ವಿಜಯಪುರದ ಫಗು ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ವಚನಸಾಹಿತ್ಯಶ್ರೀ ಪ್ರಶಸ್ತಿ; ಸಾಹಿತ್ಯ, ಸಂಶೋಧನೆಯಲ್ಲಿ ದೊಡ್ಡ ಹೆಸರು ಪಡೆದ ಕೇಂದ್ರ
- ವಿಜಯಪುರನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ಬೆಂಗಳೂರಿನ ಬಸವ ವೇದಿಕೆ ನೀಡುವ ವಚನ ಸಾಹಿತ್ಯಶ್ರೀ ಪ್ರಶಸ್ತಿ-2025 ಘೋಷಣೆ ಮಾಡಲಾಗಿದೆ.
- ವಿಜಯಪುರನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರಕ್ಕೆ ಬೆಂಗಳೂರಿನ ಬಸವ ವೇದಿಕೆ ನೀಡುವ ವಚನ ಸಾಹಿತ್ಯಶ್ರೀ ಪ್ರಶಸ್ತಿ-2025 ಘೋಷಣೆ ಮಾಡಲಾಗಿದೆ.
(1 / 6)
ವಚನಪಿತಾಮಹ ಎಂದೇ ಕರೆಯಿಸಿಕೊಳ್ಳುವ ಫಗು ಹಳಕಟ್ಟಿ ಅವರು ಶತಮಾನದ ಹಿಂದೆಯೇ ಸಮಾಜಕ್ಕಾಗಿ ಕೆಲಸ ಮಾಡಿದವರು. ವಿಜಯಪುರದಲ್ಲಿ ಡಾ. ಫ. ಗು. ಹಳಕಟ್ಟಿ ಅವರು ಸುಮಾರು 100 ವರ್ಷಗಳ ಹಿಂದೆಯೇ ಬಿಎಲ್‍ಇಡಿ ಸಂಸ್ಥೆ, ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ಮತ್ತು ಸಿದ್ಧೇಶ್ವರ ಸಂಸ್ಥೆಯನ್ನು ಕಟ್ಟಿ ಆಧುನಿಕ ವಿಜಯಪುರ ನಿರ್ಮಿಸಿದವರು. ಶಿಕ್ಷಣಕ್ಕೆ ಇನ್ನಿಲ್ಲದ ಒತ್ತು ನೀಡಿದವರು. ಈಗ ಅವರ ಹೆಸರಿನಲ್ಲಿಯೇ ವಿಜಯಪುರದಲ್ಲಿ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡಿದೆ.
(2 / 6)
ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ಕಾಲಗರ್ಭದಲ್ಲಿ ನಶಿಸಿ ಹೋಗುತ್ತಿದ್ದ ಬಸವಾದಿ ಶರಣರ ವಚನಗಳನ್ನು ಸಂಶೋಧಿಸಿ ಪ್ರಕಟಿಸುವ ಮೂಲಕ ವಚನಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹಳಕಟ್ಟಿ ಅವರು ಸ್ಥಾಪಿಸಿದ ಬಿ.ಎಲ್.ಡಿ.ಇ ಸಂಸ್ಥೆ ಇಂದು ಬೃಹದಾಕಾರವಾಗಿ ಬೆಳೆದಿದ್ದು, ನಾಡು ಮತ್ತು ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈಗ ಈ ಸಂಸ್ಥೆಗೆ ವಚನ ಸಾಹಿತ್ಯಶ್ರೀ ಪುರಸ್ಕಾರ ದೊರೆತಿದ್ದು ಮೇ 03 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿನಡೆಯಲಿರುವ ಬಸವ ಜಯಂತಿ ಹಾಗೂ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಗುವುದು.
(3 / 6)
ಪರ್ಷಿಯನ್ ಮತ್ತು ದಖನಿ ಉರ್ದುವಿನಲ್ಲಿರುವ ಆದಿಲಶಾಹಿ ಕಾಲದ ಸಾಹಿತ್ಯವನ್ನು ಕನ್ನಡ , ಇಂಗ್ಲೀಷ್ , ಉರ್ದುವಿಗೆ ಅನುವಾದಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ, ವಿಜಯಪುರ ಆಸ್ಥೆಯಿಂದ ಕೈಗೆತ್ತಿಕೊಂಡು ಕನ್ನಡಲ್ಲಿ 18 , ಇಂಗ್ಲೀಷಿನಲ್ಲಿ 2 ಮತ್ತು ಉರ್ದುವಿನಲ್ಲಿ 1 ಸಂಪುಟವನ್ನು ಈಗಾಗಲೇ ಹೊರತಂದಿದೆ.
(4 / 6)
ಕರ್ನಾಟಕದ ಸರ್ಕಾರದ ನೆರವಿನೊಂದಿಗೆ ಹೈದರಾಬಾದ್ , ಪುಣೆ ಮತ್ತು ಇತರೆಡೆ ಇದ್ದ ಆರ್ಕೈವ್ ನಿಂದ ಪ್ರತಿಗಳನ್ನು ಸಂಗ್ರಹಿಸಿ ಅಚ್ಚುಕಟ್ಟಾಗಿ ಅನುವಾದವನ್ನು ಮಾಡಿರುವ ಈ ಯೋಜನೆ ಕರ್ನಾಟಕದ ಇತಿಹಾಸ ಅರಿಯಲು ಸಹಾಯಕಾರಿ. ಎರಡನೇ ಇಬ್ರಾಹಿಮ್ ಆದಿಲ್ ಶಾಹಿ ಬರೆದ ಕಿತಾಬೆ ನವರಸ್, ಫರಿಶ್ತಾ ಬರೆದ ತಾರೀಖ- ಎ- ಫ಼ರಿಶ್ತಾ ಮೊದಲಾದ ಇತಿಹಾಸದ ಕೃತಿಗಳು , ಈಶ್ವರ ಸಾಗರನ ಫುತುಹತೆ-ಈ-ಅಲಂಗಿರ್ ಮೊದಲಾದ ಹಲವು ಅಪೂರ್ವ ಕೃತಿಗಳನ್ನು ಈ ಸಂಪುಟ ಒಳಗೊಂಡಿವೆ. ಪರ್ಸಿಯನ್ ಮತ್ತು ದಖನಿಯಿಂದ ನೇರವಾಗಿ ಅನುವಾದ ಆಗಿರುವುದು ಇದರ ಇನ್ನೊಂದು ವಿಶೇಷತೆ
(5 / 6)
ವಚನಗಳ ಸಂರಕ್ಷಣೆ ಹಾಗೂ ಮರು ಪ್ರಕಟಣೆ ಮೂಲಕ ನಾಡಿನ ಗಮನ ಸೆಳೆದಿರುವ ಡಾ. ಫ. ಗು. ಹಳಕಟ್ಟಿ ಸಂಶೋಧನಾ ಕೇಂದ್ರ ತನ್ನ ಅನುಪಮ ಸೇವೆಗೆ 2015 ನೇ ಸಾಲಿನಲ್ಲಿ ಸಂಘ ಸಂಸ್ಥೆ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದೆ. ಸಂಸ್ಥೆಯ ಅಧ್ಯಕ್ಷರೂ ಆಗಿರುವ ಸಚಿವ ಎಂ.ಬಿ.ಪಾಟೀಲ ಅವರು ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಕೇಂದ್ರದ ಪ್ರಮುಖರೊಂದಿಗೆ ಇದ್ದರು.
ಇತರ ಗ್ಯಾಲರಿಗಳು