ತಿರುಚಾನೂರು ದೇಗುಲದಲ್ಲಿ ವರಲಕ್ಷ್ಮೀ ಸಂಭ್ರಮ, ಬಂಗಾರ ನೂಲಿನ ಸೀರೆಯಲ್ಲಿ ಕಂಗೊಳಿಸಿದ ಪದ್ಮಾವತಿ ದೇವಿ
- Varalakshmi Vratham at Tiruchanur 2023: ಆಂದ್ರಪ್ರದೇಶದ ತಿರುಚಾನೂರಿನ ಪದ್ಮಾವತಿ ಅಮ್ಮನವರ ದೇವಸ್ಥಾನದ ಆಸ್ಥಾನ ಮಂಟಪದಲ್ಲಿ ಶುಕ್ರವಾರ(ಆಗಸ್ಟ್ 25) ವರಲಕ್ಷ್ಮೀ ವ್ರತ ಆಚರಿಸಲಾಯಿತು. ವಿಶೇಷ ದಿನದಂದು ಪದ್ಮಾವತಿ ದೇವಿಯು ಚಿನ್ನದ ನೂಲಿನ ಸೀರೆಯುಟ್ಟು ವಿಶೇಷ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದಳು. ದೈವಿಕ ಕ್ಷಣದ ಫೋಟೋಗಳನ್ನು ನೀವೂ ಕಣ್ತುಂಬಿಕೊಳ್ಳಿ.

(1 / 7)
ವರಲಕ್ಷ್ಮೀ ವ್ರತದ ಹಿನ್ನೆಲೆಯಲ್ಲಿ ಮುಂಜಾನೆಯೇ ದೇವಿಗೆ ಸಹಸ್ರನಾಮಾರ್ಚನೆ, ನಿತ್ಯಾರ್ಚನೆ ನಡೆಯಿತು. ಅಲ್ಲದೆ ಉತ್ಸವ ಮೂರ್ತಿಗಳಿಗೆ ಅಭಿಷೇಕ ನೆರವೇರಿಸಲಾಯಿತು.(TTD)
(2 / 7)
ಈ ದಿನ ಅಮ್ಮನವರು ಚಿನ್ನದ ನೂಲಿನ ಸೀರೆಯುಟ್ಟು ವಿಶೇಷ ಅಲಂಕಾರದಲ್ಲಿ ಭಕ್ತರಿಗೆ ದರ್ಶನ ನೀಡಿದರು. ಬಳಿಕ ಪದ್ಮಾವತಿಯ ಉತ್ಸವಮೂರ್ತಿಯನ್ನು ಆಸ್ಥಾನ ಮಂಟಪಕ್ಕೆ ಕರೆತಂದು ಪದ್ಮಪೀಠಕ್ಕೆ ಪೂಜೆ ಸಲ್ಲಿಸಲಾಯಿತು. ಅಲ್ಲಿ ಪುಣ್ಯಾಹವಾಚನ, ಕಲಶಸ್ಥಾಪನೆ, ದೇವಿಯ ಆರಾಧನೆ, ಅಂಗಪೂಜೆ, ಲಕ್ಷ್ಮೀ ಸಹಸ್ರನಾಮಾರ್ಚನೆ, ಅಷ್ಟೋತ್ತರ ಶತ ನಾಮಾವಳಿ ನೆರವೇರಿತು.(TTD)
(3 / 7)
ಪದ್ಮಾವತಿ ದೇವಿಗೆ ಗುಲಾಬಿ, ಸೇವಂತಿಗೆ, ಮಲ್ಲಿಗೆ, ಸಂಪಿಗೆ, ತುಳಸಿ, ತಾವರೆ ಸೇರಿದಂತೆ ಬಗೆಬಗೆಯ ಪುಷ್ಪಗಳಿಂದ ಅಲಂಕರಿಸಲಾಯ್ತು(TTD)
(4 / 7)
ದೇವಾಲಯದ ಅರ್ಚಕರಾದ ಶ್ರೀ ಶ್ರೀನಿವಾಸನ್ ಮಾತನಾಡಿ, ಪುರಾಣದಲ್ಲಿ ವರಲಕ್ಷ್ಮೀ ವ್ರತದ ಮಹತ್ವವನ್ನು ವಿವರಿಸಿದ್ದಾರೆ. ಈ ವರಲಕ್ಷ್ಮಿ ವ್ರತದ ವಿಶೇಷತೆ ಮತ್ತು ಅನುಸರಿಸಬೇಕಾದ ಕ್ರಮದ ಬಗ್ಗೆ ಹಿಂದೆ ಶಂಕರರು ಪಾರ್ವತಿಗೆ ತಿಳಿಸಿದರೆಂದು ಪುರಾಣ ಹೇಳುತ್ತದೆ.(TTD)
(5 / 7)
ತ್ರೇತಾಯುಗದಲ್ಲಿ ಕುಂಡಲಿನಿ ನಗರದಲ್ಲಿ ನೆಲೆಸಿದ್ದ ಚಾರುಮತಿ ಎಂಬ ಭಕ್ತೆ ವರಲಕ್ಷ್ಮೀ ವ್ರತಾಚರಣೆ ಮಾಡಿ ಪಡೆದ ಫಲದ ಕುರಿತು ಅರ್ಚಕರು ವಿವರಿಸಿದರು. ಶ್ರೀಮಹಾಲಕ್ಷ್ಮಿಯು ಸಾಕ್ಷಾತ್ ಪ್ರತ್ಯಕ್ಷಳಾದ ತಿರುಚಾನೂರಿನ ವರಲಕ್ಷ್ಮೀ ವ್ರತದಲ್ಲಿ ಸ್ತ್ರೀಯರು ಭಾಗವಹಿಸಿದರೆ ದೀರ್ಘಾಯುಷ್ಯ, ಐಶ್ವರ್ಯ, ಆರೋಗ್ಯ, ಕೌಟುಂಬಿಕ ಸುಖ ಸೇರಿದಂತೆ ಸತ್ಫಲ ಲಭಿಸುತ್ತದೆ ಎಂದು ಪುರಾಣಗಳ ಮೂಲಕ ತಿಳಿದುಬರುತ್ತದೆ ಎಂದರು.(TTD)
(6 / 7)
ದೇವಿಗೆ 12 ಬಗೆಯ ನೈವೇದ್ಯ ಇಡಲಾಯ್ತು. ಬಳಿಕ ಮಹಾ ಮಂಗಳಾರತಿಯೊಂದಿಗೆ ವರಲಕ್ಷ್ಮೀ ವ್ರತ ಮುಕ್ತಾಯವಾಯಿತು. (TTD)
ಇತರ ಗ್ಯಾಲರಿಗಳು