ಟಿ20 ವಿಶ್ವಕಪ್ ಫೈನಲ್ನಲ್ಲಿ 76 ರನ್ ಬಾರಿಸಿ 2ನೇ ಬಾರಿ ಗೌತಮ್ ಗಂಭೀರ್ ದಾಖಲೆ ಮುರಿದ ವಿರಾಟ್ ಕೊಹ್ಲಿ
- Virat Kohli Records: ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭರ್ಜರಿ 76 ರನ್ ಬಾರಿಸುವ ಮೂಲಕ ಗೌತಮ್ ಗಂಭೀರ್ ದಾಖಲೆಯನ್ನು ಎರಡನೇ ಬಾರಿ ಮುರಿದಿದ್ದಾರೆ.
- Virat Kohli Records: ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಭರ್ಜರಿ 76 ರನ್ ಬಾರಿಸುವ ಮೂಲಕ ಗೌತಮ್ ಗಂಭೀರ್ ದಾಖಲೆಯನ್ನು ಎರಡನೇ ಬಾರಿ ಮುರಿದಿದ್ದಾರೆ.
(1 / 5)
ಟೀಮ್ ಇಂಡಿಯಾ ಬ್ಯಾಟಿಂಗ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಕೊನೆಗೂ ಅಬ್ಬರಿಸಿದರು. ಲೀಗ್, ಸೂಪರ್-8, ಸೆಮಿಫೈನಲ್ನಲ್ಲಿ ನಿರಾಸೆ ಮೂಡಿಸಿದ್ದ ಕೊಹ್ಲಿ, ಫೈನಲ್ನಲ್ಲಿ ಅದ್ಭುತ ಅರ್ಧಶತಕ ಸಿಡಿಸಿದರು. ಸೌತ್ ಆಫ್ರಿಕಾ ಬೌಲರ್ಗಳನ್ನು ಬೇಟೆಯಾಡಿದ ಕಿಂಗ್, 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 76 ರನ್ ಗಳಿಸಿ ಔಟಾದರು.
(2 / 5)
ತಂಡವು 34 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ವೇಳೆ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದರು. ವಿರಾಟ್ ಅವರನ್ನು ಓಪನಿಂಗ್ ಮಾಡಿಸುವ ನಿರ್ಧಾರ ವಿವಾದದ ಬಿರುಗಾಳಿ ಎಬ್ಬಿಸಿತ್ತು. ಆದರೆ, ಫೈನಲ್ನಲ್ಲಿ ಅವರು ಟೀಕಾಕಾರರ ಬಾಯಿ ಮುಚ್ಚಿಸಿದರು. ಇದರೊಂದಿಗೆ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
(3 / 5)
ಫೈನಲ್ನಲ್ಲಿ 76 ರನ್ ಬಾರಿಸುವ ಮೂಲಕ 2007ರ ವಿಶ್ವಕಪ್ನಲ್ಲಿ ಗೌತಮ್ ಗಂಭೀರ್ ನಿರ್ಮಿಸಿದ್ದ ದಾಖಲೆಯನ್ನು ವಿರಾಟ್ ಕೊಹ್ಲಿ ಎರಡನೇ ಬಾರಿ ಮುರಿದಿದ್ದಾರೆ. ಟಿ20 ವಿಶ್ವಕಪ್ ಫೈನಲ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿದ್ದಾರೆ ಕೊಹ್ಲಿ. 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಗಂಭೀರ್ 75 ರನ್ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 2014ರ ವಿಶ್ವಕಪ್ ಫೈನಲ್ನಲ್ಲಿ ಕೊಹ್ಲಿ 77 ರನ್ ಸಿಡಿಸಿದ್ದರು.
(4 / 5)
ಟಿ20 ವಿಶ್ವಕಪ್ ಫೈನಲ್ ಇತಿಹಾಸದಲ್ಲಿ ಎರಡು ಅರ್ಧಶತಕ ದಾಖಲಿಸಿದ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. 2024ರ ಟಿ20 ವಿಶ್ವಕಪ್ಗೂ ಮುನ್ನ 2014ರ ಆವೃತ್ತಿಯ ಫೈನಲ್ನಲ್ಲಿ ಕೊಹ್ಲಿ ಅರ್ಧಶತಕ ಸಿಡಿಸಿದ್ದರು. ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ವೆಸ್ಟ್ ಇಂಡೀಸ್ನ ಮರ್ಲಾನ್ ಸ್ಯಾಮುಯೆಲ್ಸ್ ಅವರು ಸಹ ಈ ಸಾಧನೆ ಮಾಡಿದ್ದಾರೆ.
(5 / 5)
ಬಾಬರ್ ಅಜಮ್ ಅವರ ದಾಖಲೆಯನ್ನೂ ವಿರಾಟ್ ಸರಿಗಟ್ಟಿದ್ದಾರೆ. ಟಿ20ಐ ಕ್ರಿಕೆಟ್ನಲ್ಲಿ ಅತ್ಯಧಿಕ 50+ ಸ್ಕೋರ್ ಮಾಡಿದ ಜಂಟಿ ವಿಶ್ವ ದಾಖಲೆ ಹೊಂದಿದ್ದಾರೆ. ಕೊಹ್ಲಿ ಮತ್ತು ಬಾಬರ್ ತಲಾ 39 ಬಾರಿ 50 ರನ್ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ವಿರಾಟ್ ಟಿ20ಐ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು ಬಾಬರ್ ಶೀಘ್ರದಲ್ಲೇ ಈ ದಾಖಲೆ ಮುರಿಯಲಿದ್ದಾರೆ. ರೋಹಿತ್ ಶರ್ಮಾ 37 ಬಾರಿ ಈ ಸಾಧನೆ ಮಾಡಿದ್ದಾರೆ.
ಇತರ ಗ್ಯಾಲರಿಗಳು