ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆಯಾ: ಮನೆಯ ಯಾವ ಸ್ಥಳದಲ್ಲಿ ತಿಜೋರಿ ಇಡಬೇಕು? ಇಲ್ಲಿದೆ ವಾಸ್ತು ಟಿಪ್ಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆಯಾ: ಮನೆಯ ಯಾವ ಸ್ಥಳದಲ್ಲಿ ತಿಜೋರಿ ಇಡಬೇಕು? ಇಲ್ಲಿದೆ ವಾಸ್ತು ಟಿಪ್ಸ್‌

ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆಯಾ: ಮನೆಯ ಯಾವ ಸ್ಥಳದಲ್ಲಿ ತಿಜೋರಿ ಇಡಬೇಕು? ಇಲ್ಲಿದೆ ವಾಸ್ತು ಟಿಪ್ಸ್‌

ಹಣ ಸಂಪಾದನೆ ಮಾಡುವುದು ಸುಲಭದ ಮಾತಲ್ಲ, ಹಾಗೆ ಬಂದ ಹಣವನ್ನು ಉಳಿತಾಯ ಮಾಡುವುದು ಕೂಡಾ ಅಷ್ಟು ಸುಲಭವಲ್ಲ. ನೀವು ಸಂಪಾದಿಸುವ ಹಣ ಸ್ವಲ್ಪವೂ ಉಳಿಯದೆ ಖರ್ಚಾಗುತ್ತಿದ್ದರೆ ಅದಕ್ಕೆ ವಾಸ್ತುದೋಷವೂ ಕಾರಣವಿರಬಹುದು.

ಹಣಕಾಸಿನ ಸಮಸ್ಯೆಗಳಿಗೆ ವಾಸ್ತುಶಾಸ್ತ್ರದಲ್ಲಿ ಪರಿಹಾರವಿದೆ. ವಾಸ್ತು ಸಲಹೆಗಳ ಸಹಾಯದಿಂದ, ನೀವು ಗಳಿಸುವ ಹಣವು ದೀರ್ಘಕಾಲ ಉಳಿಯುತ್ತದೆ. ಹೆಚ್ಚು ಲಾಭವಿರುತ್ತದೆ. ಜೊತೆಗೆ ಮುಂದೆಯೂ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಇದಕ್ಕಾಗಿ ನೀವು ವಾಸ್ತು ಪ್ರಕಾರ ಕೆಲವು ನಿಯಮಗಳ ಬಗ್ಗೆ ತಿಳಿದಿರಬೇಕು.
icon

(1 / 6)

(Adobe stock)

ಒಂದು ವೇಳೆ ನೀವು ಮನೆಯಲ್ಲಿ ಹಣವನ್ನು ಆಗ್ನೇಯ ದಿಕ್ಕಿನಲ್ಲಿ ಇಡುತ್ತಿದ್ದರೆ, ಮೊದಲು ಇದನ್ನು ನಿಲ್ಲಿಸಿ, ಏಕೆಂದರೆ ಈ ದಿಕ್ಕು ಅಗ್ನಿದೇವನಿಗೆ ಸಂಬಂಧಿಸಿದೆ. ಆದ್ದರಿಂದ ಈ ಈ ದಿಕ್ಕಿನಲ್ಲಿ ನಗದು ಮತ್ತು ಆಭರಣಗಳಂತಹ ಇತರ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳುವುದು ನಿಮಗೆ ಆರ್ಥಿಕ ನಷ್ಟವನ್ನು ಉಂಟುಮಾಡುತ್ತದೆ. ಇದಲ್ಲದೆ, ಅನಗತ್ಯ ವೆಚ್ಚಗಳು ಹೆಚ್ಚಾಗಬಹುದು.
icon

(2 / 6)

ಉತ್ತರ ಸಂಪತ್ತು ಮತ್ತು ಸಮೃದ್ಧಿಯ ದೇವರು ಕುಬೇರನ ದಿಕ್ಕು. ಯಾವಾಗಲೂ ಈ ದಿಕ್ಕನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಹಾಗೇ ಉತ್ತರ ದಿಕ್ಕಿನಲ್ಲಿ ಹಣ, ಒಡವೆಗಳನ್ನು ಇಡಬಹುದು. 
icon

(3 / 6)

(adobe stock)

ನೈರುತ್ಯ ದಿಕ್ಕನ್ನು ವಾಸ್ತು ಶಾಸ್ತ್ರದ ಪ್ರಕಾರ ಭೂಮಿತಾಯಿಯ ಅಂಶ  ಎಂದು ಪರಿಗಣಿಸಲಾಗಿದೆ. ಆದ್ದರಿಂದ ಈ ದಿಕ್ಕಿನಲ್ಲಿ ಕೂಡಾ ನೀವು ನಿಮ್ಮ ತಿಜೋರಿ, ಹಣ, ಚಿನ್ನ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಇಟ್ಟರೆ ಅದು ಇನ್ನಷ್ಟು ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಉತ್ತರ ದಿಕ್ಕಿಗೆ ಕೂಡಾ ಬೀರು ಅಥವಾ ಹಣದ ತಿಜೋರಿ ಇಡಬಹುದು. 
icon

(4 / 6)

ಪಶ್ಚಿಮ ದಿಕ್ಕಿಗೆ ಮುಖಮಾಡಿ ಲಾಕರ್ ಬಾಗಿಲು ತೆಗೆಯಬಾರದು. ಹೀಗೆ ಮಾಡಿದರೆ ಹಣದ ಹೊರ ಹರಿವು ಹೆಚ್ಚಾಗಲಿದೆ, ಅಂದರೆ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತದೆ. ಹಣದ ತಿಜೋರಿಯನ್ನು ಮನೆಯ ದಕ್ಷಿಣ ದಿಕ್ಕಿಗೆ ಇಡಬೇಡಿ, ಜೊತೆಗೆ ಸ್ನಾನಗೃಹ, ಅಡುಗೆ ಮನೆಯಲ್ಲೂ ಹಣವನ್ನು ಇಡದಿರಿ. 
icon

(5 / 6)

( adobe stock)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(6 / 6)

ಇತರ ಗ್ಯಾಲರಿಗಳು