ಐಪಿಎಲ್ ಫೈನಲ್​​ನಲ್ಲಿ ಐತಿಹಾಸಿಕ ದಾಖಲೆ ಬರೆದ ವಿರಾಟ್ ಕೊಹ್ಲಿ; ಧವನ್​ ಹಿಂದಿಕ್ಕಿದ ಕಿಂಗ್ ಈ ಸಾಧನೆ ಮಾಡಿದ ಮೊದಲಿಗ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಫೈನಲ್​​ನಲ್ಲಿ ಐತಿಹಾಸಿಕ ದಾಖಲೆ ಬರೆದ ವಿರಾಟ್ ಕೊಹ್ಲಿ; ಧವನ್​ ಹಿಂದಿಕ್ಕಿದ ಕಿಂಗ್ ಈ ಸಾಧನೆ ಮಾಡಿದ ಮೊದಲಿಗ

ಐಪಿಎಲ್ ಫೈನಲ್​​ನಲ್ಲಿ ಐತಿಹಾಸಿಕ ದಾಖಲೆ ಬರೆದ ವಿರಾಟ್ ಕೊಹ್ಲಿ; ಧವನ್​ ಹಿಂದಿಕ್ಕಿದ ಕಿಂಗ್ ಈ ಸಾಧನೆ ಮಾಡಿದ ಮೊದಲಿಗ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸಿದ್ದಾರೆ. ಶಿಖರ್ ಧವನ್ ಅವರ ಬೃಹತ್ ದಾಖಲೆ ಮುರಿದಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​​ ಫೈನಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್​ ಬ್ಯಾಟರ್ ವಿರಾಟ್ ಕೊಹ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
icon

(1 / 7)

(AFP)

ಐಪಿಎಲ್​ ಫೈನಲ್​ನಲ್ಲಿ ತಾನು ಬಾರಿಸಿದ ಮೊದಲ ಬೌಂಡರಿಯೊಂದಿಗೆ ಕೊಹ್ಲಿ, ಶಿಖರ್​ ಧವನ್ ದಾಖಲೆ ಮುರಿದಿದ್ದಾರೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
icon

(2 / 7)

(AP)

ಕೊಹ್ಲಿ 267 ಐಪಿಎಲ್ ಪಂದ್ಯಗಳ 259 ಇನ್ನಿಂಗ್ಸ್​​ಗಳಲ್ಲಿ 769 ಬೌಂಡರಿ ಸಿಡಿಸಿ ಧವನ್​ರನ್ನು ಹಿಂದಿಕ್ಕಿದ್ದಾರೆ. ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದ ಧವನ್ 222 ಪಂದ್ಯಗಳಲ್ಲಿ 768 ಬೌಂಡರಿ ಸಿಡಿಸಿದ್ದಾರೆ.
icon

(3 / 7)

(PTI)

ಇದು ವಿಶ್ವದಾಖಲೆಯೂ ಹೌದು. ಟಿ20 ಲೀಗ್ ಕ್ರಿಕೆಟ್​​ನಲ್ಲಿ ಫ್ರಾಂಚೈಸಿಯೊಂದರ ಅತಿ ಹೆಚ್ಚು ಬೌಂಡರಿ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹಿರಿಮೆಗೂ ಪಾತ್ರರಾಗಿದ್ದಾರೆ.
icon

(4 / 7)

ಕೊಹ್ಲಿ ಮತ್ತು ಧವನ್ ನಂತರ ಡೇವಿಡ್ ವಾರ್ನರ್ ಸ್ಥಾನ ಪಡೆದಿದ್ದಾರೆ. 3ನೇ ಸ್ಥಾನಿಯಾದ ವಾರ್ನರ್​, 184 ಪಂದ್ಯಗಳಲ್ಲಿ 663 ಬೌಂಡರಿ ಸಿಡಿಸಿದ್ದಾರೆ.
icon

(5 / 7)

ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್​ ಶರ್ಮಾ 272 ಪಂದ್ಯಗಳಲ್ಲಿ 640 ಬೌಂಡರಿ ಸಿಡಿಸಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.
icon

(6 / 7)

ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಐದನೇ ಸ್ಥಾನದಲ್ಲಿದ್ದಾರೆ. 172 ಪಂದ್ಯಗಳಲ್ಲಿ 514 ಬೌಂಡರಿ ಬಾರಿಸಿದ್ದಾರೆ.
icon

(7 / 7)

ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಐದನೇ ಸ್ಥಾನದಲ್ಲಿದ್ದಾರೆ. 172 ಪಂದ್ಯಗಳಲ್ಲಿ 514 ಬೌಂಡರಿ ಬಾರಿಸಿದ್ದಾರೆ.
(REUTERS)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು