Varamahalakshmi Festival: ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡಿಸಬಹುದಾದ ಆಕರ್ಷಕ ರಂಗೋಲಿ ಡಿಸೈನ್‌ಗಳು; ಯಾವುದು ಇಷ್ಟ ಆಯ್ತು?
ಹಿಂದೂಗಳು ಪ್ರತಿ ದಿನ ಮನೆ ಮುಂದಿನ ಅಂಗಳವನ್ನು ಸ್ವಚ್ಛಗೊಳಿಸಿ ಸಗಣಿಯಲ್ಲಿ ಸಾರಿಸಿ, ರಂಗೋಲಿ ಬಿಡುವುದು ವಾಡಿಕೆ. ಇತರ ದಿನಗಳಿಗಿಂತ ಶುಕ್ರವಾರ ಹಾಗೇ ಪ್ರತಿ ಹಬ್ಬ ಹರಿದಿನ, ವಿಶೇಷ ಸಂದರ್ಭಗಳಲ್ಲಿ ರಂಗೋಲಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ.
(1 / 15)
ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ರಂಗೋಲಿ ಹಾಕಿ, ಬಣ್ಣ ತುಂಬಿಸುವುದೇ ದೊಡ್ಡ ಸಂಭ್ರಮ. ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು 3 ದಿನಗಳಷ್ಟೇ ಬಾಕಿ ಇದೆ. ಹಬ್ಬಕ್ಕೆ ಯಾವ ರಂಗೋಲಿ ಬಿಡಿಸಬೇಕೆಂದುಕೊಂಡಿದ್ದೀರಿ? ಇನ್ನೂ ಗೊಂದಲ ಇದ್ದಲ್ಲಿ ಇಲ್ಲಿದೆ ನೋಡಿ ಕೆಲವು ರಂಗೋಲಿ ಐಡಿಯಾಗಳು.
(2 / 15)
ಕೇಸರಿ, ಕೆಂಪು, ಹಳದಿ ಹಾಗೂ ಬಿಳಿ ಬಣ್ಣಗಳನ್ನು ಬಳಸಿ ಬಿಡಿಸಬಹುದಾದ ಬಾರ್ಡರ್ ರಂಗೋಲಿ(PC: Menakaʼs Rangoli)
(3 / 15)
ಹಬ್ಬದ ದಿನ ಮನೆ ಮುಂದೆ ನೀವು ಈ ರಂಗೋಲಿಯನ್ನು ಬಿಡಿಸಬಹುದು. ಬಾಚಣಿಗೆ ಬಳಸಿ ಕೂಡಾ ರಂಗೋಲಿಯನ್ನು ಈ ರೀತಿ ಡಿಸೈನ್ ಮಾಡಬಹುದು.
(5 / 15)
ಹಳದಿ, ನೀಲಿ, ಕಡು ಗುಲಾಬಿ, ಬಿಳಿ ಬಣ್ನದ ದೊಡ್ಡ ಹೂವಿನ ರಂಗೋಲಿ. ಬಣ್ಣ ಹಚ್ಚಿದ ನಂತರ ಸಣ್ಣ ಕಡ್ಡಿಯ ಸಹಾಯದಿಂದ ಹೂವಿನ ದಳಗಳನ್ನು ಡಿಸೈನ್ ಮಾಡಲಾಗಿದೆ.
(7 / 15)
ವರಮಹಾಲಕ್ಷ್ಮಿ ಪೀಠದ ಮುಂದೆ ಸ್ಥಳ ಇದ್ದಲ್ಲಿ ಈ ರಂಗೋಲಿಯನ್ನು ಬಿಡಿಸಬಹುದು. ಆಥವಾ ಮನೆ ಹೊರಗೆ ಬಿಡಿಸಲು ಈ ರಂಗೋಲಿ ಕೂಡಾ ಸೂಕ್ತವಾಗಿದೆ.
(9 / 15)
ಆಕರ್ಷಕ ಹೂವಿನ ರಂಗೋಲಿ, ಲಕ್ಷ್ಮೀ ಪೀಠದ ಮುಂದೆ ಈ ಸುಂದರ ರಂಗೋಲಿಯನ್ನು ಬಿಡಿಸಿದರೆ ಆಕರ್ಷಕವಾಗಿ ಕಾಣುತ್ತದೆ. ನಿಮ್ಮ ಮನೆಯ ನೆಲದ ಬಣ್ಣಕ್ಕೆ ವಿರುದ್ಧ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಿ. ಕಪ್ಪು ಟೈಲ್ಸ್ ಇದ್ದರೆ ಬಿಳಿ, ತಿಳಿ ಬಣ್ಣಗಳನ್ನು ಬಳಸಿ.
(14 / 15)
ಒಂದು ವೇಳೆ ನಿಮಗೆ ಬಣ್ಣದ ರಂಗೋಲಿ ಬಿಡಿಸಲು ಸಾಧ್ಯವಾಗದಿದ್ದರೆ, ಈ ರೀತಿ ಬಿಳಿ ರಂಗೋಲಿಯಲ್ಲೇ ಸುಲಭವಾಗಿ ಬಿಡಿಸಬಹುದಾದ ರಂಗೋಲಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಇತರ ಗ್ಯಾಲರಿಗಳು