ಅಂಡರ್ 19 ಏಷ್ಯಾಕಪ್​ನಲ್ಲಿ ಅಬ್ಬರಿಸಿದ ಭಾರತದ ಟಾಪ್​-5 ಆಟಗಾರರು; ಹರಾಜಿನಲ್ಲಿ 1.10 ಕೋಟಿ ಪಡೆದ ವೈಭವ್​ಗಿಲ್ಲ ಅಗ್ರಸ್ಥಾನ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಡರ್ 19 ಏಷ್ಯಾಕಪ್​ನಲ್ಲಿ ಅಬ್ಬರಿಸಿದ ಭಾರತದ ಟಾಪ್​-5 ಆಟಗಾರರು; ಹರಾಜಿನಲ್ಲಿ 1.10 ಕೋಟಿ ಪಡೆದ ವೈಭವ್​ಗಿಲ್ಲ ಅಗ್ರಸ್ಥಾನ

ಅಂಡರ್ 19 ಏಷ್ಯಾಕಪ್​ನಲ್ಲಿ ಅಬ್ಬರಿಸಿದ ಭಾರತದ ಟಾಪ್​-5 ಆಟಗಾರರು; ಹರಾಜಿನಲ್ಲಿ 1.10 ಕೋಟಿ ಪಡೆದ ವೈಭವ್​ಗಿಲ್ಲ ಅಗ್ರಸ್ಥಾನ

  • U19 Asia Cup 2024: ಪ್ರಸಕ್ತ ಸಾಲಿನ ಅಂಡರ್​​-19 ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಭಾರತದ ಕಿರಿಯ ಆಟಗಾರರ ಬ್ಯಾಟಿಂಗ್-ಬೌಲಿಂಗ್​​ನಲ್ಲಿ ಅಬ್ಬರಿಸಿ ತಂಡವನ್ನು ಫೈನಲ್​ ತನಕ ಕೊಂಡೊಯ್ದಿದ್ದಾರೆ.

ಅಂಡರ್​​-19 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿದೆ. ಡಿಸೆಂಬರ್ 8ರಂದು ನಡೆಯುವ ಫೈನಲ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಾಟ ನಡೆಸಲಿದೆ. ಆದರೆ ಪ್ರಶಸ್ತಿ ಸುತ್ತಿನ ತನಕ ಭಾರತ ತಂಡವನ್ನು ಕೊಂಡೊಯ್ದ ಟಾಪ್-5 ಆಟಗಾರರು ಯಾರು? ಇಲ್ಲಿದೆ.
icon

(1 / 6)

ಆಯುಷ್ ಮಾತ್ರೆ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದಾರೆ. 4 ಇನ್ನಿಂಗ್ಸ್​ಗಳಲ್ಲಿ ಎರಡು ಅರ್ಧಶತಕ 58.33 ಸರಾಸರಿಯಲ್ಲಿ 175 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 143.44 ಇದೆ. 17 ವರ್ಷದ ಆಯುಷ್ ಅಜೇಯ 67 ರನ್ ಗಳಿಸಿದ್ದು ಅವರ ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ ಆಗಿದೆ. ಬೌಲಿಂಗ್​​​ನಲ್ಲೂ 5 ವಿಕೆಟ್ ಪಡೆದಿದ್ದಾರೆ.
icon

(2 / 6)

ಫೈನಲ್ ಪಂದ್ಯಕ್ಕೂ ಮುನ್ನ 13ರ ಹರೆಯದ ವೈಭವ್ ಸೂರ್ಯವಂಶಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 4 ಇನ್ನಿಂಗ್ಸ್​​ಗಳಲ್ಲಿ 2 ಅರ್ಧಶತಕ, 55.66 ಸರಾಸರಿಯಲ್ಲಿ 167 ರನ್ ಗಳಿಸಿದ್ದಾರೆ. ಔಟಾಗದೆ 76 ರನ್ ಗಳಿಸಿದ್ದು ಗರಿಷ್ಠ ಸ್ಕೋರ್​​ ಆಗಿದೆ. ಸ್ಟ್ರೈಕ್ ರೇಟ್ 146.49. ವೈಭವ್ ಭಾರತ ಪರ 12 ಸಿಕ್ಸರ್ ಬಾರಿಸಿದ್ದಾರೆ.
icon

(3 / 6)

ನಾಯಕ ಮೊಹಮ್ಮದ್ ಅಮನ್ ಭಾರತದ ಪರ ಮೂರನೇ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಅಮನ್, ಆಯುಷ್ ಮತ್ತು ವೈಭವ್ ಅವರಿಗಿಂತ ಕಡಿಮೆ ಇನ್ನಿಂಗ್ಸ್ ಆಡಿದ್ದಾರೆ. 3 ಇನ್ನಿಂಗ್ಸ್​​ಗಳಲ್ಲಿ 163.00 ಸರಾಸರಿಯಲ್ಲಿ 163 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 87.16. ಅಮನ್ ಭಾರತದ ಪರ ಏಕೈಕ ಶತಕ ಗಳಿಸಿದ ಏಕೈಕ ಬ್ಯಾಟರ್, ಗರಿಷ್ಠ ಸ್ಕೋರ್ 122 ರನ್.
icon

(4 / 6)

ಚೇತನ್ ಶರ್ಮಾ ಈ ವರ್ಷದ ಅಂಡರ್ 19 ಏಷ್ಯಾ ಕಪ್​​ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 3 ಇನ್ನಿಂಗ್ಸ್​​ಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. 34 ರನ್ ಗಳಿಗೆ 3 ವಿಕೆಟ್ ಪಡೆದಿದ್ದು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಚೇತನ್ ಪ್ರತಿ ಓವರ್​​​ಗೆ 3.12 ರನ್ ಬಿಟ್ಟು ಕೊಟ್ಟಿದ್ದಾರೆ.
icon

(5 / 6)

ಫೈನಲ್ ಪಂದ್ಯಕ್ಕೂ ಮುನ್ನ ಯುಧಜಿತ್ ಗುಹಾ ಅಂಡರ್-19 ಏಷ್ಯಾಕಪ್​​​ನಲ್ಲಿ ಭಾರತದ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 4 ಇನ್ನಿಂಗ್ಸ್​​ಗಳಲ್ಲಿ 6 ವಿಕೆಟ್ ಪಡೆದಿದ್ದಾರೆ. 15 ರನ್ ಗಳಿಗೆ 3 ವಿಕೆಟ್ ಪಡೆದಿರುವುದು ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
icon

(6 / 6)

ಇತರ ಗ್ಯಾಲರಿಗಳು