Valentines Day 2025: ಪ್ರೀತಿಸಿ ಮದುವೆಯಾದ ಕರ್ನಾಟಕದ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು; ಸಾಹಿತಿ, ಅಧ್ಯಾಪಕರನ್ನೂ ವರಿಸಿದರು !
- Valentines Day 2025: ಕರ್ನಾಟಕದಲ್ಲಿ ಹಲವು ಅಧಿಕಾರಿಗಳು ತಾವು ಇಷ್ಟಪಟ್ಟವರನ್ನೇ ಮದುವೆಯಾಗಿದ್ದಾರೆ. ಪ್ರೀತಿ ಎನ್ನುವುದು ಅವರ ಬದುಕಿನ ಭಾಗವೇ ಆಗಿದೆ. ಕರ್ನಾಟಕದ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಬದುಕಿನ ನೋಟ ಇಲ್ಲಿದೆ.
- Valentines Day 2025: ಕರ್ನಾಟಕದಲ್ಲಿ ಹಲವು ಅಧಿಕಾರಿಗಳು ತಾವು ಇಷ್ಟಪಟ್ಟವರನ್ನೇ ಮದುವೆಯಾಗಿದ್ದಾರೆ. ಪ್ರೀತಿ ಎನ್ನುವುದು ಅವರ ಬದುಕಿನ ಭಾಗವೇ ಆಗಿದೆ. ಕರ್ನಾಟಕದ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳ ಬದುಕಿನ ನೋಟ ಇಲ್ಲಿದೆ.
(1 / 10)
ಕರ್ನಾಟಕದ ಐಎಫ್‌ಎಸ್ ದಂಪತಿಗಳಲ್ಲಿ ಬಿಸ್ವಜಿತ್ ಮಿಶ್ರ ಹಾಗೂ ಶಾಶ್ವತಿ ಮಿಶ್ರ ಪ್ರಮುಖರು. ಹೋದಲೆಲ್ಲಾ ಕೆಲಸದ ಮೂಲಕವೇ ಛಾಪು ಮೂಡಿಸಿರುವ ದಂಪತಿ. ಬಿಸ್ವಜಿತ್ ಅವರು ಮಧ್ಯಪ್ರದೇಶದವರು, ಶಾಶ್ವತಿ ಅಸ್ಸಾಂನವರು. 1998ನೇ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿ ಬಿಸ್ವಜಿತ್. ಶಾಶ್ವತಿ ಅವರು 1997ನೇ ಬ್ಯಾಚ್ ಅಧಿಕಾರಿ. ಇಷ್ಟಪಟ್ಟು ಮದುವೆಯಾದ ಆದರ್ಶ ಜೋಡಿಯೇ. ದಂಪತಿಗೆ ಇಬ್ಬರು ಪ್ರೀತಿಯ ಮಕ್ಕಳು.
(2 / 10)
ಉತ್ತರ ಭಾರತ ಮೂಲದವದವರಾದರೂ ಕರ್ನಾಟಕ ಕೇಡರ್‌ನಲ್ಲಿ ಕೆಲಸ ಮಾಡುತ್ತಿರುವ ಡಾ.ಶ್ರೀವತ್ಸ ಕೃಷ್ಣ ಹಾಗೂ ಗುಂಜನ್ ಕೃಷ್ಣ ಕೂಡ ಇಷ್ಟಪಟ್ಟು ಮದುವೆಯಾದವರು. 1994ನೇ ಬ್ಯಾಚ್‌ನ ಅಧಿಕಾರಿಯಾದ ಶ್ರೀವತ್ಸ ಅವರು ಅಪರ ಮುಖ್ಯ ಕಾರ್ಯದರ್ಶಿ. 2004ನೇ ಬ್ಯಾಚ್‌ನ ಅಧಿಕಾರಿಯಾದ ಗುಂಜನ್ ಸದ್ಯ ಕೈಗಾರಿಕಾ ಇಲಾಖೆ ಆಯುಕ್ತೆ.
(3 / 10)
ಕರ್ನಾಟಕದ ಐಎಎಸ್ ದಂಪತಿಗಳಲ್ಲಿ ರಾಜೇಂದ್ರ ಚೋಳನ್ ಹಾಗೂ ದೀಪಾಚೋಳನ್ ಕೂಡ ಇಬ್ಬರೊಬ್ಬರನ್ನು ಇಷ್ಟಪಟ್ಟು ಮದುವೆಯಾದವರು. ತಮಿಳುನಾಡು ಮೂಲದವರಾದರೂ ಒಂದೂವರೆ ದಶಕದಿಂದ ಕರ್ನಾಟಕದ ಸೇವೆಯಲ್ಲಿದ್ದಾರೆ. 2008ನೇ ಬ್ಯಾಚ್ ಅಧಿಕಾರಿಗಳು.
(4 / 10)
ಸದ್ಯ ಬೀದರ್ ಡಿಸಿಯಾಗಿರುವ ಶಿಲ್ಪ ಶರ್ಮ ಹಾಗೂ ಕೊಪ್ಪಳ ಡಿಸಿಯಾಗಿರುವ ನಳಿನಿ ಅತುಲ್ ಅವರು ಕೂಡ ಪ್ರೀತಿಸಿ ಮದುವೆಯಾದವರೇ. ಉತ್ತರ ಭಾರತದವರಾದ ಇಬ್ಬರೂ ಒಳ್ಳೆಯ ಹೆಸರು ಮಾಡಿದ್ದಾರೆ.
(5 / 10)
ಕರ್ನಾಟಕದವರಾದ ಕೆ.ಎಂ.ಗಾಯತ್ರಿ ಐಎಎಸ್ ಅಧಿಕಾರಿಯಾಗಿ ಸದ್ಯ ಮೈಸೂರು ಜಿಲ್ಲಾಪಂಚಾಯಿತಿ ಸಿಇಒ. ಜತೆಗೆ ಓದುತ್ತಿದ್ದ ಪ್ರಸನ್ನಕುಮಾರ್ ಅವರನ್ನು ಪ್ರೀತಿಸಿ ಮದುವೆಯಾದರು. ಪ್ರಸನ್ನಕುಮಾರ್ ಅವರು ಮೈಸೂರಿನಲ್ಲಿ ಪ್ರಾಧ್ಯಾಪಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ. ಇಬ್ಬರೂ ಮಂಡ್ಯ ಜಿಲ್ಲೆಯವರು,
(6 / 10)
2011ನೇ ಬ್ಯಾಚ್‌ನ ಕರ್ನಾಟಕ ಕೇಡರ್ ಐಎಫ್‌ಎಸ್ ಅಧಿಕಾರಿಗಳಾದ ಯಶಪಾಲ್ ಕ್ಷೀರಸಾಗರ, ಸೋನಾಲ್ ವ್ರಿಸ್ನಿ ಅವರು ಇಷ್ಟಪಟ್ಟು ಮದುವೆಯಾದ ಜೋಡಿ. ಸದ್ಯ ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಶಪಾಲ್ ರಾಜಸ್ಥಾನದವರಾದರೆ, ಸೋನಾಲ್ ಅವರು ಗುಜರಾತ್‌ನವರು.
(7 / 10)
ಕರ್ನಾಟಕದಲ್ಲಿ ಟಫ್ ಕಾಪ್ ಎಂದೇ ಹೆಸರು ಮಾಡಿರುವ ಅನೂಪ್ ಶೆಟ್ಟಿ ಹಾಗೂ ನಿಶಾ ಜೇಮ್ಸ್ ಕೂಡ ಪ್ರೀತಿಸಿ ಮದುವೆಯಾದವರು. ಅನೂಪ್ ಕರ್ನಾಟಕದ ದಕ್ಷಿಣಕನ್ನಡದವರಾದರೆ, ನಿಶಾ ಕೇರಳದವರು. ಇಬ್ಬರೂ 2013ನೇ ಸಾಲಿನ ಐಪಿಎಸ್ ಅಧಿಕಾರಿಗಳು.
(8 / 10)
ಸಾಹಿತ್ಯ ವಲಯದಲ್ಲಿ ಹೆಸರು ಮಾಡಿರುವ ಐಪಿಎಸ್ ಅಧಿಕಾರಿ ಡಾ.ಧರಣಿ ದೇವಿ ಮಾಲಗತ್ತಿ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ. ದಕ್ಷಿಣ ಕನ್ನಡ ಮೂಲದವರು. ಅವರು ಅಧ್ಯಾಪಕಿಯಾಗಿದ್ದಾಗ ಕನ್ನಡದ ಹಿರಿಯ ಸಾಹಿತಿ ಡಾ.ಅರವಿಂದ ಮಾಲಗತ್ತಿ ಅವರನ್ನು ಪ್ರೀತಿಸಿ ವರಿಸಿದವರು. ತಮ್ಮ ನಡೆ, ಬರವಣಿಗೆ ಮೂಲಕವೇ ಹೆಸರಾದ ದಂಪತಿ ಇವರು,
(9 / 10)
ಅಬಕಾರಿ ಇಲಾಖೆಯಲ್ಲಿದ್ದಾಗಲೇ ಪ್ರೀತಿಸಿ ವಿವಾಹವಾದವರು ಸದ್ಯ ಮಂಡ್ಯ ಅಬಕಾರಿ ಉಪ ಆಯುಕ್ತ ನಾಗಶಯನ, ಆನಂತರ ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್‌ಗೆ ಬಡ್ತಿ ಪಡೆದರು ಚಾಮರಾಜನಗರ ಎಸ್ಪಿ ಆಗಿರುವ ಡಾ.ಬಿ.ಟಿ.ಕವಿತಾ. ನಾಗಶಯನ ಹುಣಸೂರಿನವರು. ಕವಿತಾ ಅವರದ್ದು ಚಿತ್ರದುರ್ಗ ಮೂಲ,
ಇತರ ಗ್ಯಾಲರಿಗಳು