ವಾಸ್ತು ಟಿಪ್ಸ್: ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದೀರಾ, ಲಾಭ ಬೇಕೆಂದರೆ ಅಂಗಡಿಯಲ್ಲಿ ಈ ವಾಸ್ತು ನಿಯಮಗಳನ್ನು ಪಾಲಿಸಿ
Vastu Tips: ಪ್ರತಿಯೊಬ್ಬರಿಗೂ ತಾವು ಮಾಡುವ ಉದ್ಯೋಗ ಅಥವಾ ವ್ಯಾಪಾರ ಚೆನ್ನಾಗಿ ನಡೆಯಬೇಕು ಮತ್ತು ಲಾಭ ಪಡೆಯಬೇಕು ಎಂಬ ಆಸೆ ಇರುತ್ತದೆ. ಆದರೆ ಎಷ್ಟೇ ಪರಿಶ್ರಮ ಪಟ್ಟರೂ ಲಾಭ ದೊರೆಯುವುದಿಲ್ಲ. ಕೆಲವೊಮ್ಮೆ ನಷ್ಟವೇ ಹೆಚ್ಚಾಗಿರುತ್ತದೆ.
(1 / 7)
ನೀವು ಎಷ್ಟೇ ಪ್ರಯತ್ನಿಸಿದರೂ ನಿಮಗೆ ಸಮಸ್ಯೆ ಆಗುತ್ತಿದ್ದರೆ ಅಲ್ಲಿ ವಾಸ್ತುದೋಷ ಇರಬಹುದು. ಆದ್ದರಿಂದ ಕೆಲವೊಂದು ವಾಸ್ತು ನಿಯಮಗಳನ್ನು ಅನುಸರಿಸಿದರೆ ಖಂಡಿತ ನಿಮ್ಮ ಆದಾಯ ವೃದ್ಧಿಯಾಗುತ್ತದೆ.
(2 / 7)
ನಿಮ್ಮ ಅಂಗಡಿಯ ಈಶಾನ್ಯ ಮೂಲೆಯಲ್ಲಿ ಗೋಮತಿ ಚಕ್ರದಿಂದ ಮಾಡಿದ ಸ್ವಸ್ತಿಕ್ ಚಿಹ್ನೆಯನ್ನು ಇರಿಸಿ. ನಿಮ್ಮ ಅಂಗಡಿಯಲ್ಲಿ ಎಲ್ ಆಕಾರದ ಪೀಠೋಪಕರಣಗಳನ್ನು ಇಡಬೇಡಿ. ಪೀಠೋಪಕರಣಗಳು ಆಯತಾಕಾರ ಅಥವಾ ಚೌಕವಾಗಿರಬೇಕು.
(3 / 7)
ಗೋಡೆ ಗಡಿಯಾರವನ್ನು ದಕ್ಷಿಣ ದಿಕ್ಕಿಗೆ ಬದಲಾಗಿ ಉತ್ತರ ದಿಕ್ಕಿನಲ್ಲಿ ಇಡಿ. ನಿಮ್ಮ ಅಂಗಡಿಯಲ್ಲಿ ದೇವರ ಕೋಣೆ ನಿಮ್ಮ ಬೆನ್ನ ಹಿಂದೆ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಹಿಂದೆ ಗೋಡೆಯು ಸಂಪೂರ್ಣವಾಗಿ ಖಾಲಿ ಇರಬೇಕು.
(5 / 7)
ನಿಮ್ಮ ಅಂಗಡಿಯಲ್ಲಿ ಶೌಚಾಲಯವಿದ್ದರೆ ಅಲ್ಲಿ ಹಸಿರು ಗಿಡಗಳನ್ನು ಇಡಿ. ಅಲ್ಲದೆ, ನಿಮ್ಮ ಅಂಗಡಿಯ ಬಣ್ಣದ ಬಗ್ಗೆಯೂ ನಿಮಗೆ ನಿಗಾ ಇರಬೇಕು. ನೀಲಿ, ಬೂದು ಮತ್ತು ಬಿಳಿ ಬಣ್ಣಗಳು ಒಳ್ಳೆಯದು.
(6 / 7)
ನಿಮ್ಮ ಅಂಗಡಿ ಸ್ವಚ್ಛವಾಗಿರಲಿ. ಪ್ರವೇಶ ದ್ವಾರವನ್ನು ಸ್ವಚ್ಛವಾಗಿ ಮತ್ತು ಅಲಂಕರಿಸಿ. ನೀವು ಅಥವಾ ಅಂಗಡಿಗೆ ಬರುವವರು ಓಡಾಡಲು ಸ್ಥಳಾವಕಾಶದ ಕೊರತೆ ಇರಬಾರದು.
(PC: Pixabay)ಇತರ ಗ್ಯಾಲರಿಗಳು