Vijayapura News: ಮಾರುಕಟ್ಟೆಗೆ ಬಂತು ವಿಜಯಪುರದ ರುಚಿ ದ್ರಾಕ್ಷಿ, ಏನಿದರ ವಿಶೇಷ ಇಲ್ಲಿದೆ ವಿವರ Photos
- ವಿಜಯಪುರ ದ್ರಾಕ್ಷಿಯ ಸ್ವಾದ ಹಾಗೂ ರುಚಿಯನ್ನು ಬಲ್ಲವನೇ ಬಲ್ಲ. ವಿಜಯಪುರ ಒಣದ್ರಾಕ್ಷಿ ಹಾಗೂ ವೈನ್ ಕೂಡ ಅಷ್ಟೇ ರುಚಿಕರ. ಈಗ ವಿಜಯಪುರ ದ್ರಾಕ್ಷಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಜನ ಖುಷಿಯಿಂದಲೇ ಖರೀದಿಸುತ್ತಿದ್ದಾರೆ.
- ವಿಜಯಪುರ ದ್ರಾಕ್ಷಿಯ ಸ್ವಾದ ಹಾಗೂ ರುಚಿಯನ್ನು ಬಲ್ಲವನೇ ಬಲ್ಲ. ವಿಜಯಪುರ ಒಣದ್ರಾಕ್ಷಿ ಹಾಗೂ ವೈನ್ ಕೂಡ ಅಷ್ಟೇ ರುಚಿಕರ. ಈಗ ವಿಜಯಪುರ ದ್ರಾಕ್ಷಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಜನ ಖುಷಿಯಿಂದಲೇ ಖರೀದಿಸುತ್ತಿದ್ದಾರೆ.
(1 / 7)
ವಿಜಯಪುರದ ನಗರದಿಂದ ಯಾವ ದಿಕ್ಕಿಗೆ ಹೋದರೂ ಈಗ ದ್ರಾಕ್ಷಿ ಘಮಲು. ತೋಟಗಳಲ್ಲಿ ಫಲ ಬಂದ ಹಳದಿ ದ್ರಾಕ್ಷಿಯನ್ನು ಸವಿಯುವುದೇ ಚಂದ.
(2 / 7)
ವಿಜಯಪುರ ಜಿಲ್ಲೆಯ ವಿಜಯಪುರ, ತಿಕೋಟ, ಬಬಲೇಶ್ವರ ತಾಲ್ಲೂಕು ಮಾತ್ರವಲ್ಲದೇ ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕುಗಳಲ್ಲೂ ದ್ರಾಕ್ಷಿ ಬೆಳೆಯಲಾಗುತ್ತದೆ.
(3 / 7)
ವಿಜಯಪುರದಿಂದ ಬೆಳಗಾವಿ ಹೋಗುವ ಮಾರ್ಗದಲ್ಲಿ ಹಾಗೂ ತಿಕೋಟಾದಿಂದ ಮಹಾರಾಷ್ಟ್ರ ಕಡೆಗೆ ಎಲ್ಲಿ ನೋಡಿದರೂ ಬರೀ ದ್ರಾಕ್ಷಿ ತೋಟಗಳೇ.
(4 / 7)
ವಿಜಯಪುರ ದ್ರಾಕ್ಷಿ ಬಲು ರುಚಿ. ಅದಕ್ಕೆ ಕಾರಣ ಇಲ್ಲಿನ ಮಣ್ಣಿನ ಗುಣ ಹಾಗೂ ಹವಾಮಾನ. ಅಕ್ಟೋಬರ್‌ನಲ್ಲಿ ಚಾಕಣಿ ಶುರು ಮಾಡಿದರೆ ಫೆಬ್ರವರಿ ಹೊತ್ತಿಗೆ ದ್ರಾಕ್ಷಿ ಬರುತ್ತದೆ.
(5 / 7)
ಇಡೀ ಉತ್ತರ ಕರ್ನಾಟಕದ ಮಾರುಕಟ್ಟೆಯಲ್ಲಿ ವಿಜಯಪುರ ದ್ರಾಕ್ಷಿ ವಹಿವಾಟು ಜೋರು. ರುಚಿ ಕಾರಣಕ್ಕೆ ಜನ ಮುಗಿಬಿದ್ದು ಖರೀದಿಸುವುದೂ ಉಂಟು.
(6 / 7)
ಈ ಬಾರಿಯೂ ಉತ್ತಮ ಫಸಲು ಬಂದಿದೆ. ಉತ್ತಮ ಬೆಲೆಯೂ ದೊರಕಿದೆ. ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ಮಾರುಕಟ್ಟೆಯಲ್ಲೂ ವಿಜಯಪುರದ ದ್ರಾಕ್ಷಿಗೆ ಎಲ್ಲಿಲ್ಲದ ಬೇಡಿಕೆ. ಬೆಳೆದವರಿಗೂ ಖುಷಿ.
ಇತರ ಗ್ಯಾಲರಿಗಳು