Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ ಆಚರಣೆ; ಕಂಡೆ ನಾ ಗೋವಿಂದನ- ಚಿತ್ರನೋಟ
Vaikunta Ekadashi 2025: ಭಾರತದ ಉದ್ದಗಲಕ್ಕೂ ಶ್ರದ್ಧಾಭಕ್ತಿಯ ವೈಕುಂಠ ಏಕಾದಶಿ ಆಚರಣೆ ಸಂಪನ್ನಗೊಂಡಿತು. ತಿರುಮಲ ತಿರುಪತಿ ದೇವಸ್ಥಾನದಿಂದ ಹಿಡಿದು ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದ ತನಕ ಭಕ್ತರು ಶ್ರದ್ಧಾಭಕ್ತಿಯಿಂದ ಕಂಡೆ ನಾ ಗೋವಿಂದನ ಎನ್ನುತ್ತ ಗೋವಿಂದ ನಾಮಸ್ಮರಣೆ ಮಾಡಿ ಪುನೀತರಾದರು. ಆಕರ್ಷಕ ಚಿತ್ರನೋಟ ಹೀಗಿದೆ.
(1 / 8)
Vaikunta Ekadashi 2025: ದಕ್ಷಿಣ ಭಾರತದ ಉದ್ದಗಲಕ್ಕೂ ವೈಕುಂಠ ಏಕಾದಶಿ ನಿಮಿತ್ತ ಶ್ರದ್ಧಾಭಕ್ತಿಯಿಂದ ಗೋವಿಂದ ಸ್ಮರಣೆ ನೆರವೇರಿತು. ಈ ಆಚರಣೆಯ ಆಕರ್ಷಕ ಚಿತ್ರನೋಟ ಮತ್ತು ಮಾಹಿತಿ ಇಲ್ಲಿದೆ. ಇದು ಹೈದರಾಭಾದ್‌ನಲ್ಲಿ ಇಂದು (ಜನವರಿ 10) ನೆರವೇರಿದ ಶ್ರೀವೆಂಕಟೇಶ್ವರ ಸ್ವಾಮಿ ಗರುಡ ವಾಹನ ಸೇವಾ ಮೆರವಣಿಗೆಯ ಒಂದು ನೋಟ. ಶ್ರೀ ವೆಂಕಟೇಶ್ವರ ಸ್ವಾಮಿ ವೇಷಧರಿಸಿದ ವ್ಯಕ್ತಿಯನ್ನು ನೋಡಿ ‘ಕಂಡೆ ನಾ ಗೋವಿಂದ’ ಎನ್ನುತ್ತ ಗೋವಿಂದ ನಾಮಸ್ಮರಣೆ ಮಾಡುತ್ತ ನಮಸ್ಕರಿಸಿದರು
(PTI)(2 / 8)
ಹೈದರಾಬಾದ್‌ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಗರುಡ ವಾಹನ ಸೇವೆಯಲ್ಲಿ ಭಕ್ತರು ಶ್ರದ್ಧಾ ಭಕ್ತಿಯಿಂದ ದೇವರನ್ನು ಸ್ಮರಿಸಿಕೊಂಡರು.
(PTI)(3 / 8)
ಹೈದರಾಬಾದಿನ ಜಿಯಗುಡದಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯಂದು ಭಕ್ತರ ದಂಡೇ ಹರಿದು ಬಂದಿತ್ತು. ಶ್ರೀ ದೇವರ ದರ್ಶನ ಮಾಡಿ, ತಮ್ಮ ತಮ್ಮ ಮೊಬೈಲ್‌ಗಳಲ್ಲಿ ದೇವರ ಫೋಟೋ ಹಿಡಿದಿಟ್ಟುಕೊಂಡರು.
(PTI )(4 / 8)
ಹೈದರಾಬಾದಿನ ಜಿಯಗುಡದಲ್ಲಿರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ವಿಶೇಷ ಪೂಜೆ ಸ್ವೀಕರಿಸಿದ ಶ್ರೀ ವೆಂಕಟೇಶ್ವರಸ್ವಾಮಿ.
(5 / 8)
ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಾಲಯದ ಪೂರ್ವ ಪ್ರವೇಶದ್ವಾರದಲ್ಲಿ 'ವೈಕುಂಠ ಏಕಾದಶಿ' ನಿಮಿತ್ತ ಭಕ್ತರ ದಂಡು ಕಂಡುಬಂತು.
ಇತರ ಗ್ಯಾಲರಿಗಳು