Viral News: ಪ್ಯಾರಾಗ್ಲೈಡಿಂಗ್‌ನಲ್ಲಿ ಪರೀಕ್ಷಾಕೇಂದ್ರಕ್ಕೆ ಬಂದ ಮಹಾರಾಷ್ಟ್ರ ವಿದ್ಯಾರ್ಥಿ; ಸಂಚಾರ ದಟ್ಟಣೆ ತಪ್ಪಿಸಲು ಕಂಡುಕೊಂಡ ಭಿನ್ನಮಾರ್ಗ
- Viral News: ಕಷ್ಟಕ್ಕೆ ಸಿಲುಕಿದಾಗ ಹಲವು ದಾರಿಗಳು ಸಿಗುತ್ತವೆ. ಸೂಕ್ತ ದಾರಿ ಕಂಡುಕೊಳ್ಳಬೇಕು ಎನ್ನುವುದಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮಹಾರಾಷ್ಟ್ರದ ವಿದ್ಯಾರ್ಥಿ ಕಂಡುಕೊಂಡ ಮಾರ್ಗ ಗಮನ ಸೆಳೆದಿದೆ.
- Viral News: ಕಷ್ಟಕ್ಕೆ ಸಿಲುಕಿದಾಗ ಹಲವು ದಾರಿಗಳು ಸಿಗುತ್ತವೆ. ಸೂಕ್ತ ದಾರಿ ಕಂಡುಕೊಳ್ಳಬೇಕು ಎನ್ನುವುದಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಲು ಮಹಾರಾಷ್ಟ್ರದ ವಿದ್ಯಾರ್ಥಿ ಕಂಡುಕೊಂಡ ಮಾರ್ಗ ಗಮನ ಸೆಳೆದಿದೆ.
(1 / 6)
ಈತನ ಹೆಸರು ಸರ್ಮಥ್ ಮಹಾಂಗಡೆ. ಊರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ವಲಿ ತಾಲ್ಲೂಕಿನ ಪಸರಾಣಿ. ಪ್ರಥಮ ಬಿಕಾಂ ವಿದ್ಯಾರ್ಥಿ. ಇತ್ತೀಚಿಗೆ ತನ್ನ ಪರೀಕ್ಷಾ ಕೇಂದ್ರಕ್ಕೆ ಆತ ಹೋಗಿದ್ದು ಪ್ಯಾರಾ ಗ್ಲೈಡಿಂಗ್ ಮೂಲಕ.
(2 / 6)
ಸಮರ್ಥ್ ಪರೀಕ್ಷೆಗೆ ಅಂದು ಹೋಗಬೇಕಿತ್ತು. ಆದರೆ ಪರೀಕ್ಷೆ ಸಮಯ ಬದಲಾಗಿರುವುದು ತಡವಾಗಿ ತಿಳಿದಿತ್ತು. ಗುಡ್ಡಗಾಡು ಪ್ರದೇಶದಲ್ಲಿರುವ ತನ್ನ ಊರಿನಿಂದ ಹದಿನೈದು ಕಿಮಿ. ದೂರದ ಪಂಚಗಣಿಗೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿತ್ತು.
(3 / 6)
ಆಗಲೇ ಸಮಯ ಆಗಿದೆ. ವಾಹನದಲ್ಲಿ ಹೋದರೆ ಸಂಚಾರದಲ್ಲಿ ಸಿಲುಕಬೇಕು ಎನ್ನುವ ಆತಂಕ. ತನ್ನ ಊರು ಪ್ರವಾಸಿ ತಾಣವಾಗಿರುವುದರಿಂದ ಅಲ್ಲಿ ನಿತ್ಯ ಸಹಸ್ರಾರು ವಾಹನ ಬರುತ್ತವೆ. ಇದಕ್ಕಾಗಿ ಆತನಿಗೆ ಹೊಳೆದಿದ್ದು ಪ್ಯಾರಾ ಗ್ಲೈಡಿಂಗ್.
(4 / 6)
ತನ್ನ ಊರಿನ ಸಮೀಪದಲ್ಲಿಯೇ ಪ್ಯಾರಾ ಗ್ಲೈಡಿಂಗ್ ಪ್ರವಾಸೋದ್ಯಮ ಚಟುವಟಿಕೆ ನಡೆಯುತ್ತದೆ. ಅದನ್ನು ನಡೆಸುವ ಗೋವಿಂದ ಯಾವ್ಳೆ ಎನ್ನುವ ಸ್ನೇಹಿತನಿಗೆ ಸಮರ್ಥ್ ಕರೆ ಮಾಡಿ ಪರಿಸ್ಥಿತಿ ವಿವರಿಸಿದ.
(5 / 6)
ಸಮರ್ಥ ಮನೆಯಿಂದ ಬರುವ ಹೊತ್ತಿಗೆ ಈತನಿಗಾಗಿಯೇ ಪ್ಯಾರಾಗ್ಲೈಡರ್ ಒಂದು ಸಿದ್ದವಿತ್ತು. ಅದನ್ನು ಟ್ರೇನರ್ ಒಬ್ಬರ ಸಹಾಯದಿಂದ ಸಮರ್ಥ್ ಏರಿದ.
ಇತರ ಗ್ಯಾಲರಿಗಳು