ಕ್ಯಾಮೆರಾ ಮುಂದೆ ಮೂತ್ರ ವಿಸರ್ಜಿಸಲು ನಟಿಗೆ ತಿಳಿಸಿದ ನಿರ್ದೇಶಕ; ಸಿನಿಮಾ ಶೂಟಿಂಗ್ ಸೋಜಿಗ ಬಹಿರಂಗಪಡಿಸಿದ ಸೈತಾನ್ ನಟಿ
ಗುಜರಾತಿ ಹಾರರ್ ಚಿತ್ರ ವಾಶ್ ಶೂಟಿಂಗ್ ಕುರಿತಾದ ಕೆಲವೊಂದು ಅಚ್ಚರಿಯ ವಿಷಯಗಳನ್ನು ನಟಿ ಜಾನಕಿ ಬೋಡಿವಾಲಾ ಬಹಿರಂಗಪಡಿಸಿದ್ದಾರೆ. ದೃಶ್ಯ ನೈಜ್ಯವಾಗಿ ಮೂಡಿ ಬರಲು ನಿಜವಾಗಿಯೂ ಮೂತ್ರ ವಿಸರ್ಜಿಸಲು ನಿರ್ದೇಶಕರು ಕೇಳಿಕೊಂಡರು ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಗುಜರಾತಿ ಚಿತ್ರ ಬಳಿಕ ಸೈತಾನ್ ಎಂದು ಹಿಂದಿಯಲ್ಲಿ ರಿಮೇಕ್ ಆಗಿತ್ತು.
(1 / 10)
ಸಿನಿಮಾ ಶೂಟಿಂಗ್ ಮಾಡುವಾಗ ದೃಶ್ಯಗಳು ಸಹಜವಾಗಿ ಮೂಡಿಬರಲು ನೈಜ್ಯವಾಗಿ ನಟಿಸುವಂತೆ ಅಥವಾ ವರ್ತಿಸಲು ನಿರ್ದೇಶಕರು ಕೇಳಿದಾಗ ಅದಕ್ಕೆ ಕಲಾವಿದರು ಒಪ್ಪುತ್ತಾರೆ. ಆದರೆ, ಮೂತ್ರ ವಿಸರ್ಜನೆಯಂತಹ ದೃಶ್ಯಗಳ ಶೂಟಿಂಗ್ ಮಾಡುವಾಗ ಸಾಂಕೇತಿಕವಾಗಿ ಕುಳಿತು ಬೇರೆ ಪೈಪ್‌ನಿಂದ ನೀರು ಹರಿಸುವಂತಹ ಕ್ರಮಗಳನ್ನು ಸಾಮಾನ್ಯವಾಗಿ ಚಿತ್ರ ನಿರ್ದೇಶಕರುಗಳು ಪಾಲಿಸುತ್ತಾರೆ.
(2 / 10)
ವಿಶೇಷವಾಗಿ ನಟಿಯರು ಇಂಹ ದೃಶ್ಯಗಳಲ್ಲಿ ಕಾಣಿಸುವಾಗ ಕೃತಕ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಆದರೆ, ಬಾಲಿವುಡ್ ನಟಿಯೊಬ್ಬರು ನನ್ನಲ್ಲಿ ನಿರ್ದೇಶಕರೊಬ್ಬರು ದೃಶ್ಯವು ನೈಜ್ಯವಾಗಿ ಮೂಡಿಬರಲು ನಿಜವಾಗಿ ಮೂತ್ರ ವಿಸರ್ಜಿಸಲು ತಿಳಿಸಿದ್ದರು. ನಾನು ಅದಕ್ಕ ಒಪ್ಪಿದ್ದೆ ಎಂದು ಹೇಳಿದ್ದಾರೆ.
(3 / 10)
ಗುಜರಾತಿ ಹಾರರ್ ಚಿತ್ರ ವಾಶ್ ಶೂಟಿಂಗ್ ಕುರಿತಾದ ಕೆಲವೊಂದು ಅಚ್ಚರಿಯ ವಿಷಯಗಳನ್ನು ನಟಿ ಜಾನಕಿ ಬೋಡಿವಾಲಾ ಬಹಿರಂಗಪಡಿಸಿದ್ದಾರೆ. ಈ ಗುಜರಾತಿ ಚಿತ್ರ ಬಳಿಕ ಸೈತಾನ್ ಎಂದು ಹಿಂದಿಯಲ್ಲಿ ರಿಮೇಕ್ ಆಗಿತ್ತು. ಹಿಂದಿ ಚಿತ್ರದಲ್ಲಿಯೂ ಜಾನಕಿ ನಟಿಸಿದ್ದರು.
(4 / 10)
ಫಿಲ್ಮ್‌ಫೇರ್ ಜೊತೆಗಿನ ಚರ್ಚೆಯಲ್ಲಿ ನಟಿ ಈ ವಿಷಯ ಬಹಿರಂಗಪಡಿಸಿದ್ದಾರೆ. "ಪ್ರಮುಖ ದೃಶ್ಯವೊಂದರ ಶೂಟಿಂಗ್ ಸಮಯದಲ್ಲಿ ನಿರ್ದೇಶಕರು ನನ್ನಲ್ಲಿ ನಿಜವಾಗಿಯೂ ಮೂತ್ರ ವಿಸರ್ಜಿಸಬಹುದೇ ಎಂದು ಕೇಳಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ.
(5 / 10)
ಜಾನಕಿ ತನ್ನ ದೆವ್ವದ ಪಾತ್ರ ಆರ್ಯದ ಕುರಿತು ಹೇಳಿದ್ದಾರೆ. ಆ ಭಯದ ಸಮಯದಲ್ಲಿ ಈ ಸೀನ್ ಇತ್ತು. ವಾಶ್ ಚಿತ್ರದ ನಿರ್ದೇಶಕರು ನಿಜವಾಗಿಯೂ ಮೂತ್ರ ವಿಸರ್ಜನೆ ಮಾಡುತ್ತೀರಾ ಎಂದು ಕೇಳಿದರು. ನಾನು ಅದಕ್ಕೆ ಒಪ್ಪಿದೆ ಎಂದು ಹೇಳದ್ದರು.
(6 / 10)
ಈ ಸಿನಿಮಾಕ್ಕೆ ಸಂಬಂಧಪಟ್ಟಂತೆ ಕಾರ್ಯಾಗಾರ ನಡೆಸುವ ಸಮಯದಲ್ಲಿ ನಿರ್ದೇಶಕರು ನನ್ನನ್ನು ಕೇಳಿದರು. ಅವರು ತುಂಬಾ ಒಳ್ಳೆಯ ವ್ಯಕ್ತಿ. ಉತ್ತಮ ತರಬೇತಿ ನೀಡಿ ನಮ್ಮಿಂದ ನಟನೆ ತೆಗೆಸುತ್ತಿದ್ದರು.
(7 / 10)
ನೀವು ನಿಜವಾಗಿಯೂ ಮೂತ್ರ ವಿಸರ್ಜಿಸುವಿರಾ? ಹೀಗೆ ಮಾಡಿದರೆ ದೃಶ್ಯ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು. ನನಗೆ ತುಂಬಾ ಖುಷಿಯಾಯ್ತು. ಖಂಡಿತಾ ಮಾಡುವೆ ಎಂದೆ. ಒಬ್ಬಳು ನಟಿಯಾಗಿ ಶೂಟಿಂಗ್ ಸಮಯದಲ್ಲಿ ಇಲ್ಲಿಯವರೆಗೆ ಯಾರೂ ಮಾಡದ ಸೀನ್ ಅನ್ನು ನಾನು ಮಾಡಲು ಒಪ್ಪಿದೆ ಎಂದು ಜಾನಕಿ ಹೇಳಿದ್ದಾರೆ.
(8 / 10)
ಆದರೆ, ಶೂಟಿಂಗ್ ಸಮಯದಲ್ಲಿ ಈಕೆ ನಿಜವಾಗಿ ಈ ರೀತಿ ಮೂತ್ರ ವಿಸರ್ಜಿಸಲು ಸಾಧ್ಯವಾಗಿಲ್ಲವಂತೆ. "ಅದು ಅದು ಕಲಾತ್ಮಕ ಕಾರಣದಿಂದ ಆಗಲಿಲ್ಲ. ಅನೇಕ ಬಾರಿ ರಿಟೇಕ್ ಮಾಡಿದರೂ ಅಂದುಕೊಂಡಂತೆ ದೃಶ್ಯ ಮೂಡಿಬರಲಿಲ್ಲ" ಎಂದು ಅವರು ಹೇಳಿದ್ದಾರೆ.
(9 / 10)
ಹಿತು ಕನೋಡಿಯಾ, ನೀಲಮ್ ಪಾಂಚಲ್ ಮತ್ತು ಹಿತೇನ್ ಕುಮಾರ್ ನಟಿಸಿದ ವಾಶ್ ಸಿನಿಮಾ ಗುಜರಾತಿ ಭಾಷೆಯಲ್ಲಿ ಹಿಟ್ ಆಗಿತ್ತು. ಇದೇ ಸಿನಿಮಾ ಬಳಿಕ ಹಿಂದಿಯಲ್ಲಿ ಸೈತಾನ್ ಆಗಿತ್ತು. ಸೈತಾನ್‌ನಲ್ಲಿ ಅಜಯ್ ದೇವಗನ್, ಜ್ಯೋತಿಕಾ ಮತ್ತು ಆರ್ ಮಾಧವನ್ ನಟಿಸಿದ್ದಾರೆ.
ಇತರ ಗ್ಯಾಲರಿಗಳು