ಕರ್ನಾಟಕದ ಘೋರ ದುರಂತ; ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಕಂದ ಸಾತ್ವಿಕ್, ರಕ್ಷಣಾಕಾರ್ಯದ ಫೋಟೋಸ್
ಕರ್ನಾಟಕದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಲಚ್ಯಾಣದ ತೋಟದ ವಸ್ತಿಯಲ್ಲಿ ನಿನ್ನೆ (ಏಪ್ರಿಲ್ 3) 14 ತಿಂಗಳ ಕಂದ ಸಾತ್ವಿಕ್ ಮುಜುಗೊಂಡ ತೆರೆದ ಕೊಳವೆ ಬಾವಿಗೆ ಬಿದ್ದ ಘಟನೆ ನಡೆದಿದೆ. ಕರ್ನಾಟಕದ ಘೋರ ದುರಂತ ಇದಾಗಿದ್ದು, ಆತನ ರಕ್ಷಣೆಗೆ ರಕ್ಷಣಾಕಾರ್ಯ ಸಮರೋಪಾದಿಯಲ್ಲಿ ಸಾಗಿದೆ. ಈ ರಕ್ಷಣಾ ಕಾರ್ಯದ ಫೋಟೋಸ್ ಇಲ್ಲಿವೆ. (ವರದಿ- ಸಮೀವುಲ್ಲಾ ಉಸ್ತಾದ, ವಿಜಯಪುರ)
(1 / 7)
ಇಂಡಿಯಲ್ಲಿ ಕೊಳವೆ ಬಾವಿಗೆ ಬಿದ್ದ 14 ತಿಂಗಳ ಕಂದ ಸಾತ್ವಿಕ್ ಮುಜುಗೊಂಡ (ಎಡಚಿತ್ರ); ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿಷಯ ತಿಳಿದ ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಶುರುಮಾಡಿದ್ದಾರೆ. ರಾತ್ರಿಯೂ ರಕ್ಷಣಾ ಕಾರ್ಯ ಮುಂದುವರಿದಿತ್ತು.
(2 / 7)
ಲಚ್ಯಾಣ ಗ್ರಾಮದಲ್ಲಿ ಅಗ್ನಿಶಾಮಕ ದಳ, ಪೊಲೀಸ್, ತಾಲೂಕು ಆಡಳಿತಾಧಿಕಾರಿಗಳು ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ನಡೆದ ರಕ್ಷಣಾ ಕಾರ್ಯದ ಒಂದು ನೋಟ.
(3 / 7)
ಲಚ್ಯಾಣದಲ್ಲಿ ಸಂಜೆ 6 ಗಂಟೆಗೆ ಈ ಘಟನೆ ನಡೆದ ಕೂಡಲೇ ರಕ್ಷಣಾ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಮಗುವನ್ನು ಕ್ಯಾಮೆರಾದಲ್ಲಿ ಗಮನಿಸಿ, ಉಸಿರಾಟಕ್ಕೆ ಆಕ್ಸಿಜನ್ ವ್ಯವಸ್ಥೆ ಮಾಡಿದ್ದಾರೆ. ಬಳಿಕ ಜೆಸಿಬಿಗಳನ್ನು ಕರೆಯಿಸಿದ್ದು ಕೊಳವೆ ಬಾವಿ ಪಕ್ಕ ಮಣ್ಣು ಸರಿಸುತ್ತ ಒಂದು ಬದಿಯಿಂದ ಮಗುವನ್ನು ಹೊರತೆಗೆಯುವ ಪ್ರಯತ್ನ ನಡೆಸಿದ್ದಾರೆ. ಮಗು 16 ಅಡಿ ಆಳದಲ್ಲಿ ಸಿಲುಕಿಕೊಂಡಿದೆ ಎಂದು ಅಂದಾಜಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
(4 / 7)
ಜೆಸಿಬಿಯಲ್ಲಿ ಆಳವಾಗಿ ಮಣ್ಣು ತೆಗೆದ ಬಳಿಕ ಅಡ್ಡವಾಗಿ ಕೊಳವೆ ಬಾವಿಗೆ ತೂತು ಕೊರೆಯುವ ಕೆಲಸವನ್ನು ರಕ್ಷಣಾ ಸಿಬ್ಬಂದಿ ಮುಂದುವರಿಸಿದರು.
(5 / 7)
ಶಂಕರಪ್ಪ ಮುಜುಗೊಂಡ (ಸಾತ್ವಿಕ್‌ನ ತಾತ) ಅವರು ಏಪ್ರಿಲ್ 2ರಂದು ಬೋರ್‌ವೆಲ್ ಕೊರೆಯಿಸಿದ್ದರು. 500 ಅಡಿ ಆಳವರೆಗೆ ಹೋಗಿತ್ತು. ಅದಕ್ಕೆ ಕ್ಯಾಪ್ ಮುಚ್ಚುವ ಮೊದಲೇ ಈ ದುರಂತ ಸಂಭವಿಸಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಜನಸಮೂಹ.
(6 / 7)
ಕೊಳವೆ ಬಾವಿಗೆ ಅಡ್ಡಲಾಗಿ ರಂಧ್ರ ಕೊರೆಯುವ ಕೆಲಸವನ್ನು ಮುಂದುವರಿಸಿರುವ ರಕ್ಷಣಾ ತಂಡ (ಎಡಚಿತ್ರ). ಕೊಳವೆ ಬಾವಿಯ ಮೇಲ್ಭಾಗದಿಂದ ಮಗುವಿಗೆ ಆಕ್ಸಿಜನ್ ಪೂರೈಕೆ ಮತ್ತು ಆರೋಗ್ಯ ಗಮನಿಸುತ್ತಿರುವ ಇನ್ನೊಂದು ತಂಡ (ಬಲ ಚಿತ್ರ)
ಇತರ ಗ್ಯಾಲರಿಗಳು