Vijay Deverakonda: ಅನಕೊಂಡ, ಸಿಂಹದ ಮರಿ, ಕರಡಿಯೊಂದಿಗೆ ವಿಜಯ್ ದೇವರಕೊಂಡ...ದುಬೈ ಟ್ರಿಪ್ ಫೋಟೋಗಳು
ಟಾಲಿವುಡ್ ನಟ ವಿಜಯ್ ದೇವರಕೊಂಡ ಕೆಲವು ದಿನಗಳ ಹಿಂದಷ್ಟೇ ತಮ್ಮ ಫ್ಯಾಮಿಲಿ ಜೊತೆ ದುಬೈಗೆ ತೆರಳಿದ್ದರು. ಶನಿವಾರವಷ್ಟೇ ವಿಜಯ್ ದೇವರಕೊಂಡ ತನ್ನ ಕುಟುಂಬದ ಜೊತೆ ಹೈದರಾಬಾದ್‌ಗೆ ವಾಸಪಾಗಿದ್ದಾರೆ.
(1 / 11)
ದುಬೈನಲ್ಲಿ ತೆಗೆದ ಫೋಟೋಗಳನ್ನು ವಿಜಯ್ ದೇವರಕೊಂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದುಬೈ ಟ್ರಿಪ್ ವೇಳೆ ಅವರು ಅಲ್ಲಿನ ಫೇಮಸ್ ಅನಿಮಲ್ ಪಾರ್ಕಿಗೆ ಕೂಡಾ ಭೇಟಿ ನೀಡಿದ್ದು ಅಲ್ಲಿನ ವಿಡಿಯೋವನ್ನು ಕೂಡಾ ಹಂಚಿಕೊಂಡಿದ್ದಾರೆ. (PC: Vijay Deverakonda )
(2 / 11)
ಯುಎಇನ Belhasa ಹಾಗೂ Fame Parkಗೆ ವಿಜಯ್ ದೇವರಕೊಂಡ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಾಣಿ ಪಕ್ಷಿಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ.
(3 / 11)
ಈ ಪಾರ್ಕಿಗೆ ಹೋಗಿ ಬಂದ ನಂತರ ನನಗೆ ಹಾವುಗಳ ಮೇಲಿದ್ದ ಭಯ ಕಡಿಮೆ ಆಯ್ತು ಎಂದು ವಿಜಯ್ ದೇವರಕೊಂಡ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನವರು ಪ್ರಾಣಿಗಳ ಬಗ್ಗೆ ವಹಿಸುವ ಕಾಳಜಿ ನೋಡಿ ಸಂತೋಷ ವ್ಯಕ್ತಪಡಿಸಿದ್ದಾರೆ.
(4 / 11)
ವಿಜಯ್ ದೇವರಕೊಂಡ ಜೊತೆಗೆ ರಶ್ಮಿಕಾ ಮಂದಣ್ಣ ಕೂಡಾ ದುಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಇರುವ ದುಬೈ ಫೋಟೋಗಳು ಲೀಕ್ ಆಗಿ ವೈರಲ್ ಆಗಿದ್ದವು.
(5 / 11)
ವಿಜಯ್ ದೇವರಕೊಂಡ ಹಂಚಿಕೊಂಡಿರುವ ಯಾವ ಫೋಟೋ ಹಾಗೂ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಕಾಣುತ್ತಿಲ್ಲ. ಆದರೆ ಅವರು ನಗುತ್ತಿರುವುದು ನಮಗೆ ಕೇಳಿಸುತ್ತಿದೆ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
(6 / 11)
ದುಬೈನಿಂದ ಬಂದವರೇ ವಿಜಯ್ ದೇವರಕೊಂಡ ತಮ್ಮ ಮುಂದಿನ ಸಿನಿಮಾ ಬಗ್ಗೆ ಚಿತ್ರತಂಡದ ಜೊತೆ ಚರ್ಚಿಸಿದ್ದಾರೆ. 2018 ರಲ್ಲಿ ತೆರೆ ಕಂಡಿದ್ದ 'ಗೀತ ಗೋವಿಂದಂ' ಸೀಕ್ವೆಲ್‌ಗೆ ವಿಜಯ್ ದೇವರಕೊಂಡ ರೆಡಿಯಾಗುತ್ತಿದ್ದಾರೆ.
ಇತರ ಗ್ಯಾಲರಿಗಳು