Vijayapura News: ಗೋಲಗೇರಿ ಗೋಲ್ಲಾಳೇಶ್ವರ ರಥೋತ್ಸವ ಸಂಭ್ರಮ; ಮುಗಿಲುಮುಟ್ಟಿದ ಹರ್ಷೋದ್ಗಾರ, ಭಕ್ತರಿಂದ ದೀಡ ನಮಸ್ಕಾರ
- Vijayapura News: ಉತ್ತರ ಕರ್ನಾಟಕದಲ್ಲೇ ಅತಿ ಎತ್ತರದ ರಥ ಎಂದೇ ಹೆಸರುವಾಸಿಯಾದ ವಿಜಯಪುರ ಜಿಲ್ಲೆ ಗೋಲಗೇರಿ ಗೊಲ್ಲಾಳೇಶ್ವರ ರಥೋತ್ಸವ ಸಡಗರ, ಸಂಘ್ರಮದಿಂದ ಜರುಗಿತು.
- ಚಿತ್ರ ಮಾಹಿತಿ : ಮಲ್ಲಿಕಾಜು೯ನ ಕೆಂಭಾವಿ ವರದಿಗಾರರು,ಸಿಂದಗಿ
- Vijayapura News: ಉತ್ತರ ಕರ್ನಾಟಕದಲ್ಲೇ ಅತಿ ಎತ್ತರದ ರಥ ಎಂದೇ ಹೆಸರುವಾಸಿಯಾದ ವಿಜಯಪುರ ಜಿಲ್ಲೆ ಗೋಲಗೇರಿ ಗೊಲ್ಲಾಳೇಶ್ವರ ರಥೋತ್ಸವ ಸಡಗರ, ಸಂಘ್ರಮದಿಂದ ಜರುಗಿತು.
- ಚಿತ್ರ ಮಾಹಿತಿ : ಮಲ್ಲಿಕಾಜು೯ನ ಕೆಂಭಾವಿ ವರದಿಗಾರರು,ಸಿಂದಗಿ
(1 / 8)
ಮುಗಿಲು ಮುಟ್ಟಿದ ಹರ್ಷೋದ್ಗಾರ, ಎಲ್ಲಿ ನೋಡಿದರೂ ಜನಸಾಗರ, ಹಣ್ಣು ಸಮಪಿ೯ಸಿ ಭಕ್ತಿ ಮೆರೆದ ಭಕ್ತರ ನಡುವೆ ವಿಜಯಪುರ ಜಿಲ್ಲೆಯ ಗೊಲ್ಲಾಳೇಶ್ವರ ರಥೋತ್ಸವ ಜರುಗಿತು,
(2 / 8)
ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿಯ ಗೊಲ್ಲಾಳೇಶ್ವರ ರಥೋತ್ಸವ ಶನಿವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಮುಕ್ತಾಯಗೊಂಡಿತು.
(3 / 8)
ಸುತ್ತಲಿನ 20ಕ್ಕೂ ಹೆಚ್ಚು ಹಳ್ಳಿಗಳ ಭಕ್ತರು ಪಾದಯಾತ್ರೆ ಮೂಲಕ ನಸುಕಿನಲ್ಲೇ ಕ್ಷೇತ್ರಕ್ಕೆ ಆಗಮಿಸಿದರು. ಸೂರ್ಯೋದಯ ಸಂದರ್ಭದಲ್ಲಿ ಸಾವಿರಾರು ಭಕ್ತರು ದೀಡ ನಮಸ್ಕಾರ ಹಾಕುವ ಮೂಲಕ ಹರಕೆ ತೀರಿಸಿದರೆ, ರಥ ಎಳೆಯುವಾಗ ಮನೆ ಮೇಲೇರಿ ಭಕ್ತರು ಗೊಲ್ಲಾಳೇಶ್ವರನಿಗೆ ಕೈ ಮುಗಿದರು,.
(4 / 8)
ದೇವಸ್ಥಾನದಿಂದ ಪಾದಗಟ್ಟೆವರೆಗೆ ರಥ ಸಾಗುತ್ತಿದ್ದಂತೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು. ಭಕ್ತರು ಉತ್ತತ್ತಿ, ಹಣ್ಣು, ಕಾಯಿ ಕರ್ಪೂರ ಸಮರ್ಪಿಸಿದರು. ಆಂಧ್ರ, ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿಜಯಪುರ, ಯಾದಗಿರಿ, ಕಲಬುರಗಿ ಜಿಲ್ಲೆಯಿಂದ ಉತ್ಸವಕ್ಕೆ ಭಕ್ತಸಾಗರವೇ ಹರಿದುಬಂದಿತ್ತು.
(5 / 8)
ಧರ್ಮದರ್ಶಿ ವರಪುತ್ರ ಹೊಳೆಪ್ಪ ಶರಣರು ದೇವರಮನಿ ಹಾಗೂ ಸಿದ್ದರಾಮ ದೇವರಮನಿ ಅವರ ನೇತೃತ್ವದಲ್ಲಿಗೊಲ್ಲಾಳೇಶ್ವರನಿಗೆ ಬೆಳಗ್ಗೆ ರುದ್ರಾಭಿಷೇಕ ಹಾಗೂ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಯಿತು
(7 / 8)
ಜಾತ್ರಾ ಮಹೋತ್ಸದ ಹಿನ್ನೆಲೆಯಲ್ಲಿ ಗೊಲ್ಲಾಳೇಶ್ವರ ದೇವಸ್ಥಾನದಲ್ಲಿ ಭಾರೀ ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ಈ ವೇಳೆ ಸಮಿತಿಯವರು ಹಾಗೂ ಭಕ್ತರು ಅಲ್ಲ ಸೇರಿದ್ದರು.
ಇತರ ಗ್ಯಾಲರಿಗಳು