ಕನ್ನಡ ಸುದ್ದಿ  /  Photo Gallery  /  Viacom To Stream Ipl 2023 Free

Watch IPL 2023 free streaming: ಈ ಬಾರಿಯ ಐಪಿಎಲ್‌ 12 ಭಾಷೆಗಳಲ್ಲಿ ಪ್ರಸಾರ; ಅದು ಕೂಡ ಉಚಿತವಾಗಿ

  • Viacom to stream IPL 2023 free: 2023ರ ಐಪಿಎಲ್‌ನ ಡಿಜಿಟಲ್ ಹಕ್ಕುಗಳನ್ನು Viocom18 ಖರೀದಿಸಿದೆ. ಇದು ರಿಲಯನ್ಸ್ ಇಂಡಸ್ಟ್ರೀಸ್ ನಿಯಂತ್ರಿತ ಬ್ರಾಡ್‌ಕಾಸ್ಟ್ ನೆಟ್‌ವರ್ಕ್ ಆಗಿದ್ದು, ಬರೋಬ್ಬರಿ 23,757.5 ಕೋಟಿ ರೂಪಾಯಿಗೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಐದು ವರ್ಷಗಳ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಹೀಗಾಗಿ ಈ ಬಾರಿಯ ಐಪಿಎಲ್‌ ಪಂದ್ಯಗಳು ಆನ್‌ಲೈನ್‌ನಲ್ಲಿ ಜಿಯೋ ಅಪ್ಲಿಕೇಶನ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಆಗಲಿದೆ. ಈ ಕುರಿತು ಹಿಂದೂಸ್ತಾನ್‌ ಟೈಮ್ಸ್‌ ಸಹಸಂಸ್ಥೆಯಾದ 'ಲೈವ್ ಮಿಂಟ್' ನಡೆಸಿದ ವಿಶೇಷ ಸಂದರ್ಶನದಲ್ಲಿ ಪಾಲ್ಗೊಂಡ ವಯಾಕಾಮ್ 18 ಸ್ಪೋರ್ಟ್ಸ್‌ನ ಸಿಇಒ ಅನಿಲ್ ಜಯರಾಜ್ ಅವರು ಮಾತನಾಡಿದ್ದಾರೆ.

ಗ್ರಾಹಕರು ಈ ವರ್ಷ ಆನ್‌ಲೈನ್‌ನಲ್ಲಿ ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಲು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ. ಹೀಗಾಗಿ ಉಚಿತವಾಗಿ ಯಾರಾದರೂ ವೀಕ್ಷಿಸಬಹುದು(ಐಪಿಎಲ್ ಡಿಜಿಟಲ್ ಮೂಲಕ) ಎಂದು ಅವರು ಹೇಳಿದ್ದಾರೆ.
icon

(1 / 7)

ಗ್ರಾಹಕರು ಈ ವರ್ಷ ಆನ್‌ಲೈನ್‌ನಲ್ಲಿ ಐಪಿಎಲ್‌ ಪಂದ್ಯಗಳನ್ನು ವೀಕ್ಷಿಸಲು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ. ಹೀಗಾಗಿ ಉಚಿತವಾಗಿ ಯಾರಾದರೂ ವೀಕ್ಷಿಸಬಹುದು(ಐಪಿಎಲ್ ಡಿಜಿಟಲ್ ಮೂಲಕ) ಎಂದು ಅವರು ಹೇಳಿದ್ದಾರೆ.(IPL)

ಪ್ರಪಂಚದ ಯಾವುದೇ ಭಾಗದಿಂದಲೂ ಆಟವನ್ನು ವೀಕ್ಷಿಸಬಹುದು. ಡಿಜಿಟಲ್ ಮಾಧ್ಯಮದ ಪ್ರಯೋಜನವೇ ಅದು. ಅಲ್ಲದೆ ನಾವು ಬಹು ಭಾಷೆಗಳಲ್ಲಿ ಐಪಿಎಲ್ ಅನ್ನು ಪ್ರಸಾರ ಮಾಡಲು ಬಯಸುತ್ತೇವೆ. ನಾವು 12 ಭಾಷೆಗಳಲ್ಲಿ 70 ಕಮೆಂಟೇಟರ್‌ಗಳನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.
icon

(2 / 7)

ಪ್ರಪಂಚದ ಯಾವುದೇ ಭಾಗದಿಂದಲೂ ಆಟವನ್ನು ವೀಕ್ಷಿಸಬಹುದು. ಡಿಜಿಟಲ್ ಮಾಧ್ಯಮದ ಪ್ರಯೋಜನವೇ ಅದು. ಅಲ್ಲದೆ ನಾವು ಬಹು ಭಾಷೆಗಳಲ್ಲಿ ಐಪಿಎಲ್ ಅನ್ನು ಪ್ರಸಾರ ಮಾಡಲು ಬಯಸುತ್ತೇವೆ. ನಾವು 12 ಭಾಷೆಗಳಲ್ಲಿ 70 ಕಮೆಂಟೇಟರ್‌ಗಳನ್ನು ಹೊಂದಿದ್ದೇವೆ ಎಂದು ಅವರು ಹೇಳಿದ್ದಾರೆ.(IPL)

ಪ್ರಸ್ತುತ ದೇಶದಲ್ಲಿ ಸುಮಾರು 700 ಮಿಲಿಯನ್ ಸಾಧನಗಳು ಇಂಟರ್ನೆಟ್ ಸೌಲಭ್ಯ ಹೊಂದಿವೆ. ಆ ಸಾಧನ ಉಪಯೋಗಿಸುವ ಪ್ರತಿಯೊಬ್ಬ ಬಳಕೆದಾರರನ್ನು ತಲುಪುವುದು ನಮ್ಮ ಗುರಿಯಾಗಿದೆ. ನಾವು ಕನಿಷ್ಠ 550 ಮಿಲಿಯನ್ ಗುರಿಯನ್ನು ದಾಟುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
icon

(3 / 7)

ಪ್ರಸ್ತುತ ದೇಶದಲ್ಲಿ ಸುಮಾರು 700 ಮಿಲಿಯನ್ ಸಾಧನಗಳು ಇಂಟರ್ನೆಟ್ ಸೌಲಭ್ಯ ಹೊಂದಿವೆ. ಆ ಸಾಧನ ಉಪಯೋಗಿಸುವ ಪ್ರತಿಯೊಬ್ಬ ಬಳಕೆದಾರರನ್ನು ತಲುಪುವುದು ನಮ್ಮ ಗುರಿಯಾಗಿದೆ. ನಾವು ಕನಿಷ್ಠ 550 ಮಿಲಿಯನ್ ಗುರಿಯನ್ನು ದಾಟುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.(IPL)

ನಾವು ಗ್ರಾಹಕರಿಗೆ ಉತ್ತಮ ಅನುಭವವನ್ನು ಒದಗಿಸಲು ಬಯಸುತ್ತೇವೆ. ಈಗ ಇರುವ ಇಂಟರ್ನೆಟ್ ಬಳಕೆದಾರರಿಗಿಂತ ಹೆಚ್ಚಿನ ಜನರನ್ನು ತಲುಪಲು ಬಯಸುತ್ತೇವೆ. ನಂಬಲಾಗದ ಅನುಭವಗಳನ್ನು ಜನರಿಗೆ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.
icon

(4 / 7)

ನಾವು ಗ್ರಾಹಕರಿಗೆ ಉತ್ತಮ ಅನುಭವವನ್ನು ಒದಗಿಸಲು ಬಯಸುತ್ತೇವೆ. ಈಗ ಇರುವ ಇಂಟರ್ನೆಟ್ ಬಳಕೆದಾರರಿಗಿಂತ ಹೆಚ್ಚಿನ ಜನರನ್ನು ತಲುಪಲು ಬಯಸುತ್ತೇವೆ. ನಂಬಲಾಗದ ಅನುಭವಗಳನ್ನು ಜನರಿಗೆ ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ನಾವು ಡಿಜಿಟಲ್ ಹಕ್ಕುಗಳನ್ನು ಪಡೆದಾಗಿನಿಂದ, ನಾವು ಐಪಿಎಲ್ ಅನ್ನು ವಿಶ್ವದ ಅತಿದೊಡ್ಡ ಸ್ಪರ್ಧೆಯನ್ನಾಗಿ ಮಾಡುವುದು ಖಚಿತವಾಗಿತ್ತು. ನಾವು ಆ ಗುರಿಯೊಂದಿಗೆ ಕೆಲಸ ಪ್ರಾರಂಭಿಸಿದ್ದೇವೆ ಎಂದು ಜಯರಾಜ್‌ ಹೇಳಿದ್ದಾರೆ.
icon

(5 / 7)

ನಾವು ಡಿಜಿಟಲ್ ಹಕ್ಕುಗಳನ್ನು ಪಡೆದಾಗಿನಿಂದ, ನಾವು ಐಪಿಎಲ್ ಅನ್ನು ವಿಶ್ವದ ಅತಿದೊಡ್ಡ ಸ್ಪರ್ಧೆಯನ್ನಾಗಿ ಮಾಡುವುದು ಖಚಿತವಾಗಿತ್ತು. ನಾವು ಆ ಗುರಿಯೊಂದಿಗೆ ಕೆಲಸ ಪ್ರಾರಂಭಿಸಿದ್ದೇವೆ ಎಂದು ಜಯರಾಜ್‌ ಹೇಳಿದ್ದಾರೆ.

ಈ ಬಾರಿ ಜನರಿಗೆ ಉತ್ತಮ ಅನುಭವ ನೀಡುವ ಗುರಿಯೊಂದಿಗೆ ಮುನ್ನಡೆಯುತ್ತಿದ್ದೇವೆ. ಡಿಜಿಟಲ್ ಬಗ್ಗೆ ಉತ್ತಮವಾದ ವಿಷಯವೆಂದರೆ ನಾವು ಯಾವುದೇ ಪ್ರಮಾಣದಲ್ಲಿ ಕೆಲಸ ಮಾಡಬಹುದು. ಹಾಗಾಗಿ ಜಾಹೀರಾತುದಾರರು ನಾಲ್ಕು ಪಟ್ಟು ಹೆಚ್ಚು ಜನರನ್ನು ತಲುಪಲು ಬಯಸಿದರೆ, ನಾವು ಅದನ್ನು ಮಾಡಬಹುದು ಎಂದು ಜಯರಾಜ್‌ ಹೇಳಿದ್ದಾರೆ.
icon

(6 / 7)

ಸ್ಮಾರ್ಟ್‌ಫೋನ್‌ ಹೊಂದಿರುವ ಪ್ರತಿಯೊಬ್ಬರೂ ನಮ್ಮ ಗ್ರಾಹಕರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆ ಗುರಿಯತ್ತ ನಾವು ಸಾಗುತ್ತಿದ್ದೇವೆ. ಈ ಎಲ್ಲಾ ವಿಷಯಗಳಿಗೆ ನಾವು ಸಾಕಷ್ಟು ಒತ್ತು ನೀಡಿದ್ದೇವೆ ಎಂದು ಗಯರಾಜ್‌ ಹೇಳಿದ್ದಾರೆ.
icon

(7 / 7)

ಸ್ಮಾರ್ಟ್‌ಫೋನ್‌ ಹೊಂದಿರುವ ಪ್ರತಿಯೊಬ್ಬರೂ ನಮ್ಮ ಗ್ರಾಹಕರಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆ ಗುರಿಯತ್ತ ನಾವು ಸಾಗುತ್ತಿದ್ದೇವೆ. ಈ ಎಲ್ಲಾ ವಿಷಯಗಳಿಗೆ ನಾವು ಸಾಕಷ್ಟು ಒತ್ತು ನೀಡಿದ್ದೇವೆ ಎಂದು ಗಯರಾಜ್‌ ಹೇಳಿದ್ದಾರೆ.

IPL_Entry_Point

ಇತರ ಗ್ಯಾಲರಿಗಳು