Vaibhav Suryavanshi: ಅಂಡರ್-19 ಏಷ್ಯಾಕಪ್​ನಲ್ಲಿ ವೇಗದ ಅರ್ಧಶತಕ; 13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್​ಗೆ ಸಜ್ಜು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vaibhav Suryavanshi: ಅಂಡರ್-19 ಏಷ್ಯಾಕಪ್​ನಲ್ಲಿ ವೇಗದ ಅರ್ಧಶತಕ; 13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್​ಗೆ ಸಜ್ಜು

Vaibhav Suryavanshi: ಅಂಡರ್-19 ಏಷ್ಯಾಕಪ್​ನಲ್ಲಿ ವೇಗದ ಅರ್ಧಶತಕ; 13 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್​ಗೆ ಸಜ್ಜು

  • Vaibhav Suryavanshi: ಅಂಡರ್-19 ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಐಪಿಎಲ್ 2025 ಮೆಗಾ ಹರಾಜಿನಲ್ಲಿ 1.10 ಕೋಟಿಗೆ ಹರಾಜಾಗುವ ಮೂಲಕ 13ನೇ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾಗಿರುವ ವೈಭವ್ ಸೂರ್ಯವಂಶಿ, ಪ್ರಸಕ್ತ ನಡೆಯುತ್ತಿರುವ ಅಂಡರ್ -19 ಏಷ್ಯಾ ಕಪ್ ಟೂರ್ನಿಯಲ್ಲಿ ಆರ್ಭಟಿಸುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
icon

(1 / 7)

ಅಂಡರ್​-19 ಏಷ್ಯಾ ಕಪ್​​ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್​ನಿಂದಾಗಿ ಗಮನ ಸೆಳೆದಿರುವ ವೈಭವ್, ಸೆಮಿಫೈನಲ್​ನಲ್ಲಿ ವೇಗದ ಅರ್ಧಶತಕ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ. ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಭರ್ಜರಿ ಫಿಫ್ಟಿ ಸಿಡಿಸಿದ್ದ ಸೂರ್ಯವಂಶಿ, ಸೆಮಿಫೈನಲ್​​ನಲ್ಲಿ ವಿನಾಶಕಾರಿ ಬ್ಯಾಟಿಂಗ್​ ನಡೆಸುವ ಮೂಲಕ ದಾಖಲೆಯ ಪುಸ್ತಕದಲ್ಲಿ ಹೆಸರನ್ನು ಸೇರಿಸಿದ್ದಾರೆ.
icon

(2 / 7)

ಪ್ರಸಕ್ತ ಅಂಡರ್​ ಏಷ್ಯಾಕಪ್ ಟೂರ್ನಿಯಲ್ಲಿ ವೈಭವ್ ಕಡಿಮೆ ಎಸೆತದಲ್ಲಿ ಅರ್ಧಶತಕ ಪೂರೈಸಿದ ದಾಖಲೆ ನಿರ್ಮಿಸಿದ್ದಾರೆ. ಇದೇ ವೇಳೆ ವೈಭವ್ ತನ್ನ ಸಹ ಆರಂಭಿಕ ಆಟಗಾರ ಆಯುಷ್ ಮಾತ್ರಾ ದಾಖಲೆಯನ್ನು ಮುರಿದು ವೇಗದ ಅರ್ಧಶತಕ ಸಿಡಿಸಿದ ಆಟಗಾರ ಎನಿಸಿದ್ದಾರೆ.
icon

(3 / 7)

ಶಾರ್ಜಾದಲ್ಲಿ ಶುಕ್ರವಾರ ನಡೆದ ಶ್ರೀಲಂಕಾ ವಿರುದ್ಧದ ಕಿರಿಯರ ಏಷ್ಯಾಕಪ್​​ ಸೆಮೀಸ್​​ನಲ್ಲಿ ವೈಭವ್ ಕೇವಲ 24 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್​​ಗಳ ಸಹಾಯದಿಂದ ಅರ್ಧಶತಕವನ್ನು ಪೂರ್ಣಗೊಳಿಸಿದರು. ಇದು ಈ ವರ್ಷದ ಅಂಡರ್-19 ಏಷ್ಯಾಕಪ್​​ನಲ್ಲಿ ದಾಖಲಾದ ಅತಿ ವೇಗದ ಅರ್ಧಶತಕವಾಗಿದೆ. ಇದರೊಂದಿಗೆ ಜಪಾನ್ ವಿರುದ್ಧ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಆಯುಷ್ ಮಾತ್ರೆ ದಾಖಲೆಯನ್ನು ಪುಡಿಗಟ್ಟಿದ್ದಾರೆ.
icon

(4 / 7)

ಎಮಿರೇಟ್ಸ್ ವಿರುದ್ಧದ ಲೀಗ್​​​ನ ಕೊನೆಯ ಪಂದ್ಯದಲ್ಲಿ, ವೈಭವ್ ವಿನಾಶಕಾರಿ ಅರ್ಧಶತಕ ಸಿಡಿಸಿದ್ದರು. ಈ ಪಂದ್ಯದಲ್ಲಿ ವೈಭವ್ ಕೇವಲ 32 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​​ಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದ್ದರು. ಒಟ್ಟು 46 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿದರು, ಪ್ರಸ್ತುತ ವೈಭವ್ ಯೂತ್ ಏಷ್ಯಾಕಪ್​​​ನಲ್ಲಿ ಸತತ ಎರಡು ಅರ್ಧಶತಕ ಬಾರಿಸಿದ್ದಾರೆ.
icon

(5 / 7)

ವೈಭವ್ ಸೂರ್ಯವಂಶಿ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 1 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಜಪಾನ್ ವಿರುದ್ಧದ 23 ರನ್ ಗಳಿಸಿದ್ದರು.
icon

(6 / 7)

(AP)

ಶ್ರೀಲಂಕಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 36 ಎಸೆತಗಳಲ್ಲಿ 6 ಬೌಂಡರಿ, ಐದು ಸಿಕ್ಸರ್​ ಸಹಿತ 67 ರನ್ ಗಳಿಸಿ ಔಟಾದ ವೈಭವ್ ಸೂರ್ಯವಂಶಿ ಅವರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ 1.1 ಕೋಟಿ ರೂ.ಗೆ ಖರೀದಿಸಿದೆ.
icon

(7 / 7)

ಇತರ ಗ್ಯಾಲರಿಗಳು