Hampi Utsava: ಹಂಪಿ ಉತ್ಸವದಲ್ಲಿ ತೆರೆದುಕೊಂಡ ವಿಜಯನಗರ ವೈಭವ, ಹೀಗಿದೆ ಹಬ್ಬದ ಲೋಕ Photos
- ವಿಜಯನಗರ ಸಾಮ್ರಾಜ್ಯದ ಹಂಪಿ ಈಗಲೂ ಆರ್ಕಷಕ ತಾಣ. ಕರ್ನಾಟಕ ಸರ್ಕಾರ ಈ ಬಾರಿ ಆಯೋಜಿಸಿರುವ ಹಂಪಿ ಉತ್ಸವ ಸಹಸ್ರಾರು ಜನರನ್ನು ಸೆಳದಿದೆ. ಬೆಳಿಗ್ಗೆಯೆಲ್ಲಾ ವಿಭಿನ್ನ ಸ್ಪರ್ಧೆ, ಚಟುವಟಿಕೆಗಳು. ಸಂಜೆ ನಂತರ ಸಾಂಸ್ಕೃತಿಕ ವೈಭವ. ಮೂರು ದಿನದ ಹಂಪಿ ಉತ್ಸವದ ವಿಭಿನ್ನ ಲೋಕದ ಚಿತ್ರಣ ಇಲ್ಲಿದೆ.
- ವಿಜಯನಗರ ಸಾಮ್ರಾಜ್ಯದ ಹಂಪಿ ಈಗಲೂ ಆರ್ಕಷಕ ತಾಣ. ಕರ್ನಾಟಕ ಸರ್ಕಾರ ಈ ಬಾರಿ ಆಯೋಜಿಸಿರುವ ಹಂಪಿ ಉತ್ಸವ ಸಹಸ್ರಾರು ಜನರನ್ನು ಸೆಳದಿದೆ. ಬೆಳಿಗ್ಗೆಯೆಲ್ಲಾ ವಿಭಿನ್ನ ಸ್ಪರ್ಧೆ, ಚಟುವಟಿಕೆಗಳು. ಸಂಜೆ ನಂತರ ಸಾಂಸ್ಕೃತಿಕ ವೈಭವ. ಮೂರು ದಿನದ ಹಂಪಿ ಉತ್ಸವದ ವಿಭಿನ್ನ ಲೋಕದ ಚಿತ್ರಣ ಇಲ್ಲಿದೆ.
(1 / 10)
ಹಂಪಿಯಲ್ಲಿ ಎಲ್ಲಿ ನೋಡಿದರೂ ಈಗ ಸಾಂಸ್ಕೃತಿಕ ಸಡಗರ. ಬೆಳಕಿನ ವೈಭವ. ಹಂಪಿಗೆ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ವಿಶೇಷವಾಗಿ ರೂಪಿಸಿದ ಚಿತ್ರ ಲೋಕ.
(2 / 10)
ಮೂರು ದಿನಗಳ ಹಂಪಿ ಉತ್ಸವಕ್ಕೆ ಸಿಎಂ ಸಿದ್ದರಾಂಯ್ಯ ಅವರು ಕಂದೀಲನ್ನು ಸ್ವೀಕರಿಸುವ ಮೂಲಕ ಚಾಲನೆ ನೀಡಿದರು. ಸಚಿವ ಜಮೀರ್ ಅಹಮದ್ ಖಾನ್, ಶಿವರಾಜ ತಂಗಡಗಿ. ಜಿಲ್ಲಾಧಿಕಾರಿ ದಿವಾಕರ್ ಸಹಿತ ಹಲವರು ಇದ್ದರು.
(3 / 10)
ಹಂಪಿಯಲ್ಲಿ ಆರಂಭಗೊಂಡಿರುವ ಉತ್ಸವದ ಮುಖ್ಯ ವೇದಿಕೆ ವಿಜಯನಗರ ಕಾಲದ ಗತ ವೈಭವವನ್ನು ನೆನಪಿಸುವಂತಿದೆ. ವಿಶೇಸವಾಗಿ ವೇದಿಕೆಯನ್ನು ಉತ್ಸವಕ್ಕಾಗಿ ರೂಪಿಸಲಾಗಿದೆ.
(4 / 10)
ಹಂಪಿ ಉತ್ಸವದ ವೈಭವಕ್ಕೆ ನಾನಾ ಹಾದಿ. ಹಂಪಿ ಹಾಗೂ ಹೊಸಪೇಟೆಯ ಹಲವು ಬೀದಿಗಳಲ್ಲಿ ರಂಗೋಲಿ ಮೂಲಕ ಹಬ್ಬವನ್ನು ಬರ ಮಾಡಿಕೊಂಡ ಪರಿ ಇದು.
(5 / 10)
ಹಂಪಿಯಲ್ಲಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಲರವ. ಕಾಲೇಜು ವಿದ್ಯಾರ್ಥಿಗಳು ಹಾಗೂ ಕಲಾವಿದರು ಕರ್ನಾಟಕದ ಸಾಂಸ್ಕೃತಿಕ ವೈಭವವನ್ನು ತೆರೆದಿಡುತ್ತಿದ್ದಾರೆ. ಭಾನುವಾರ ಸಂಜೆಯೂ ಕಾರ್ಯಕ್ರಮಗಳಿವೆ.
(6 / 10)
ಹಂಪಿಯಲ್ಲಿ ನಡೆದಿರುವ ಹಂಪಿ ಉತ್ಸವದಲ್ಲಿ ಕರಾವಳಿ ಭಾಗದ ಕಲಾವಿದರು ಯಕ್ಷಗಾನದ ಮೂಲಕ ವಿಭಿನ್ನ ಪ್ರದರ್ಶನ ನೀಡಿ ಗಮನ ಸೆಳೆದರು.
(7 / 10)
ಹಂಪಿ ಉತ್ಸವ ಸಾಂಸ್ಕೃತಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಹೊಸಪೇಟೆ, ಕೊಪ್ಪಳ ಮಾತ್ರವಲ್ಲದೇ ಕರ್ನಾಟಕದ ನಾನಾ ಭಾಗಗಳಿಂದಲೂ ಸಂಸ್ಕೃತಿ ಪ್ರಿಯರು ಆಗಮಿಸಿದ್ದಾರೆ.
(8 / 10)
ಹಂಪಿಯಲ್ಲಿ ಸಾಂಸ್ಕೃತಿಕ ಸಡಗರದ ಭಾಗವಾಗಿ ಹಲವು ಕಡೆ ಮೆರವಣಿಗೆ ಮೂಲಕ ಕಲಾವಿದರು ಹೆಜ್ಜೆ ಹಾಕಿದರು. ಕರ್ನಾಟಕದ ಹಲವಾರು ಕಲಾವಿದರು ಕಹಳೆ ಮೊಳಗಿಸಿದರು.
(9 / 10)
ಹಂಪಿ ಉತ್ಸವದ ಭಾಗವಾಗಿ ಶಿಲ್ಪ ಕಲಾ ಶಿಬಿರವೂ ನಡೆದಿದೆ. ನಾಡಿನ ನಾನಾ ಭಾಗಗಳಿಂದ ಆಗಮಿಸಿರುವ ಕಲಾವಿದರು ಶಿಲ್ಪ ಅರಳಿಸುವುದರಲ್ಲಿ ನಿರತರಾಗಿದ್ದಾರೆ.
ಇತರ ಗ್ಯಾಲರಿಗಳು