Viral News: ಬೆಂಗಳೂರು ಹೆದ್ದಾರಿಯಲ್ಲಿ ರಾಂಗ್ ಸೈಡ್ ಓಡಿಸಿದ ಬಸ್ ಮಂಡ್ಯಕ್ಕೆ ತಂದು ಚಾಲಕಗೆ ಭಾರೀ ದಂಡ, ಹೀಗಿತ್ತು ಪೊಲೀಸರ ಕಾರ್ಯಾಚರಣೆ
- Wrong Side Driving ಈಗ ಸಾಮಾಜಿಕ ಮಾಧ್ಯಮಗಳ ಕಣ್ಣಿಂದ ತಪ್ಪಿಸಿಕೊಳ್ಳುವುದು ಕಷ್ಟವೇ. ವಿಆರ್‌ಎಲ್ ಬಸ್ ಚಾಲಕ ತಪ್ಪು ದಾರಿಯಲ್ಲಿ ಬಸ್ ಚಲಾಯಿಸಿ ಸಿಕ್ಕಿಬಿದ್ದಿದ್ದಾನೆ. ಕರ್ನಾಟಕ ಪೊಲೀಸರು ಬಸ್ ಹಿಡಿದು ತಂದದ್ದು ಹೇಗೆ. ಇಲ್ಲಿದೆ ಚಿತ್ರನೋಟ..
- Wrong Side Driving ಈಗ ಸಾಮಾಜಿಕ ಮಾಧ್ಯಮಗಳ ಕಣ್ಣಿಂದ ತಪ್ಪಿಸಿಕೊಳ್ಳುವುದು ಕಷ್ಟವೇ. ವಿಆರ್‌ಎಲ್ ಬಸ್ ಚಾಲಕ ತಪ್ಪು ದಾರಿಯಲ್ಲಿ ಬಸ್ ಚಲಾಯಿಸಿ ಸಿಕ್ಕಿಬಿದ್ದಿದ್ದಾನೆ. ಕರ್ನಾಟಕ ಪೊಲೀಸರು ಬಸ್ ಹಿಡಿದು ತಂದದ್ದು ಹೇಗೆ. ಇಲ್ಲಿದೆ ಚಿತ್ರನೋಟ..
(1 / 6)
ನಾಲ್ಕು ದಿನದ ಹಿಂದೆ ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ವಿಆರ್‌ಎಲ್ ಬಸ್ ಮುಂಬೈ ಕಡೆಗೆ ಹೊರಟಿತ್ತು ಮಂಡ್ಯ ಸಮೀಪ ಬಸ್ ವಿರುದ್ದ ದಿಕ್ಕಿನಲ್ಲಿ ವೇಗವಾಗಿ ಚಲಿಸಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
(2 / 6)
ಕರ್ನಾಟಕದ ಹಳೆಯ ಸಾರಿಗೆ ಸೇವಾದಾರರಾದ ವಿಆರ್‌ಎಲ್ ಎಂದರೆ ಶಿಸ್ತು. ಆದರೆ ಚಾಲಕ ರಸ್ತೆ ದಾಟುವ ಭರದಲ್ಲಿ ತಪ್ಪು ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.
(3 / 6)
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗಿದ್ದನ್ನು ಗಮನಿಸಿದ ಎಡಿಜಿಪಿ ಅಲೋಕ್ ಕುಮಾರ್ ಅವರು ಕ್ರಮಕ್ಕೆ ಮಂಡ್ಯ ಪೊಲೀಸರಿಗೆ ಸೂಚಿಸಿದ್ದರು. ಅಲ್ಲದೇ ಎಕ್ಸ್‌ನಲ್ಲೂ ಪೋಸ್ಟ್ ಮಾಡಿ ಪ್ರಯಾಣಿಕರನ್ನು ತುಂಬಿಸಿಕೊಂಡು ವಿರುದ್ದ ದಿಕ್ಕಿನಲ್ಲಿ ಬಸ್ ಹೊರಟಿದ್ದ ಕ್ರಮ ತಪ್ಪು ಎಂದು ಹೇಳಿದ್ದರು.
(4 / 6)
ಮಂಡ್ಯ ಪೊಲೀಸರು ಬಸ್‌ನ ವಿವರಗಳನ್ನು ಪಡೆದುಕೊಂಡು ಮಾಹಿತಿ ಕಲೆ ಹಾಕಿದ್ದರು.ಬಸ್ ಮುಂಬೈ ತಲುಪಿದ್ದು ಗೊತ್ತಾಗಿತ್ತು. ಚಾಲಕ ಪ್ರಶಾಂತನನ್ನು ಸಂಪರ್ಕಿಸಿದ ಪೊಲೀಸರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಬರುವಂತೆ ಸೂಚಿಸಿದ್ದರು.
(5 / 6)
ಬಸ್ ಚಾಲಕ ಪ್ರಶಾಂತ್ ಹಾಗೂ ಸಹ ಚಾಲಕ ನೀಲಪ್ಪ ಬಸ್ ಸಮೇತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಗೆ ಆಗಮಿಸಿದ್ದರು. ಅಚಾತುರ್ಯದಿಂದ ಹೀಗೆ ಆಗಿದೆ. ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ.
ಇತರ ಗ್ಯಾಲರಿಗಳು