Money Tricks: ಸಂಬಂಧಿಕರು ಹಣ ಕೇಳದಂತೆ ವ್ಯಕ್ತಿಯ ಮಾಸ್ಟರ್ ಪ್ಲಾನ್; ನಾವೂ ಇದೇ ಟ್ರಿಕ್ಸ್ ಫಾಲೋ ಮಾಡ್ತೀವಿ ಅಂಕಲ್ ಅಂದ್ರು ನೆಟಿಜನ್ಸ್
- ಸಾಮಾಜಿಕ ಜಾಲತಾಣಗಳು ಮಾಹಿತಿ-ಮನರಂಜನೆಗೆ ಮಾತ್ರವಲ್ಲದೇ ಕೆಲವು ಟ್ರಿಕ್ಸ್-ಟಿಪ್ಸ್ ಕೊಡುವ ವೇದಿಕೆಯೂ ಆಗಿದೆ. ತಮ್ಮ ಬಳಿ ಸಂಬಂಧಕರು ಹಣ ಕೇಳಬಾರದು ಎಂದು ಇಲ್ಲೊಬ್ಬ ವ್ಯಕ್ತಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದನ್ನು ತಿಳಿದ ನೆಟ್ಟಗರು ನಾವೂ ಇದೇ ಟ್ರಿಕ್ಸ್ ಫಾಲೋ ಮಾಡ್ತೀವಿ ಅಂಕಲ್ ಎಂದು ಹೇಳುತ್ತಿದ್ದಾರೆ. ಏನಪ್ಪಾ ಆ ಟ್ರಿಕ್ಸ್ ಅಂತೀರಾ? ಈ ಸುದ್ದಿ ಓದಿ..

(1 / 5)
ಹತ್ತಿರದ ಸಂಬಂಧಿಕರು ಅಂದಾಕ್ಷಣ ಸ್ವಲ್ಪ ಸಲಿಗೆ ಜಾಸ್ತಿ ಇರತ್ತೆ. ಕಷ್ಟ ಬಂದಾಗ ಸ್ನೇಹಿತರು ಅಥವಾ ಸಂಬಂಧಿಕರ ಸಹಾಯ ಕೇಳ್ತೀವಿ. ಆದರೆ ಕೆಲವರು ಇದನ್ನು ದುರುಪಯೋಗಪಡಿಸಿಕೊಳ್ತಾರೆ. ಪದೇ ಪದೇ ನಾನಾ ಕಾರಣ ಹೇಳಿ ದುಡ್ಡು ಇಸ್ಕೊಳ್ತಾರೆ, ಆದರೆ ಪಡೆದ ಹಣ ವಾಪಾಸ್ ಕೊಡಲ್ಲ.
(2 / 5)
ಪಾಪ ಇಲ್ಲೊಬ್ಬ ವ್ಯಕ್ತಿ ಬಳಿ ಅವರ ಸಂಬಂಧಿಕರು ಪದೇ ಪದೇ ಹಣ ಇಸ್ಕೊಳ್ತಿದ್ರು ಅನ್ನಿಸುತ್ತೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಲು ಈ ವ್ಯಕ್ತಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
(3 / 5)
ಅದೇನಪ್ಪ ಅಂದ್ರೆ, ಫ್ಯಾಮಿಲಿ ವಾಟ್ಸ್ ಆಪ್ ಗ್ರೂಪ್ನಲ್ಲಿ ನನಗೆ ಕಷ್ಟ ಇದೆ, ಹಣದ ಸಹಾಯ ಮಾಡಿ ಎಂದು ಆ ವ್ಯಕ್ತಿ ಮೆಸೇಜ್ ಮಾಡಿದ್ದಾರೆ. ಇದನ್ನು ಓದಿದ ಮೇಲೂ ಅವರ ಬಳಿಯೇ ಹಣ ಕೇಳಲು ಯಾರಿಗೆ ತಾನೆ ಮನಸ್ಸಾಗುತ್ತೆ ಹೇಳಿ.
(4 / 5)
ಈ ವಿಚಾರವನ್ನು ಟ್ವಿಟರ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದಾರೆ. “ನನ್ನ ಚಿಕ್ಕಪ್ಪ ಈಗಷ್ಟೇ ಫ್ಯಾಮಿಲಿ ಗ್ರೂಪ್ನಲ್ಲಿ ಹಣ ಕೇಳುವ ಸಂದೇಶವನ್ನು ಕಳುಹಿಸಿದ್ದಾರೆ. ನಾನು ಅವರಿಗೆ ಹಣದ ಸಹಾಯ ಮಾಡಲೆಂದು ಬ್ಯಾಂಕಿಂಗ್ ವಿವರಗಳನ್ನು ಕೇಳಲು ಖಾಸಗಿಯಾಗಿ ಸಂದೇಶವನ್ನು ಕಳುಹಿಸಿದೆ. ಅದಕ್ಕೆ ಅವರು 'ನನಗೆ ಹಣದ ಅಗತ್ಯವಿಲ್ಲ. ಸಂಬಂಧಿಕರು ಯಾರೂ ನನ್ನ ಬಳಿ ಹಣ ಕೇಳಬಾರದೆಂದು ಹೀಗೆ ಮಾಡಿದೆ' ಎಂದು ಹೇಳಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು