Valentine's day: ಪ್ರೀತಿಗೆ ವಯಸ್ಸು ಅಡ್ಡಿಯಲ್ಲ, ವಯಸ್ಸು 50 ವರ್ಷ ದಾಟಿದ ಬಳಿಕ ಮದುವೆಯಾದವರು; ಆಶಿಶ್ ವಿದ್ಯಾರ್ಥಿಯಿಂದ ಸಂಜಯ್ ದತ್ ತನಕ
- Valentine's day 2025: ಇಂದು ಪ್ರೇಮಿಗಳ ದಿನ. ಪ್ರೀತಿಪ್ರೇಮವೆಂದರೆ ಹದಿಹರೆಯದವರ ಜಗತ್ತು ಎಂದು ಭಾವಿಸುವಂತೆ ಇಲ್ಲ. ಆಶಿಶ್ ವಿದ್ಯಾರ್ಥಿ, ಕಬೀರ್ ಬೇಡಿ, ಸಂಜಯ್ ದತ್, ಸುಹಾಸಿನಿ ಮಲಾಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಐವತ್ತು ವರ್ಷ ವಯಸ್ಸು ದಾಟಿದ ಬಳಿಕ ಮದುವೆಯಾಗಿದ್ದಾರೆ. ಬನ್ನಿ ಅವರ ವಿವರ ಪಡೆಯೋಣ.
- Valentine's day 2025: ಇಂದು ಪ್ರೇಮಿಗಳ ದಿನ. ಪ್ರೀತಿಪ್ರೇಮವೆಂದರೆ ಹದಿಹರೆಯದವರ ಜಗತ್ತು ಎಂದು ಭಾವಿಸುವಂತೆ ಇಲ್ಲ. ಆಶಿಶ್ ವಿದ್ಯಾರ್ಥಿ, ಕಬೀರ್ ಬೇಡಿ, ಸಂಜಯ್ ದತ್, ಸುಹಾಸಿನಿ ಮಲಾಯ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಐವತ್ತು ವರ್ಷ ವಯಸ್ಸು ದಾಟಿದ ಬಳಿಕ ಮದುವೆಯಾಗಿದ್ದಾರೆ. ಬನ್ನಿ ಅವರ ವಿವರ ಪಡೆಯೋಣ.
(1 / 9)
Valentine's day 2025: ಇಂದು ಪ್ರೇಮಿಗಳ ದಿನ. ಪ್ರೀತಿಪ್ರೇಮವೆಂದರೆ ಹದಿಹರೆಯದವರ ಜಗತ್ತು ಎಂದು ಭಾವಿಸುವಂತೆ ಇಲ್ಲ. ಹರೆಯದ ಯುವಕ ಯುವತಿಯರಿಂದ ಹಿರಿಯ ವ್ಯಕ್ತಿಗಳವರೆಗೆ ಎಲ್ಲೆಡೆ ಪ್ರೀತಿಯೇ ಆವರಿಸಿದೆ. ಸಾಕಷ್ಟು ಸೆಲೆಬ್ರಿಟಿಗಳು 50 ವರ್ಷ ವಯಸ್ಸು ಕಳೆದ ಬಳಿಕ ಮದುವೆಯಾಗಿ ಗಮನ ಸೆಳೆದಿದ್ದಾರೆ. ಆಶಿಶ್ ವಿದ್ಯಾರ್ಥಿ, ಕಬೀರ್ ಬೇಡಿ ಸೇರಿದಂತೆ ಐವತ್ತು ವರ್ಷ ವಯಸ್ಸಿನ ಬಳಿಕ ವಿವಾಹವಾದವರ ವಿವರ ಇಲ್ಲಿದೆ.
(2 / 9)
ಆಶಿಶ್ ವಿದ್ಯಾರ್ಥಿ: ಕನ್ನಡ ಸಿನಿಮಾ ಪ್ರಿಯರಿಗೆ ವಿಲನ್ ಪಾತ್ರದಲ್ಲಿ ನಟಿಸುವ ಆಶಿಶ್ ವಿದ್ಯಾರ್ಥಿ ಗೊತ್ತು. 2023ರಲ್ಲಿ ಇವರು ಕೋಲ್ಕತ್ತಾದಲ್ಲಿ ಅಸ್ಸಾಂ ಮೂಲದ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ವಿವಾಹವಾಗಿದ್ದರು. ಅಂದಹಾಗೆ, ಆ ಸಮಯದಲ್ಲಿ ಆಶಿಶ್ ವಿದ್ಯಾರ್ಥಿಗೆ ವಯಸ್ಸು 57.
(3 / 9)
ಸುಹಾಸಿನಿ ಮುಲಾಯ್: ಅಸ್ಸಾಮಿ, ಬಾಲಿವುಡ್, ಮರಾಠಿ ಸಿನಿಮಾಗಳಲ್ಲಿ ಖ್ಯಾತಿ ಪಡೆದ ನಟಿ ಸುಹಾಸಿನಿ ಮುಲಾಯ್ 2021ರಲ್ಲಿ ತನ್ನ 60ನೇ ವಯಸ್ಸಿನಲ್ಲಿ ಮದುವೆಯಾದರು. ಈ ಮೂಲಕ ಮದುವೆಗೆ, ಪ್ರೀತಿಗೆ ವಯಸ್ಸು ಕೇವಲ ಅಂಕೆ ಎಂದು ಸಾಬೀತುಪಡಿಸಿದರು.
(4 / 9)
ಮಿಲಿಂದ್ ಸೋಮನ್: ಭಾರತದ ನಟ ಮತ್ತು ರೂಪದರ್ಶಿ ಮಿಲಿಂದ್ ಅವರು ತನ್ನ 52ನೇ ವಯಸ್ಸಿನಲ್ಲಿ ಅಂಕಿತಾ ಕೋನಾವರ್‌ರನ್ನು ಮದುವೆಯಾದರು. ಇದು ಇವರ ಎರಡನೇ ಮದುವೆ.
(5 / 9)
ಸಚಿನ್ ಶ್ರಾಫ್: ಟಿವಿ ನಟ ಸಚಿನ್ ಶ್ರಾಫ್ ಅವರು ಚಾಂದಿನಿ ಕೊತಿ ಜತೆಗೆ ತನ್ನ 50ನೇ ವಯಸ್ಸಿನಲ್ಲಿ ಮದುವೆಯಾದರು.
(6 / 9)
ನೀನಾ ಗುಪ್ತಾ: ನಟಿ ಮತ್ತು ಕಿರುತೆರೆ ನಿರ್ದೇಶಕಿ ನೀನಾ ಗುಪ್ತಾ ಕೂಡ 50 ವರ್ಷ ವಯಸ್ಸಾಗುತ್ತಿದ್ದಂತೆ ಮದುವೆಯಾದರು. ವಿವಿಯನ್ ರಿಚರ್ಡ್ಸ್ ಜತೆ ಇವರಿಗೆ ದೀರ್ಘಕಾಲ ಸಂಬಂಧ ಇತ್ತು. ಇದಾದ ಬಳಿಕ 2008ರಲ್ಲಿ ಇವರು ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು.
(7 / 9)
ಮನೋಜ್ ತಿವಾರಿ: ಭೋಜಪುರಿ ಗಾಯಕ ಮತ್ತು ರಾಜಕಾರಣಿ ಮನೋಜ್ ತಿವಾರಿ ಅವರು ತನ್ನ 50ನೇ ವಯಸ್ಸಿನಲ್ಲಿ ಎರಡನೇ ವಿವಾಹವಾದರು.
(8 / 9)
ಕಬೀರ್ ಬೇಡಿ: 2016ರಲ್ಲಿ ಹಿರಿಯ ನಟ ಕಬೀರ್‌ಬೇಡಿ ಅವರು ಪರ್ವೀನ್ ದೂಸಂಜ್‌ರನ್ನು ಮದುವೆಯಾದರು. ವಿವಾಹವಾದ ಸಮಯದಲ್ಲಿ ಕಬೀರ್ ಬೇಡಿ ವಯಸ್ಸು 70 ವರ್ಷ. ಅಂದಹಾಗೆ, ಇದು ಇವರ ನಾಲ್ಕನೇ ವಿವಾಹವಾಗಿತ್ತು.
ಇತರ ಗ್ಯಾಲರಿಗಳು