಲ್ಲ ಎಂದ ವಧು
- Vadhu Serial: ವಧು ಧಾರಾವಾಹಿಯಲ್ಲಿ ಸಾರ್ಥಕ್ ತುಂಬಾ ಕಷ್ಟಪಟ್ಟು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲು ನೋಡುತ್ತಿದ್ದಾನೆ. ಆದರೆ ಸಾಧ್ಯ ಆಗುತ್ತಿಲ್ಲ.
- Vadhu Serial: ವಧು ಧಾರಾವಾಹಿಯಲ್ಲಿ ಸಾರ್ಥಕ್ ತುಂಬಾ ಕಷ್ಟಪಟ್ಟು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರಲು ನೋಡುತ್ತಿದ್ದಾನೆ. ಆದರೆ ಸಾಧ್ಯ ಆಗುತ್ತಿಲ್ಲ.
(1 / 8)
ಪ್ರಿಯಾಂಕಾ, ಸಾರ್ಥಕ್ ಬಳಿ ನನಗೆ ಡಿವೋರ್ಸ್ ಬೇಕು ಎಂದು ಕೇಳಿದ ಕಾರಣಕ್ಕೆ ಅವನು ಲಾಯರ್ ವಧು ಹತ್ತಿರ ಹೋಗುತ್ತಾನೆ.
(Colors Kannada)(2 / 8)
ಪ್ರಿಯಾಂಕಾ ಮತ್ತು ತನ್ನ ನಡುವೆ ಆದ ಕೆಲವು ವಿಚಾರವನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆದರೆ ಪ್ರಿಯಾಂಕಾ ಮಾತ್ರ ತಾಳ್ಮೆ ಇಲ್ಲದ ರೀತಿ ವರ್ತಿಸುತ್ತಾಳೆ.
(Colors Kannada)(3 / 8)
ಡಿವೋರ್ಸ್ ಬೇಕು ಎಂದು ಕೇಳಲು ಹೋದಾಗ ಪ್ರಿಯಾಂಕಾ ಲಾಯರ್ ವಧು ಜತೆ ತುಂಬಾ ಕೆಟ್ಟದಾಗಿ ನಡೆದುಕೊಂಡಿರುತ್ತಾಳೆ.
(Colors Kannada)(4 / 8)
ಅದೇ ವಿಚಾರಕ್ಕೆ ಲಾಯರ್ ವಧು, ತಾನು ಈ ಕೇಸ್ ತೆಗೆದುಕೊಳ್ಳಲ್ಲ ಎಂದು ಹೇಳಿರುತ್ತಾಳೆ. ಆದ್ರೆ ಸಾರ್ಥಕ್ ಈಗಿರುವ ಪರಿಸ್ಥಿತಿಯಲ್ಲಿ ಅವನಿಗೆ ವಧುನೇ ಬೇಕಾಗಿರುತ್ತದೆ.
(Colors Kannada)(5 / 8)
ಹೊರಗಡೆ ಎಲ್ಲೂ ಪ್ರಿಯಾಂಕಾ ಹಾಗೂ ಸಾರ್ಥಕ್ ಮದುವೆ ಮುರಿದು ಬೀಳುವ ವಿಚಾರ ಗೊತ್ತಾಗಬಾರದು ಎಂಬುದು ಅವನ ಕಾಳಜಿ ಆಗಿರುತ್ತದೆ.
(Colors Kannada)(6 / 8)
ಪ್ರಿಯಾಂಕಾ ಮಾತ್ರ ತಾನು ವಧು ಕ್ಷಮೆ ಕೇಳದೆ ಈ ವಿಚಾರದಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳುತ್ತಾಳೆ. ಆ ಮಾತನ್ನು ಕೇಳಿ ಸಾರ್ಥಕ್ ಕಂಗಾಲಾಗುತ್ತಾನೆ.
(Colors Kannada)(7 / 8)
ಯಾಕೆಂದರೆ ಇತ್ತ ಲಾಯರ್ ವಧು ಕೂಡ ತನ್ನ ಮೇಲಿನವರಿಗೆ ಇದೇ ವಿಚಾರವನ್ನು ಹೇಳಿರುತ್ತಾಳೆ. ಪ್ರಿಯಾಂಕಾ ತನ್ನ ಬಳಿ ಸಾರಿ ಕೇಳಿದರೆ ಮಾತ್ರ ಈ ಕೇಸ್ ತೆಗೆದುಕೊಳ್ಳುತ್ತೇನೆ ಎಂದು ಹೇಳಿರುತ್ತಾಳೆ.
(Colors Kannada)ಇತರ ಗ್ಯಾಲರಿಗಳು