New Year Calendar: ಕ್ಯಾಲೆಂಡರ್‌ಗೂ ಬೇಕು ವಾಸ್ತು, ಈ ಸ್ಥಳದಲ್ಲಿ ಇರಿಸಿದ್ರೆ ನಿಮಗೆ ಲಕ್ಕೋ ಲಕ್ಕು
ಹೊಸ ವರ್ಷ ಆರಂಭವಾಗಿ 3 ದಿನಗಳು ಕಳೆದಿವೆ. ಹಳೆಯ ಕ್ಯಾಲೆಂಡರ್ ಬದಲಾಗಿದೆ. ಜನರು ಮಾರ್ಕೆಟ್‌ನಿಂದ ತಮಗಿಷ್ಟವಾದ ಕ್ಯಾಲೆಂಡರ್ ತಂದು ಗೋಡೆಗೆ ಹಾಕಿದ್ದಾರೆ.
(1 / 8)
ನೀವೂ ಈಗಾಗಲೇ ಕ್ಯಾಲೆಂಡರ್ ತಂದಿದ್ದೀರಾ? ಹಾಗಿದ್ರೆ ವಾಸ್ತು ಪ್ರಕಾರ ಕ್ಯಾಲೆಂಡರನ್ನು ಮನೆಯ ಯಾವ ಭಾಗದಲ್ಲಿ ಹಾಕಬೇಕು? ಯಾವ ದಿಕ್ಕಿನಲ್ಲಿ ಹಾಕಿದರೆ ಶುಭ ಎಂಬುದನ್ನು ನೋಡೋಣ.
(2 / 8)
ಹೊಸ ವರ್ಷದ ಕ್ಯಾಲೆಂಡರ್ ಅನ್ನು ಹೊಸ ಆಶಯಗಳೊಂದಿಗೆ ಮನೆಗೆ ಕರೆದೊಯ್ಯಲಾಗುತ್ತದೆ. ಆದ್ದರಿಂದ ಹೊಸ ವರ್ಷ ಬಂದಾಕ ಹಳೆಯ ಕ್ಯಾಲೆಂಡರ್ ಅನ್ನು ಮನೆಯಲ್ಲಿ ಇರಿಸಬಾರದು.(unsplash)
(3 / 8)
ವಾಸ್ತು ಪ್ರಕಾರ ಮನೆಯಲ್ಲಿ ನೀವು ಮನೆಯಲ್ಲಿ ಕ್ಯಾಲೆಂಡರನ್ನು ಎಲ್ಲೆಂದರಲ್ಲಿ ಹಾಕುವ ಹಾಗಿಲ್ಲ ಅದಕ್ಕೆ ಒಂದು ನಿರ್ದಿಷ್ಟ ಸ್ಥಳವಿದೆ. (Unsplash)
(4 / 8)
ಹೊಸ ವರ್ಷದ ಕ್ಯಾಲೆಂಡರ್ ಹಾಕಲು ಪಶ್ಚಿಮ ದಿಕ್ಕು ಸೂಕ್ತ ಎಂದು ವಾಸ್ತುತಜ್ಞರು ಹೇಳುತ್ತಾರೆ. ಏಕೆಂದರೆ ಪಂಚಾಂಗದ ಪಶ್ಚಿಮ ದಿಕ್ಕು ಮಂಗಳಕರವೆಂದು ನಂಬಲಾಗಿದೆ. ಈ ದಿಕ್ಕಿನಲ್ಲಿ ಇಟ್ಟರೆ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂದು ನಂಬಲಾಗಿದೆ. (unsplash)
(5 / 8)
ಕುಬೇರನ ದಿಕ್ಕು ಎನಿಸಿಕೊಂಡ ಉತ್ತರಕ್ಕೆ ಮುಖ ಮಾಡುವಂತೆ ಪಂಚಾಂಗವನ್ನು ಇಡಬಹುದು. ಈ ದಿಕ್ಕಿನಲ್ಲಿ ಪಂಚಾಂಗ, ಕ್ಯಾಲೆಂಡರ್ ಇಟ್ಟರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.(unsplash)
(6 / 8)
ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರನ್ನು ಯಾವುದೇ ಸಂದರ್ಭದಲ್ಲಿ ದಕ್ಷಿಣ ದಿಕ್ಕಿಗೆ ಇಡಬಾರದು. ಹೀಗೆ ಮಾಡುವುದರಿಂದ ಮನೆಯಲ್ಲಿ ವೈದ್ಯಕೀಯ ವೆಚ್ಚ ಹೆಚ್ಚಾಗುತ್ತದೆ. ಆರ್ಥಿಕ ನಷ್ಟವನ್ನೂ ಎದುರಿಸುವ ಪರಿಸ್ಥಿತಿ ಎದುರಾಗಲಿದೆ.(unsplash)
ಇತರ ಗ್ಯಾಲರಿಗಳು