ಪ್ರೇಮಿಗಳ ದಿನಾಚರಣೆ 2025: ವ್ಯಾಲೆಂಟೈನ್‌ ಯಾರು, ಮೊದಲ ವ್ಯಾಲೆಂಟೈನ್ಸ್ ಡೇ ಹೇಗಿತ್ತು, ಎಲ್ಲಿ, ಹೇಗೆ ಆಚರಿಸಿದ್ರು ಅಂತ ತಿಳಿಯೋ ಕುತೂಹಲ ಇಲ್ವ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರೇಮಿಗಳ ದಿನಾಚರಣೆ 2025: ವ್ಯಾಲೆಂಟೈನ್‌ ಯಾರು, ಮೊದಲ ವ್ಯಾಲೆಂಟೈನ್ಸ್ ಡೇ ಹೇಗಿತ್ತು, ಎಲ್ಲಿ, ಹೇಗೆ ಆಚರಿಸಿದ್ರು ಅಂತ ತಿಳಿಯೋ ಕುತೂಹಲ ಇಲ್ವ

ಪ್ರೇಮಿಗಳ ದಿನಾಚರಣೆ 2025: ವ್ಯಾಲೆಂಟೈನ್‌ ಯಾರು, ಮೊದಲ ವ್ಯಾಲೆಂಟೈನ್ಸ್ ಡೇ ಹೇಗಿತ್ತು, ಎಲ್ಲಿ, ಹೇಗೆ ಆಚರಿಸಿದ್ರು ಅಂತ ತಿಳಿಯೋ ಕುತೂಹಲ ಇಲ್ವ

The First Valentine's Day: ಇಂದು ಫೆಬ್ರವರಿ 14. ಜಗತ್ತಿನೆಲ್ಲೆಡೆ ವ್ಯಾಲೆಂಟೈನ್ಸ್ ಡೇ ಅರ್ಥಾತ್ ಪ್ರೇಮಿಗಳ ದಿನಾಚರಣೆಯ ದಿನ. ಸಹಜವಾಗಿಯೇ ಮೊದಲ ವ್ಯಾಲೆಂಟೈನ್ಸ್ ಡೇ ಹೇಗಿತ್ತು, ಯಾರು, ಎಲ್ಲಿ, ಹೇಗೆ ಆಚರಿಸಿದ್ರು ಅಂತ ತಿಳಿಯೋ ಕುತೂಹಲ ಇಲ್ವ, ಇಲ್ಲಿದೆ ಆ ವಿವರ.

ಪ್ರೇಮಿಗಳ ದಿನಾಚರಣೆ 2025: ಇಂದು (ಫೆ 14) ಪ್ರೇಮಿಗಳ ದಿನಾಚರಣೆಯ ದಿನ. ಜಗತ್ತಿನೆಲ್ಲೆಡೆ ಪ್ರೇಮಿಗಳು ಸಂಭ್ರಮಿಸುವ, ಮೊದಲ ಬಾರಿಗೆ ಪ್ರೇಮ ನಿವೇದನೆ ಮಾಡುವ, ಮಾಡಲು ಪ್ರಯತ್ನಿಸುವ ದಿನವೂ ಹೌದು. ವಾಸ್ತವದಲ್ಲಿ ಮೊದಲ ವ್ಯಾಲೆಂಟೈನ್ಸ್ ಡೇ ಹೇಗಿತ್ತು, ಯಾರು, ಎಲ್ಲಿ, ಹೇಗೆ ಆಚರಿಸಿದ್ರು ಅಂತ ತಿಳಿಯೋ ಕುತೂಹಲ ಇಲ್ವ.. ಹಾಗಾದ್ರೆ ಆ ಮಾಹಿತಿ, ವಿವರ ಇಲ್ಲಿದೆ.
icon

(1 / 9)

ಯುರೋಪ್‌ನಲ್ಲಿ ಕ್ರಿಸ್ತ ಶಕ 476ರಲ್ಲಿ ಮಧ್ಯಯುಗ ಪ್ರಾರಂಭವಾಯಿತು. ವಿಶಾಲ ರೋಮನ್ ಸಾಮ್ರಾಜ್ಯದ ಪತನವಾದ ಬಳಿಕ ಈ ಹೊಸ ಯುಗ ಶುರುವಾಯಿತು. ಮಧ್ಯಯುಗ ಶುರುವಾದ 20 ವರ್ಷಗಳ ನಂತರ ಅಂದರೆ ಕ್ರಿಸ್ತ ಶಕ 496ರಲ್ಲಿ ಮೊದಲ ವ್ಯಾಲೆಂಟೈನ್ಸ್ ಡೇ ಅರ್ಥಾತ್ ಪ್ರೇಮಿಗಳ ದಿನಾಚರಣೆ ನಡೆಯಿತು ಎಂಬ ಉಲ್ಲೇಖವಿದೆ.
icon

(2 / 9)

ವ್ಯಾಲೆಂಟೈನ್ಸ್ ಡೇ ಎಂದರೇನು? ವ್ಯಾಲೆಂಟೈನ್ ಯಾರು? ಆತನ ಹೆಸರಲ್ಲಿರುವ ದಿನಾಚರಣೆ ಪ್ರೇಮಿಗಳ ದಿನಾಚರಣೆ ಹೇಗಾಯಿತು? ವಾಸ್ತವದಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆ ಹಿಂದೆ ದುರಂತ ಇತಿಹಾಸವಿದೆ. ಅದನ್ನು ತಿಳಿಯೋಣ.
icon

(3 / 9)

ರೋಮನ್ ಸಾಮ್ರಾಜ್ಯದಲ್ಲಿ ಫೆಬ್ರವರಿ 14 ರಂದು ಲುಪರ್‌ಕಾಲಿಯಾ ಹಬ್ಬ ಆಚರಿಸುವುದು ವಾಡಿಕೆ. ಇದು ಪ್ರೇಮ ದೇವತೆ ಜುನೋ ಫೆಬ್ರುವಾಟಾಗೆ ಮೀಸಲಾದ ಆಚರಣೆ. ಇಲ್ಲಿ ಯುವಕರು ತಮಗೆ ಸರಿ ಹೊಂದುವ ಯುವತಿಯರ ಹೆಸರನ್ನು ಆಯ್ಕೆ ಮಾಡಿ, ಅವರೊಂದಿಗೆ ಜೊತೆಯಾಗಿ ಹಬ್ಬ ಆಚರಿಸುತ್ತಿದ್ದರು. ಕೆಲವರು ಜೀವನ ಸಂಗಾತಿಗಳಾಗುತ್ತಿದ್ದರು. ಈ ಆಚರಣೇಗೆ ವಿರುದ್ಧ ನಿಂತಿದ್ದ ಸಂತ ವ್ಯಾಲೆಂಟೈನ್‌, ಕ್ರಿಶ್ಚಿಯನ್ ಸೈನಿಕರ ವಿವಾಹಗಳನ್ನು ಉತ್ಥೇಜಿಸಿದ ಕಾರಣಕ್ಕೆ ರೋಮನ್ ದೊರೆ ಜೈಲಿಗಟ್ಟಿದ. 
icon

(4 / 9)

ಸಂತ ವ್ಯಾಲೆಂಟೈನ್ ಯಾರು- ಸಂತ ವ್ಯಾಲೆಂಟೈನ್ ಧರ್ಮಬೋಧಕನಾಗಿದ್ದು, ರೋಮನ್ ಸಾಮ್ರಾಜ್ಯದಲ್ಲಿ ಕ್ರಿಶ್ಚಿಯನ್ ವಿವಾಹ, ಆಚರಣೆಗಳಿಗೆ ಬೆಂಬಲವಾಗಿ ನಿಂತಿದ್ದ. ಇದನ್ನು ವಿರೋಧಿಸಿ ರೋಮನ್ ದೊರೆ ಆದೇಶವಿದ್ದರೂ, ಧಿಕ್ಕರಿಸಿದ್ದ ಸಂತ ವ್ಯಾಲೆಂಟೈನ್‌ ಅನ್ನು ಬಂಧಿಸಿ ಸೆರೆಮನೆಗಟ್ಟಲಾಗುತ್ತದೆ. ಅಲ್ಲಿ ಜೈಲರ್‌ನ ಪುತ್ರಿಯ ದೃಷ್ಟಿದೋಷವನ್ನು ಸಂತ ವ್ಯಾಲೆಂಟೈನ್ ನಿವಾರಿಸಿದ. ಕ್ರಿಶ್ಚಿಯನ್ ಧರ್ಮ ವಿಸ್ತರಣೆಗೆ ಅವಕಾಶ ಮಾಡಿಕೊಟ್ಟ ಕಾರಣ ಆತನನ್ನು ಫೆ 14 ರಂದು ಮರಣದಂಡನೆಗೆ ಗುರಿಮಾಡಲಾಗುತ್ತದೆ. ಅದಕ್ಕೂ ಮೊದಲು ಆತ "ಯುವರ್'ಸ್ ವ್ಯಾಲೆಂಟೈನ್‌' ಎಂದು ಬರೆದ ಕಾಗದವನ್ನು ಬಿಟ್ಟಿದ್ದ ಎಂಬ ಉಲ್ಲೇಖ ವ್ಯಾಲೆಂಟೈನ್ ಕಥೆಯಲ್ಲಿದೆ.
icon

(5 / 9)

ಕಾನ್‌ಸ್ಟಂಟೈನ್ ರೋಮ್ ಅನ್ನು ಕ್ರಿಶ್ಚಿಯನ್ ಧರ್ಮಕ್ಕೆ ಬದಲಾಯಿಸಿದ ನಂತರ ಶತಮಾನಗಳಷ್ಟು ಹಳೆಯ ಲುಪರ್‌ಕಾಲಿಯಾ ಹಬ್ಬವನ್ನು ತಡೆಯಲು ಚರ್ಚ್ ಪ್ರಯತ್ನಿಸಿತ್ತು. 5ನೇ ಶತಮಾನದಲ್ಲಿ ಪೋಪ್ ಗಾಲಾಸಿಯನ್‌ ಫೆ 14ರ ಲುಪರ್‌ಕಾಲಿಯ ಹಬ್ಬಕ್ಕೆ ಬದಲಾಗಿ ಕ್ರಿಶ 2ನೇ ಶತಮಾನದಲ್ಲಿ ಹುತಾತ್ಮನಾದ ವ್ಯಾಲೆಂಟೈನ್ ಅನ್ನು ನೆನಪಿಸುವ ದಿನವನ್ನು ಆಚರಣೆಗೆ ತಂದರು. ಹೀಗೆ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಬಂತು.
icon

(6 / 9)

ಈ ಇತಿಹಾಸ ಏನೇ ಇದ್ದರೂ ವ್ಯಾಲೆಂಟೈನ್ ಎಂಬ ಪದ ನೋರ್‌ಮಂಗಾ ಲ್ಯಾಟಿನ್ ಮೂಲದ್ದು. ಇದು ಮಹಿಳೆಯರನ್ನು ಪ್ರೀತಿಸುವಾತ ಎಂಬ ಅರ್ಥವನ್ನು ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಶೃಂಗಾರ ಭಾವಕ್ಕೆ ಪ್ರತಿಯಾಗಿ ವ್ಯಾಲೆಂಟೈನ್ಸ್ ಡೆ ಆಚರಣೆ ಚಾಲ್ತಿಗೆ ಬಂತು.
icon

(7 / 9)

ಇಂಗ್ಲೆಂಡ್‌ನಲ್ಲಿ ಈ ಆಚರಣೆಗೆ ಹೇಗಿತ್ತು ಎಂದರೆ, ಅಲ್ಲಿ ಯುವತಿಯರು ತಮ್ಮ ಸಂಭಾವ್ಯ ಪ್ರಿಯತಮರ ಹೆಸರುಗಳನ್ನು ಚೀಟಿಯಲ್ಲಿ ಬರೆದು ನೀರಿನ ಬೌಲ್‌ನಲ್ಲಿ ಮುಳುಗಿಸುತ್ತಾರೆ. ಯಾವ ಚೀಟಿ ಮೊದಲು ಮೇಲೇಳುತ್ತದೆಯೋ ಅವರನ್ನು ತಮ್ಮ ವ್ಯಾಲೆಂಟೈನ್ ಎಂದು ಸ್ವೀಕರಿಸುವ ಪದ್ಧತಿ ಚಾಲ್ತಿಯಲ್ಲಿತ್ತು ಎಂಬ ಉಲ್ಲೇಖವನ್ನು ಕಂಟ್ರಿ ಲೈಫ್ ಆಫ್‌ ಯುಕೆ ದಾಖಲಿಸಿದೆ.
icon

(8 / 9)

ಸ್ಕಾಟ್ಲೆಂಡ್‌ನಲ್ಲಿ ಈ ಆಚರಣೆ ಹೇಗಿತ್ತು ಎಂದರೆ ಹ್ಯಾಟ್‌ನಲ್ಲಿ ಪ್ರಿಯತಮರ ಹೆಸರನ್ನು ಬರೆದು ಹಾಕಲಾಗುತ್ತದೆ. ಮೂರು ಬಾರಿ ಒಂದೇ ಹೆಸರಿನ ಚೀಟಿ ಸಿಕ್ಕರೆ ಅವರ ವಿವಾಹ ನಿಗದಿ ಮಾಡುವುದು ವಾಡಿಕೆಯಾಗಿತ್ತು. ಭಾರತದಲ್ಲಿ ಈ ಆಚರಣೆ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆ ವಹಿವಾಟಿಗೆ ಬಳಕೆಯಾಗುತ್ತಿದ್ದು, ಪ್ರೇಮಿಗಳನ್ನು ಒಂದುಗೂಡಿಸಲು ಈ ದಿನವನ್ನು ನಿಮಿತ್ತವಾಗಿ ಬಳಸಲಾಗುತ್ತಿದೆ. ಇಂದು ಫೆಬ್ರವರಿ 14 ಪ್ರೇಮಿಗಳ ದಿನಾಚರಣೆ. ತನ್ನಿಮಿತ್ತವಾಗಿ ಈಗ ಈ ದಿನಾಚರಣೆಯ ಇತಿಹಾಸ ತಿಳಿದುಕೊಂಡದ್ದೂ ಆಗಿದೆ.
icon

(9 / 9)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು