Valentines Week 2025: ಕರ್ನಾಟಕದಲ್ಲಿ ಪ್ರೀತಿಸಿ ಮದುವೆಯಾದ ಸಚಿವರು, ರಾಜಕಾರಣಿಗಳ ಪಟ್ಟಿ ದೊಡ್ಡದು, ಯಾರಿದ್ದಾರೆ ಪ್ರೇಮ ಜೋಡಿ
- ಕರ್ನಾಟಕದ ಹಲವು ರಾಜಕಾರಣಿಗಳು ಪ್ರೇಮಿಸಿ ವಿವಾಹವಾದವರೇ.ಕರ್ನಾಟಕ ಸರ್ಕಾರದ ಈಗಿನ ಸಂಪುಟದಲ್ಲಿಯೇ ಐವರು ಸಚಿವರು ಹೀಗೆ ಪ್ರೇಮಿಸಿ ಮದುವೆಯಾಗಿ ಆದರ್ಶ ಜೋಡಿಗಳು ಎನ್ನಿಸಿದ್ದಾರೆ. ಹೀಗೆ ಪ್ರೀತಿಸಿ ಮದುವೆಯಾದ ರಾಜಕಾರಣಗಳ ಚಿತ್ರ ನೋಟ ಇಲ್ಲಿದೆ.
- ಕರ್ನಾಟಕದ ಹಲವು ರಾಜಕಾರಣಿಗಳು ಪ್ರೇಮಿಸಿ ವಿವಾಹವಾದವರೇ.ಕರ್ನಾಟಕ ಸರ್ಕಾರದ ಈಗಿನ ಸಂಪುಟದಲ್ಲಿಯೇ ಐವರು ಸಚಿವರು ಹೀಗೆ ಪ್ರೇಮಿಸಿ ಮದುವೆಯಾಗಿ ಆದರ್ಶ ಜೋಡಿಗಳು ಎನ್ನಿಸಿದ್ದಾರೆ. ಹೀಗೆ ಪ್ರೀತಿಸಿ ಮದುವೆಯಾದ ರಾಜಕಾರಣಗಳ ಚಿತ್ರ ನೋಟ ಇಲ್ಲಿದೆ.
(1 / 9)
ಕರ್ನಾಟಕ ಸರ್ಕಾರದ ಗೃಹ ಸಚಿವ ಹಾಗೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು ಕನ್ಯಕಾ ಪರಮೇಶ್ವರಿ ಅವರನ್ನು ದಶಕಗಳ ಹಿಂದೆಯೇ ಪ್ರೇಮಿಸಿ ವಿವಾಹವಾದವರು. ಅವರದ್ದೂ ಆದರ್ಶ ಪ್ರೇಮ ಯಾನವೇ.
(2 / 9)
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಹಿರಿಯ ಸಚಿವರಾಗಿರುವ, ವಿಜಯಪುರ ಜಿಲ್ಲೆಯವರಾದ ಎಂ.ಬಿ.ಪಾಟೀಲ್ ಹಾಗೂ ಆಶಾ ಪಾಟೀಲ್ ಅವರದ್ದು ಪ್ರೇಮವಿವಾಹವೇ. ವಿಜಯಪುರದಲ್ಲಿ ಆ ಕಾಲಕ್ಕೆ ಪ್ರೇಮಿಸಿ ವಿವಾಹವಾದ ಪಾಟೀಲದ್ದು ಈಗಲೂ ಪ್ರೇಮ ಜೋಡಿಯೇ.
(3 / 9)
ಮಾಜಿ ಸಿಎಂ ಗುಂಡೂರಾವ್ ಅವರ ಪುತ್ರ, ಸಚಿವರಾಗಿರುವ ದಿನೇಶ್ ಗುಂಡೂರಾವ್ ಅವರು ಧರ್ಮವನ್ನು ಮೀರಿದ ಪ್ರೇಮ. ಟಬು ಅವರನ್ನು ಮೂರು ದಶಕದ ಹಿಂದೆಯೇ ವರಿಸಿ ಪ್ರೇಮವಿವಾಹವಾದ ಈ ಜೋಡಿ ಈಗಲೂ ಮಾದರಿಯಾಗಿದ್ದಾರೆ.
(4 / 9)
ಕರ್ನಾಟಕದ ಸಜ್ಜನ ರಾಜಕಾರಣಿ ಎಂದು ಹೆಸರು ಪಡೆದಿರುವ, ಮಾಜಿ ಸಚಿವ ಬೈರೇಗೌಡ ಅವರ ಪುತ್ರ ಕೃಷ್ಣಬೈರೇಗೌಡ ಕೂಡ ಪ್ರೇಮಿಸಿ ವಿವಾಹವಾದವರು. ಐಟಿ ಉದ್ಯೊಗಿಯಾಗಿದ್ದ ಮೀನಾಕ್ಷಿ ಅವರನ್ನು ಕೃಷ್ಣಬೈರೇಗೌಡ ವರಿಸಿದರು.
(5 / 9)
ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರದ್ದೂ ಪ್ರೇಮ ವಿವಾಹವೇ. ಬೆಂಗಳೂರಿನಲ್ಲಿ ಡಿಪ್ಲೋಮಾ ಓದುವಾಗಲೇ ಪ್ರೇಮಪಾಶಕ್ಕೆ ಬಿದ್ದು ಶೃತಿ ಅವರನ್ನು ವಿವಾಹವಾದವರು.
(6 / 9)
ಕಲಬುರಗಿ ಜಿಲ್ಲೆ ಜೇವರ್ಗಿ ಶಾಸಕ ಹಾಗೂ ಮಾಜಿ ಸಿಎಂ ಧರ್ಮಸಿಂಗ್ ಅವರ ಪುತ್ರ ಡಾ.ಅಜಯಸಿಂಗ್ ಕಾಲೇಜು ದಿನಗಳಲ್ಲಿಯೇ ಶ್ವೇತ ಅವರನ್ನು ಜಾತಿಯ ಎಲ್ಲೆ ಮೀರಿ ವಿವಾಹವಾದವರು.
(7 / 9)
ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕರು, ಸಚಿವರೂ ಆಗಿದ್ದ ಇಕ್ಬಾಲ್ ಅನ್ಸಾರಿ ಅವರದ್ದೂ ಪ್ರೇಮ ವಿವಾಹವೇ. ಅವರ ಪತ್ನಿ, ನಟಿ ಹಾಗು ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಪಂಚಮಿ.
(8 / 9)
ಮೈಸೂರಿನಿಂದ ಎರಡು ಬಾರಿ ಸಂಸದರಾಗಿದ್ದ ಬಿಜೆಪಿ ಯುವ ನಾಯಕ ಪ್ರತಾಪ್‌ಸಿಂಹ ಕಾಲೇಜು ದಿನಗಳಲ್ಲಿಯೇ ಡಾ.ಅರ್ಪಿತಾ ಅವರನ್ನು ಪ್ರೇಮಿಸಿಯೇ ವಿವಾಹವಾದವರು.
ಇತರ ಗ್ಯಾಲರಿಗಳು