Vaikuntha Ekadashi 2023: ಉಪವಾಸದ ಆಸೆ, ಸ್ಪಂದಿಸದ ದೇಹ; ನಿಮ್ಮ ಪರಿಸ್ಥಿತಿಯೂ ಹೀಗಿದ್ದರೆ ಈ ಕೋಸಂಬರಿಗಳು ನೆರವಾಗಬಹುದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vaikuntha Ekadashi 2023: ಉಪವಾಸದ ಆಸೆ, ಸ್ಪಂದಿಸದ ದೇಹ; ನಿಮ್ಮ ಪರಿಸ್ಥಿತಿಯೂ ಹೀಗಿದ್ದರೆ ಈ ಕೋಸಂಬರಿಗಳು ನೆರವಾಗಬಹುದು

Vaikuntha Ekadashi 2023: ಉಪವಾಸದ ಆಸೆ, ಸ್ಪಂದಿಸದ ದೇಹ; ನಿಮ್ಮ ಪರಿಸ್ಥಿತಿಯೂ ಹೀಗಿದ್ದರೆ ಈ ಕೋಸಂಬರಿಗಳು ನೆರವಾಗಬಹುದು

Kosambari: ಹಬ್ಬ, ವ್ರತ, ಏಕಾದಶಿ ಸಮಯದಲ್ಲಿ ಕೆಲವರು ಉಪವಾಸ ಇದ್ದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಕೆಲವರಿಗೆ ಉಪವಾಸ ಇರುವುದು ಆರೋಗ್ಯ ಸಮಸ್ಯೆ ಉಂಟು ಮಾಡಬಹುದು. ಉಪವಾಸ ಎಂದರೆ ಒಂದು ತೊಟ್ಟು ನೀರನ್ನೂ ಕುಡಿಯಬಾರದು ಎಂಬ ನಿಯಮವೇನೂ ಇಲ್ಲ.

ಡಿಸೆಂಬರ್‌ 23ಕ್ಕೆ ವೈಕುಂಠ ಏಕಾದಶಿ ಇದೆ. ಆ ದಿನ ಉಪವಾಸ ಇರಬೇಕೆಂದು ಅನೇಕರು ನಿರ್ಧರಿಸಿದ್ದಾರೆ. ಆದರೆ ಕೆಲವರಿಗೆ ಉಪವಾಸ ಮಾಡಿದರೆ ನಿಶ್ಯಕ್ತಿ ಕಾಡಬಹುದು. ಉಪವಾಸದ ಸಮಯದಲ್ಲಿ ಹಾಲು, ಹಣ್ಣು , ಹಂಫಲು, ಕೋಸಂಬರಿಯಂಥ ಆಹಾರ ಸೇವಿಸಲು ಅಡ್ಡಿ ಇಲ್ಲ. 
icon

(1 / 8)

ಡಿಸೆಂಬರ್‌ 23ಕ್ಕೆ ವೈಕುಂಠ ಏಕಾದಶಿ ಇದೆ. ಆ ದಿನ ಉಪವಾಸ ಇರಬೇಕೆಂದು ಅನೇಕರು ನಿರ್ಧರಿಸಿದ್ದಾರೆ. ಆದರೆ ಕೆಲವರಿಗೆ ಉಪವಾಸ ಮಾಡಿದರೆ ನಿಶ್ಯಕ್ತಿ ಕಾಡಬಹುದು. ಉಪವಾಸದ ಸಮಯದಲ್ಲಿ ಹಾಲು, ಹಣ್ಣು , ಹಂಫಲು, ಕೋಸಂಬರಿಯಂಥ ಆಹಾರ ಸೇವಿಸಲು ಅಡ್ಡಿ ಇಲ್ಲ. (PC: Zakiya Batool (Zara) Instagram, simplysumanaofficial‌ Instagram)

ಕೋಸಂಬರಿ ತಯಾರಿಸಲು ಹೆಸರು ಬೇಳೆ, ಕಡ್ಲೆಬೇಳೆ, ಸೌತೆಕಾಯಿ, ಕ್ಯಾರೆಟ್‌ ಬಳಸುವುದರಿಂದ ಅದರಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತವೆ. ಉಪವಾಸದ ಸಮಯದಲ್ಲಿ ಇದನ್ನು ಸೇವಿಸುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ವಿವಿಧ ಬಗೆಯ ಕೋಸಂಬರಿಯ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.  
icon

(2 / 8)

ಕೋಸಂಬರಿ ತಯಾರಿಸಲು ಹೆಸರು ಬೇಳೆ, ಕಡ್ಲೆಬೇಳೆ, ಸೌತೆಕಾಯಿ, ಕ್ಯಾರೆಟ್‌ ಬಳಸುವುದರಿಂದ ಅದರಲ್ಲಿ ಹೆಚ್ಚಿನ ಪೋಷಕಾಂಶಗಳಿರುತ್ತವೆ. ಉಪವಾಸದ ಸಮಯದಲ್ಲಿ ಇದನ್ನು ಸೇವಿಸುವುದರಿಂದ ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ವಿವಿಧ ಬಗೆಯ ಕೋಸಂಬರಿಯ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.  (PC: Zakiya Batool (Zara) Instagram)

ಕಡ್ಲೆಬೇಳೆ ಕೋಸಂಬರಿ: ಕೋಸಂಬರಿಯನ್ನು ಹೆಸರುಬೇಳೆ ಮಾತ್ರವಲ್ಲ ಕಡ್ಲೆಬೇಳೆ ಬಳಸಿ ಕೂಡಾ ತಯಾರಿಸಲಾಗುತ್ತದೆ. ಕಡ್ಲೆಬೇಳೆಯನ್ನು ನೆನೆಸಿ ನೀರು ಶೋಧಿಸಿ, ಅದರೊಂದಿಗೆ ಕಾಯಿತುರಿ, ಒಂದಿಷ್ಟು ಸೌತೆಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಒಗ್ಗರಣೆ ಕೊಡಬಹುದು. 
icon

(3 / 8)

ಕಡ್ಲೆಬೇಳೆ ಕೋಸಂಬರಿ: ಕೋಸಂಬರಿಯನ್ನು ಹೆಸರುಬೇಳೆ ಮಾತ್ರವಲ್ಲ ಕಡ್ಲೆಬೇಳೆ ಬಳಸಿ ಕೂಡಾ ತಯಾರಿಸಲಾಗುತ್ತದೆ. ಕಡ್ಲೆಬೇಳೆಯನ್ನು ನೆನೆಸಿ ನೀರು ಶೋಧಿಸಿ, ಅದರೊಂದಿಗೆ ಕಾಯಿತುರಿ, ಒಂದಿಷ್ಟು ಸೌತೆಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ಒಗ್ಗರಣೆ ಕೊಡಬಹುದು. (PC: @TalkOf_TheT0wn X Page)

ಹೆಸರುಬೇಳೆ ಕೋಸಂಬರಿ: ಕಡ್ಲೆಬೇಳೆ ಇಷ್ಟಪಡದವರು ಹೆಸರು ಬೇಳೆ ಕೋಸಂಬರಿ ಮಾಡಿ ಸೇವಿಸಬಹುದು. ನೆನೆಸಿದ ಹೆಸರುಬೇಳೆಗೆ ಒಂದಿಷ್ಟು ಕ್ಯಾರೆಟ್‌ ತುರಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು , ಉಪ್ಪು ಸೇರಿಸಿದರೆ ಹೆಸರುಬೇಳೆ ಕೋಸಂಬರಿ ರೆಡಿ. ಇದನ್ನು ನೀವು ಒಗ್ಗರಣೆ ಮಾಡದೆಯೂ ತಿನ್ನಬಹುದು. ಉಪ್ಪು ಸೇರಿಸಲು ಇಷ್ಟವಿಲ್ಲದಿದ್ದರೆ ಹಾಗೆಯೂ ಸೇವಿಸಬಹುದು. 
icon

(4 / 8)

ಹೆಸರುಬೇಳೆ ಕೋಸಂಬರಿ: ಕಡ್ಲೆಬೇಳೆ ಇಷ್ಟಪಡದವರು ಹೆಸರು ಬೇಳೆ ಕೋಸಂಬರಿ ಮಾಡಿ ಸೇವಿಸಬಹುದು. ನೆನೆಸಿದ ಹೆಸರುಬೇಳೆಗೆ ಒಂದಿಷ್ಟು ಕ್ಯಾರೆಟ್‌ ತುರಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು , ಉಪ್ಪು ಸೇರಿಸಿದರೆ ಹೆಸರುಬೇಳೆ ಕೋಸಂಬರಿ ರೆಡಿ. ಇದನ್ನು ನೀವು ಒಗ್ಗರಣೆ ಮಾಡದೆಯೂ ತಿನ್ನಬಹುದು. ಉಪ್ಪು ಸೇರಿಸಲು ಇಷ್ಟವಿಲ್ಲದಿದ್ದರೆ ಹಾಗೆಯೂ ಸೇವಿಸಬಹುದು. (@emessp75 X page)

ದಾಳಿಂಬೆ ಕೋಸಂಬರಿ: ಕಡ್ಲಬೇಳೆ, ಹೆಸರುಬೇಳೆ ಯಾವ ಕೋಸಂಬರಿ ತಯಾರಿಸಿದರೂ ಅದರೊಂದಿಗೆ ನೀವು ದಾಳಿಂಬೆಯನ್ನು ಕೂಡಾ ಸೇರಿಸಬಹುದು. ಇದರಿಂದ ಕೋಸಂಬರಿ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. 
icon

(5 / 8)

ದಾಳಿಂಬೆ ಕೋಸಂಬರಿ: ಕಡ್ಲಬೇಳೆ, ಹೆಸರುಬೇಳೆ ಯಾವ ಕೋಸಂಬರಿ ತಯಾರಿಸಿದರೂ ಅದರೊಂದಿಗೆ ನೀವು ದಾಳಿಂಬೆಯನ್ನು ಕೂಡಾ ಸೇರಿಸಬಹುದು. ಇದರಿಂದ ಕೋಸಂಬರಿ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. (PC: Prabha Prasanna - Facebok )

ಸೌತೆಕಾಯಿ ಕೋಸಂಬರಿ: ನೀವು ಹೆಸರುಬೇಳೆ, ಕಡ್ಲೆಬೇಳೆ ಬಳಸದೆ, ಸೌತೆಕಾಯಿಂದಲೇ ಕೋಸಂಬರಿ ತಯಾರಿಸಬಹುದು. ಸೌತೆಕಾಯನ್ನು ಸಣ್ಣಗೆ ಕತ್ತರಿಸಿ ಅದಕ್ಕೆ ಸ್ವಲ್ಪ ಕ್ಯಾರೆಟ್‌, ಕಾಯಿತುರಿ ಸೇರಿಸಿ ಒಗ್ಗರಣೆ ಮಾಡಿದರೆ ಸಾಕು. 
icon

(6 / 8)

ಸೌತೆಕಾಯಿ ಕೋಸಂಬರಿ: ನೀವು ಹೆಸರುಬೇಳೆ, ಕಡ್ಲೆಬೇಳೆ ಬಳಸದೆ, ಸೌತೆಕಾಯಿಂದಲೇ ಕೋಸಂಬರಿ ತಯಾರಿಸಬಹುದು. ಸೌತೆಕಾಯನ್ನು ಸಣ್ಣಗೆ ಕತ್ತರಿಸಿ ಅದಕ್ಕೆ ಸ್ವಲ್ಪ ಕ್ಯಾರೆಟ್‌, ಕಾಯಿತುರಿ ಸೇರಿಸಿ ಒಗ್ಗರಣೆ ಮಾಡಿದರೆ ಸಾಕು. (PC: kumuda_k_manjunath Instagram)

ಸ್ವೀಟ್‌ ಕಾರ್ನ್‌ ಕೋಸಂಬರಿ: ಸ್ವೀಟ್‌ ಕಾರ್ನ್‌ನಲ್ಲಿ ಪ್ರೋಟೀನ್‌ , ಕಾರ್ಬೋಹೈಡ್ರೇಟ್‌, ಪೈಬರ್‌ ಅಂಶ ಹೆಚ್ಚಾಗಿದೆ. ಆದ್ದರಿಂದ ನೀವು ಕೋಸಂಬರಿ ತಯಾರಿಸಲು ಸ್ವೀಟ್‌ ಕಾರ್ನ್‌ ಕೂಡಾ ಬಳಸಬಹುದು. ಉಪವಾಸವಿದ್ದಾಗ ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. 
icon

(7 / 8)

ಸ್ವೀಟ್‌ ಕಾರ್ನ್‌ ಕೋಸಂಬರಿ: ಸ್ವೀಟ್‌ ಕಾರ್ನ್‌ನಲ್ಲಿ ಪ್ರೋಟೀನ್‌ , ಕಾರ್ಬೋಹೈಡ್ರೇಟ್‌, ಪೈಬರ್‌ ಅಂಶ ಹೆಚ್ಚಾಗಿದೆ. ಆದ್ದರಿಂದ ನೀವು ಕೋಸಂಬರಿ ತಯಾರಿಸಲು ಸ್ವೀಟ್‌ ಕಾರ್ನ್‌ ಕೂಡಾ ಬಳಸಬಹುದು. ಉಪವಾಸವಿದ್ದಾಗ ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ. (PC: tofumom Instagram)

ಕ್ಯಾರೆಟ್‌ ಕೋಸಂಬರಿ: ಕಡ್ಲೆಬೇಳೆ, ಹೆಸರು ಬೇಳೆ ಕೋಸಂಬರಿ ತಯಾರಿಸುವಾಗ ಸ್ವಲ್ಪ ಪ್ರಮಾಣದಲ್ಲಿ ಕ್ಯಾರೆಟ್‌ ಕೂಡಾ ಬಳಸುತ್ತೇವೆ. ಆದರೆ ಅದನ್ನೇ ಹೆಚ್ಚು ಬಳಸಿ ಕ್ಯಾರೆಟ್‌ ಕೋಸಂಬರಿ ತಯಾರಿಸಬಹುದು. ಟೈಪ್‌ 2 ಮಧುಮೇಹಿಗಳಿಗೆ ಕ್ಯಾರೆಟ್‌ ಬಹಳ ಒಳ್ಳೆಯದು. 
icon

(8 / 8)

ಕ್ಯಾರೆಟ್‌ ಕೋಸಂಬರಿ: ಕಡ್ಲೆಬೇಳೆ, ಹೆಸರು ಬೇಳೆ ಕೋಸಂಬರಿ ತಯಾರಿಸುವಾಗ ಸ್ವಲ್ಪ ಪ್ರಮಾಣದಲ್ಲಿ ಕ್ಯಾರೆಟ್‌ ಕೂಡಾ ಬಳಸುತ್ತೇವೆ. ಆದರೆ ಅದನ್ನೇ ಹೆಚ್ಚು ಬಳಸಿ ಕ್ಯಾರೆಟ್‌ ಕೋಸಂಬರಿ ತಯಾರಿಸಬಹುದು. ಟೈಪ್‌ 2 ಮಧುಮೇಹಿಗಳಿಗೆ ಕ್ಯಾರೆಟ್‌ ಬಹಳ ಒಳ್ಳೆಯದು. (PC: sukhvijinder Instagram)


ಇತರ ಗ್ಯಾಲರಿಗಳು