Virat Kohli: 15 ವರ್ಷಪೂರ್ತಿ ಟೀಮ್ ಇಂಡಿಯಾದಲ್ಲಿ ಕಿಂಗ್ ಕೊಹ್ಲಿ ದರ್ಬಾರ್; ವಿರಾಟರೂಪದ ಚಿತ್ರಮಾಹಿತಿ ಇಲ್ಲಿದೆ
- Virat Kohli 15 Years: ಕ್ರಿಕೆಟ್ ಲೋಕದ ಕಿಂಗ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟು ಇಂದಿಗೆ 15 ವರ್ಷಗಳಾಗಿವೆ. 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭಿಸಿದ ವಿರಾಟ್, ಈ 15 ವರ್ಷಗಳಲ್ಲಿ ಮಾಡಿದ ಸಾಧನೆ ನೂರಾರು.
- Virat Kohli 15 Years: ಕ್ರಿಕೆಟ್ ಲೋಕದ ಕಿಂಗ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟು ಇಂದಿಗೆ 15 ವರ್ಷಗಳಾಗಿವೆ. 2008ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನ ಆರಂಭಿಸಿದ ವಿರಾಟ್, ಈ 15 ವರ್ಷಗಳಲ್ಲಿ ಮಾಡಿದ ಸಾಧನೆ ನೂರಾರು.
(2 / 10)
Virat Kohli: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ವಿರಾಟ್ ಕೊಹ್ಲಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಏಕದಿನ, ಟೆಸ್ಟ್ ಮತ್ತು ಟಿ20 ಪಂದ್ಯಗಳಲ್ಲಿ ಒಟ್ಟು 76 ಶತಕಗಳನ್ನು ಗಳಿಸಿದ್ದಾರೆ. ಏಕದಿನದಲ್ಲಿ 46, ಟೆಸ್ಟ್‌ನಲ್ಲಿ 29 ಮತ್ತು ಟಿ20ಯಲ್ಲಿ ಒಂದು ಶತಕ ಸಿಡಿಸಿದ್ದಾರೆ. 100 ಶತಕ ಸಿಡಿಸಿರುವ ಸಚಿನ್ ಈ ಪಟ್ಟಿಯಲ್ಲಿ ಮೊದಲಿಗ. ಅಗ್ರ ಇಬ್ಬರಯ ಭಾರತೀಯರೇ ಎನ್ನುವುದು ಭಾರತಕ್ಕೆ ಹೆಮ್ಮೆಯ ವಿಷಯ.
(3 / 10)
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಒಟ್ಟು 20 ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.(BCCI Twitter)
(4 / 10)
ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಕ್ಯಾಚ್ ಪಡೆದ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಏಕದಿನದಲ್ಲಿ ಒಟ್ಟು 142 ಕ್ಯಾಚ್‌ಗಳನ್ನು ಪಡೆದಿದ್ದಾರೆ.(AFP)
(5 / 10)
ಏಕದಿನ ಮಾದರಿಯಲ್ಲಿ 7000ದಿಂದ 12000 ರನ್‌ಗಳ ಮೈಲುಗಲ್ಲು ತಲುಪಿದ ವೇಗದ ಬ್ಯಾಟರ್ ಕೊಹ್ಲಿ. ಮುಂದೆ ಕೇವಲ 102 ರನ್ ಗಳಿಸಿದರೆ ವೇಗವಾಗಿ 13 ಸಾವಿರ ರನ್ ಗಳಿಸಿದ ದಾಖಲೆಗೆ ವಿರಾಟ್ ಪಾತ್ರರಾಗಲಿದ್ದಾರೆ. 2008 ರಿಂದ ಒಟ್ಟು ಈವರೆಗೂ 275 ಏಕದಿನ ಪಂದ್ಯಗಳನ್ನು ಆಡಿರುವ ಕೊಹ್ಲಿ, 57.32ರ ಸರಾಸರಿಯಲ್ಲಿ, 46 ಶತಕಗಳ ಸಹಾಯದಿಂದ 12,898 ರನ್ ಗಳಿಸಿದ್ದಾರೆ. 65 ಅರ್ಧಶತಕಗಳೂ ಸೇರಿವೆ.(Getty)
(6 / 10)
ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿದ 111 ಪಂದ್ಯಗಳಲ್ಲಿ 29 ಶತಕ, 7 ದ್ವಿಶತಕ, 29 ಅರ್ಧಶತಕಗಳ ನೆರವಿನಿಂದ 8676 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 254 ರನ್. ನಾಯಕನಾಗಿ 68 ಟೆಸ್ಟ್ ಪಂದ್ಯಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿರುವ ಕೊಹ್ಲಿ, ಬರೋಬ್ಬರಿ 40 ಗೆಲುವು ದಾಖಲಿಸಿದ್ದಾರೆ. ಕೇವಲ 17 ಪಂದ್ಯಗಳಲ್ಲಿ ಮಾತ್ರ ತಂಡ ಸೋತರೆ, ಅವರ ನಾಯಕತ್ವದಲ್ಲಿ ಭಾರತ 11 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಗೆಲುವಿನ ಪ್ರಮಾಣ ಶೇಕಡಾ 58.82 ರಷ್ಟಿದೆ.
(7 / 10)
ಏಕದಿನ ಮಾದರಿಯಲ್ಲಿ ಕನಿಷ್ಠ 50 ಇನ್ನಿಂಗ್ಸ್‌ಗಳನ್ನು ಆಡಿದ ಬ್ಯಾಟ್ಸ್‌ಮನ್‌ಗಳ ಪೈಕಿ ವಿರಾಟ್ ಕೊಹ್ಲಿ ಅತ್ಯುತ್ತಮ ಸರಾಸರಿ ಹೊಂದಿದ್ದಾರೆ. ಅವರು ಒಟ್ಟು 275 ಪಂದ್ಯಗಳಲ್ಲಿ 57.3 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. (File)
(8 / 10)
ಏಕದಿನ ಮಾದರಿಯಲ್ಲಿ ಒಂದೇ ದೇಶದ ವಿರುದ್ಧ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನೂ ಕೊಹ್ಲಿ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಅವರು 10 ಶತಕಗಳನ್ನು ಗಳಿಸಿದ್ದಾರೆ.
(9 / 10)
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ. 115 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿರುವ ಕಿಂಗ್, 4008 ರನ್ ಬಾರಿಸಿದ್ದಾರೆ. ಇದರಲ್ಲಿ 37 ಅರ್ಧಶತಕ, 1 ಶತಕ ಸೇರಿದೆ. ಈ ಮಾದರಿಯಲ್ಲಿ 4 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಕೊಹ್ಲಿ.(AFP)
ಇತರ ಗ್ಯಾಲರಿಗಳು