Vastu Tips: ನಿಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸದಿರಲು ಸಂಜೆ ವೇಳೆ ನೀವು ಮಾಡುವ ಈ ಕೆಲಸಗಳೇ ಕಾರಣವಿರಬಹುದು
- ಅನೇಕ ಜನರು ಮನೆ ನಿರ್ಮಾಣದಿಂದ ಹಿಡದು ಮನೆಯೊಳಗೆ ಯಾವ್ಯಾವ ವಸ್ತುಗಳನ್ನು ಎಲ್ಲೆಲ್ಲಿ ಇಡಬೇಕೆಂಬುದಕ್ಕೆ ಕೂಡ ವಾಸ್ತು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಹೀಗೆ ಮಾಡಿದರೆ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ, ಆದಾಯ ಹೆಚ್ಚುತ್ತದೆ ಎಂದು ನಂಬುತ್ತಾರೆ. ಆದರೂ ಕೆಲವರಿಗೆ ಯಾವ ಸಮಯದಲ್ಲಿ ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ಅರಿವಿರುವುದಿಲ್ಲ.
- ಅನೇಕ ಜನರು ಮನೆ ನಿರ್ಮಾಣದಿಂದ ಹಿಡದು ಮನೆಯೊಳಗೆ ಯಾವ್ಯಾವ ವಸ್ತುಗಳನ್ನು ಎಲ್ಲೆಲ್ಲಿ ಇಡಬೇಕೆಂಬುದಕ್ಕೆ ಕೂಡ ವಾಸ್ತು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಹೀಗೆ ಮಾಡಿದರೆ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ, ಆದಾಯ ಹೆಚ್ಚುತ್ತದೆ ಎಂದು ನಂಬುತ್ತಾರೆ. ಆದರೂ ಕೆಲವರಿಗೆ ಯಾವ ಸಮಯದಲ್ಲಿ ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ಅರಿವಿರುವುದಿಲ್ಲ.
(1 / 6)
ಇದೀಗ ನಾವು ವಾಸ್ತುಶಾಸ್ತ್ರದ ಪ್ರಕಾರ ಸಂಜೆ ಯಾವ ಕೆಲಸಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ. ಕೆಲವೊಂದು ವಾಸ್ತು ಕ್ರಮಗಳನ್ನು ಅನುಸರಿಸದಿದ್ದರೆ ಮನೆಯಲ್ಲಿ ಶಾಂತಿಯುತ ವಾತಾವರಣ ಮಾಯವಾಗಬಹುದು. ಅಲ್ಲದೆ ಮನೆಯಲ್ಲಿ ಲಕ್ಷ್ಮೀದೇವಿ ನೆಲೆಸಲು ಕೆಲವೊಂದು ನಿಯಮಗಳನ್ನ ಪಾಲಿಸುವುದು ಒಳ್ಳೆಯದು.
(pixel)(2 / 6)
ಅನೇಕರು ಸಾಯಂಕಾಲ ನಿದ್ದೆ ಮಾಡುತ್ತಾರೆ. ಅವರ ಕೆಲಸದ ಸಮಯ, ಒತ್ತಡ, ಪರಿಸ್ಥಿತಿಗಳು ಸಂಜೆ ವೇಳೆ ನಿದ್ದೆ ಮಾಡುವಂತೆ ಮಾಡಬಹುದು. ಆದರೆ ಸಂಜೆ ವೇಳೆ ಮಲಗಬಾರದು ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಈ ಸಮಯದಲ್ಲಿ ನಿದ್ರಿಸಿದರೆ ಮನೆಯಲ್ಲಿ ಲಕ್ಷ್ಮೀ ದೇವಿ ಇರುವುದಿಲ್ಲ. ಸಾಯಂಕಾಲ ನಿದ್ರಿಸದಿರಲು ಪ್ರಯತ್ನಿಸಿ. ಸಾಧ್ಯವಾದರೆ ನಿಮ್ಮ ಮುಖವನ್ನು ತೊಳೆದು ನಂತರ ಬೇರೆ ಏನಾದರೂ ಮಾಡಲು ಪ್ರಯತ್ನಿಸಿ.
(pixel)(3 / 6)
ಸಂಜೆ ನಿಮ್ಮ ಮನೆಯನ್ನು ಸ್ವಚ್ಛಗೊಳಿಸಲು ಪೊರಕೆಯನ್ನು ಬಳಸಬೇಡಿ. ಪೊರಕೆ ಬಳಸಿ ಕಸ ಗುಡಿಸಿದರೆ ಮನೆಯಲ್ಲಿನ ಸಕಲ ಶುಭ ಹಾಗೂ ಧನಾತ್ಮಕ ಅಂಶಗಳು ದೂರವಾಗುತ್ತದೆ, ಜೊತೆಗೆ ಲಕ್ಷ್ಮಿ ದೇವಿಯೂ ನಿಮ್ಮ ಮನೆ ಬಿಟ್ಟು ಹೊರಡುತ್ತಾಳೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ಹೀಗಾಗಿ ಬಟ್ಟೆಯನ್ನು ಬಳಸಿ ಮನೆಯನ್ನು ಸ್ವಚ್ಛಗೊಳಿಸಿ ನಂತರ ದೇವರಿಗೆ ದೀಪ ಹಚ್ಚಿರಿ.
(pixel)(4 / 6)
ವಾಸ್ತುಶಾಸ್ತ್ರದ ಪ್ರಕಾರ ಸಂಜೆ ವೇಳೆ ಮಹಿಳೆಯರನ್ನು ನಿಂದಿಸಬಾರದು ಎಂದು ಹೇಳಲಾಗಿದೆಯಾದರೂ, ಹೆಣ್ಣನ್ನು ಯಾವುದೇ ಸಂದರ್ಭದಲ್ಲಿ ನಿಂದಿಸಬಾರದು, ಆಕೆಯನ್ನು ಗೌರವದಿಂದ ಕಾಣಬೇಕು ಎಂಬುದನ್ನು ಮನುಷ್ಯರಾದ ನಾವು ಅರಿತುಕೊಳ್ಳಬೇಕು.
(pixel)(5 / 6)
ತುಳಸಿ ಗಿಡಕ್ಕೆ ಸಂಜೆ ನೀರು ಹಾಕಬಾರದು. ಅದೇ ರೀತಿ ಸಂಜೆ ತುಳಸಿ ಗಿಡದ ಎಲೆ, ಹೂವು ಕೀಳಬಾರದು. ಹೀಗೆ ಮಾಡಿದರೂ ಲಕ್ಷ್ಮೀ ದೇವಿ ಮನೆ ಬಿಟ್ಟು ಹೋಗುತ್ತಾಳೆ. ಬಳಿಕ ನೀವು ಹಿಂದೆಂದಿಗಿಂತಲೂ ಕಷ್ಟಗಳನ್ನು ಮತ್ತು ಬಡತನವನ್ನು ಎದುರಿಸುವ ಸಾಧ್ಯತೆಗಳಿವೆ.
(pxel)ಇತರ ಗ್ಯಾಲರಿಗಳು