ವ್ಯಾಲೆಂಟೈನ್ಸ್ ಡೇಗೆ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ನಿಮ್ಮ ಗೆಳತಿಯನ್ನು ಇಂಪ್ರೆಸ್ ಮಾಡಬೇಕು ಅಂತಿದ್ರೆ ಈ ಡಿಸೈನ್‌ಗಳನ್ನು ಗಮನಿಸಿ
Best Tattoo Design For Men: ಪ್ರೇಮಿಗಳ ದಿನಕ್ಕೆ ನಿಮ್ಮ ಸಂಗಾತಿಗೆ ಸರ್ಪ್ರೈಸ್ ಗಿಫ್ಟ್ ಕೊಡಬೇಕು ಅಂತಿದ್ದೀರಾ, ಹಾಗಿದ್ದರೆ ನಿಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಲು ಟ್ಯಾಟೂ ಹಾಕಿಸಿಕೊಂಡು ಸರ್ಪ್ರೈಸ್ ನೀಡಿ. ಈ ಟ್ಯಾಟೂ ವಿನ್ಯಾಸಗಳು ನಿಮ್ಮ ಗೆಳತಿಯನ್ನ ಇಂಪ್ರೆಸ್ ಮಾಡುವುದರಲ್ಲಿ ಡೌಟೇ ಇಲ್ಲ.
(1 / 8)
ಪ್ರೇಮಿಗಳ ದಿನದಂದು ಗೆಳತಿಯನ್ನು ಇಂಪ್ರೆಸ್ ಮಾಡಬೇಕು ಅಂತ ಸಾಕಷ್ಟು ಪ್ಲಾನ್ ಮಾಡ್ತಾರೆ ಹುಡುಗರು. ಆದರೆ ಸ್ಪೆಷಲ್ ಆಗಿ ಇಂಪ್ರೆಸ್ ಮಾಡಬೇಕು ಅಂತಿದ್ದರೆ ನೀವು ಟ್ಯಾಟೂ ಹಾಕಿಸಿಕೊಂಡು ಸರ್ಪ್ರೈಸ್ ನೀಡಬಹುದು. ಪ್ರೇಮಿಗಳ ದಿನದ ಸಲುವಾಗಿ ಟ್ಯಾಟೂ ಹಾಕಿಸಿಕೊಳ್ಳಬೇಕು ಅಂತಿದ್ದರೆ ಈ ಡಿಸೈನ್‌ಗಳು ಖಂಡಿತ ನಿಮಗೆ ಇಷ್ಟವಾಗಬಹುದು.
(2 / 8)
ವಿಶೇಷ ಬರಹಗಳಿರುವ ಟ್ಯಾಟೂ ಈ ಟ್ಯಾಟೂ ವಿನ್ಯಾಸ ಸರಳವಾಗಿದ್ದು, ತುಂಬಾನೇ ವಿಶೇಷವಾಗಿದೆ. ಇದರಲ್ಲಿ ಲೈಫ್ ಎಂದು ಬರೆದಿದ್ದು, ಅದರ ಬದಲು ನಿಮಗೆ ಇಷ್ಟವಾಗುವ ಬರಹ ಬರೆಸಬಹುದು. ನಿಮ್ಮ ಗೆಳತಿ ಯಾವಾಗಲೂ ನಿಮ್ಮಿಂದ ಬದ್ಧತೆಯನ್ನು ಬಯಸಿದರೆ ವಿಶೇಷ, ಭಾವನಾತ್ಮಕ ಮತ್ತು ಪ್ರೀತಿಯ ಪದಗಳನ್ನು ವಿಶಿಷ್ಟ ರೀತಿಯಲ್ಲಿ ಹಚ್ಚೆ ಹಾಕಿಸಿಕೊಳ್ಳಿ.
(3 / 8)
ನಿಮ್ಮ ಗೆಳತಿಯ ಹೆಸರಿನ ಮೊದಲ ಅಕ್ಷರದೊಂದಿಗೆ ಹೃದಯಾಕಾರ ಬರುವಂತೆ ಟ್ಯಾಟೂ ಹಾಕಿಸಿಕೊಳ್ಳಿ. ಇದರಿಂದ ಖಂಡಿತ ಆಕೆ ಇಂಪ್ರೆಸ್ ಆಗುತ್ತಾಳೆ. ಇಲ್ಲಿ ಇಂಗ್ಲಿಷ್‌ನ A ಅಕ್ಷರದಲ್ಲಿ ಹಾರ್ಟ್ ಶೇಪ್ ಮೂಡಿಸಲಾಗಿದೆ.
(4 / 8)
ಕೈ ಮೇಲೆ ದೊಡ್ಡದಾಗಿ ಹಾರ್ಟ್ ಶೇಪ್ ಮೂಡಿಸಿ ಅದರೊಳಗೆ ನಿಮ್ಮ ಗೆಳತಿಯ ಹೆಸರಿನ ಮೊದಲ ಅಕ್ಷರವನ್ನು ಚಿಕ್ಕದಾಗಿ ಬರೆಸಬಹುದು. ಇದು ಕೂಡ ವ್ಯಾಲೆಂಟೈನ್ಸ್‌ಗೆ ಹಚ್ಚೆ ಹಾಕಿಸಲು ಹೇಳಿ ಮಾಡಿಸಿದ ವಿನ್ಯಾಸವಾಗಿದೆ.
(5 / 8)
ನಿಮಗೆ ದೊಡ್ಡದಾದ ಟ್ಯಾಟೂ ವಿನ್ಯಾಸ ಬೇಕು ಅಂತಿದ್ದರೆ ಇದನ್ನು ಟ್ರೈ ಮಾಡಬಹುದು. ಹೋಪ್ ಎಂದು ಇಂಗ್ಲಿಷ್‌ನಲ್ಲಿ ಬರೆದು ಉದ್ದದ ಗೆರೆಗಳನ್ನು ಜೋಡಿಸಿರುವ ಈ ವಿನ್ಯಾಸವೂ ಪ್ರೇಮಗಳ ದಿನಕ್ಕೆ ವಿಶೇಷವಾಗಿ ಹಾಕಿಸಿಕೊಳ್ಳಬಹುದಾದ ಟ್ಯಾಟೂ ಡಿಸೈನ್ ಆಗಿದೆ.
(instagram)(6 / 8)
ಹೃದಯಾಕಾರ ಮತ್ತು ಗುಲಾಬಿ ಹೂವುಗಳನ್ನು ಹೊಂದಿರುವ ಈ ಹಚ್ಚೆ ವಿನ್ಯಾಸವು ಸಾಕಷ್ಟು ಸೃಜನಶೀಲ ಮತ್ತು ವಿಶಿಷ್ಟವಾಗಿದೆ, ಇದನ್ನು ನೋಡಿದರೆ ನಿಮ್ಮ ಗೆಳತಿ ಖಂಡಿತ ಇಂಪ್ರೆಸ್ ಆಗ್ತಾರೆ, ಮಾತ್ರವಲ್ಲ ಇದು ತುಂಬಾನೆ ಡಿಫ್ರೆಂಟ್ ಆಗಿರುವ, ವಿಶೇಷ ವಿನ್ಯಾಸವಾಗಿದೆ.
(7 / 8)
ನಿಮ್ಮ ಗೆಳತಿ ಪಕ್ಷಿಗಳನ್ನು ಇಷ್ಟಪಡುವವರಾದ್ರೆ ಈ ಡಿಸೈನ್ ಖಂಡಿತ ಅವರಿಗೆ ಇಷ್ಟವಾಗದೇ ಇರುವುದಿಲ್ಲ. ನಿಮಗೆ ದೊಡ್ಡ ಡಿಸೈನ್ ಇಷ್ಟ ಇಲ್ಲ ಎಂದರೆ ಇದನ್ನೇ ಚಿಕ್ಕದಾಗಿ ಮಾಡಿಸಿ. ಹಕ್ಕಿ ಜೊತೆ ಲವ್ ಎಂದು ಕೂಡ ಬರೆದಿರುವ ಈ ಡಿಸೈನ್ ತುಂಬಾನೇ ಸುಂದರವಾಗಿದೆ.
ಇತರ ಗ್ಯಾಲರಿಗಳು