ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ಏಕೆ? ಆರ್ಥಿಕ ಬಿಕ್ಕಟ್ಟಿದ್ದವರಿಗೆ ಮಾವಿನೆಲೆ ಹೇಗೆ ಸಹಾಯ ಮಾಡತ್ತೆ? ವಾಸ್ತುಶಾಸ್ತ್ರ ಹೇಳೋದಿಷ್ಟು
- Mango Leaves Vastu tips: ಹಿಂದೂ ಧರ್ಮದಲ್ಲಿ ಹಬ್ಬ-ಹರಿದಿನ, ಪೂಜೆ-ಪುನಸ್ಕಾರ, ಹೋಮ-ಹವನ, ಮದುವೆ ಸೇರಿದಂತೆ ಎಲ್ಲಾ ಶುಭಕಾರ್ಯಗಳಿಗೆ ಮನೆಗಳ ಬಾಗಿಲಿಗೆ ಮಾವಿನ ಎಲೆ ಅಥವಾ ಮಾವಿನ ತೋರಣ ಕಟ್ಟುತ್ತೇವೆ. ಮಾವಿನ ಎಲೆಯನ್ನು ಯಾಕೆ ಕಟ್ಟಬೇಕು? ಆರ್ಥಿಕ ಬಿಕ್ಕಟ್ಟಿದ್ದವರಿಗೆ ಮಾವಿನೆಲೆ ಹೇಗೆ ಸಹಾಯ ಮಾಡುತ್ತೆ? ವಾಸ್ತುಶಾಸ್ತ್ರ ಏನು ಹೇಳತ್ತೆ ನೋಡೋಣ ಬನ್ನಿ..

(1 / 6)
ಹಿಂದೂ ಧರ್ಮದಲ್ಲಿ ಮಾವಿನ ಎಲೆಯನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಬಹುತೇಕ ಶುಭಕಾರ್ಯಗಳು ಮಾವಿನ ಎಲೆಯ ಅಲಂಕಾರವಿಲ್ಲದೇ ಅಪೂರ್ಣ. ವಾಸ್ತುಶಾಸ್ತ್ರದ ಪ್ರಕಾರ ಮಾವಿನ ಎಲೆಯಲ್ಲಿರುವ ಶಕ್ತಿಯೇನು ಎಂದು ತಿಳಿಯೋಣ.
(2 / 6)
ಮನೆಯ ಪ್ರವೇಶ ದ್ವಾರ ಅಥವಾ ಮನೆಯ ಬಾಗಿಲಿಗೆ ಮಾವಿನ ಎಲೆಯ ತೋರಣ ಅಥವಾ ಎಲೆಗಳ ಗುಚ್ಚವನ್ನು ಕಟ್ಟುವುದರಿಂದ ಎಲ್ಲಾ ಶುಭಕಾರ್ಯಗಳು ಸುಗಮವಾಗಿ ನಡೆಯುತ್ತದೆ. ಯಾವುದೇ ದುಷ್ಟಶಕ್ತಿ ಅಥವಾ ನಕಾರಾತ್ಮಕ ಶಕ್ತಿ ಶುಭಕಾರ್ಯಗಳನ್ನು ಅಡ್ಡಿಪಟ್ಟಿಸುವುದಿಲ್ಲ ಎಂದು ವಾಸ್ತುಶಾಸ್ತ್ರ ಹೇಳುತ್ತದೆ.
(3 / 6)
ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಮಾವಿನೆಲೆ ತರುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತದೆ. ಈಡೇರದ ಇಷ್ಟಾರ್ಥಗಳು ಬೇಗ ನೆರವೇರುತ್ತದೆ ಎಂದು ನಂಬಲಾಗಿದೆ.
(4 / 6)
ತೋರಣದ ಜೊತೆಗೆ ಪೂಜೆಯ ಸಮಯದಲ್ಲಿ ಮನೆಯಲ್ಲಿ ಮಾವಿನ ಎಲೆಗಳಿಂದ ನೀರನ್ನು ಸಿಂಪಡಿಸಿದರೆ ಆರ್ಥಿಕ ಸುಧಾರಣೆ ಕಂಡುಬರುತ್ತದೆ.
(5 / 6)
ಒಬ್ಬ ವ್ಯಕ್ತಿಯು ದೀರ್ಘಕಾಲದವರೆಗೆ ಸಾಲದಲ್ಲಿದ್ದರೆ ಅಥವಾ ಯಾವುದೇ ರೀತಿಯ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ 11 ಮಾವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಹಸಿ ಹತ್ತಿಯಲ್ಲಿ ಕಟ್ಟಿ ನಂತರ ಜೇನುತುಪ್ಪದಲ್ಲಿ ಅದ್ದಿ. ಈಗ ಈ ಎಲೆಗಳನ್ನು ಶಿವ-ಪಾರ್ವತಿ ಮಗಳಾದ ಅಶೋಕ ಸುಂದರಿಗೆ ಅರ್ಪಿಸಬೇಕು. ಶಿವನ ದೇವಾಲಯದಲ್ಲಿ ನೀಡಿದರೆ ಅರ್ಚಕರು ಇದಕ್ಕೆ ವ್ಯವಸ್ಥೆ ಮಾಡುತ್ತಾರೆ.
ಇತರ ಗ್ಯಾಲರಿಗಳು