ಕನ್ನಡ ಸುದ್ದಿ  /  Photo Gallery  /  Virat Kohli Creates History The 1st Indian Batsman To Score 12000 Runs In T20 Crickets History Csk Vs Rcb Ipl 2024 Prs

ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಿರಾಟ್ ಕೊಹ್ಲಿ

  • Virat Kohli T20 Records : ಐಪಿಎಲ್ 2024ರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ ವೈಯಕ್ತಿಕ ದಾಖಲೆ ಬರೆದಿದ್ದಾರೆ.

ಚೆಪಾಕ್​​​ನಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಿರಾಸೆ ಮೂಡಿಸಿದರು. 20 ಎಸೆತಗಳಲ್ಲಿ 1 ಸಿಕ್ಸರ್​ ಸಹಿತ 21 ರನ್ ಗಳಿಸಿದರು. ಆದಾಗ್ಯೂ, ಕೊಹ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೈಲಿಗಲ್ಲೊಂದನ್ನು ತಲುಪಿದ್ದಾರೆ. ಈ ದಾಖಲೆ ಬರೆದ ಮೊದಲ ಮತ್ತು ಏಕೈಕ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
icon

(1 / 5)

ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಟಿ20 ಕ್ರಿಕೆಟ್​​ನಲ್ಲಿ 12,000 ರನ್ ಪೂರೈಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ 6 ರನ್ ಗಳಿಸಿದ ವೇಳೆ ಈ ದಾಖಲೆ ಬರೆದರು. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 377 ಟಿ20 ಪಂದ್ಯಗಳ 360 ಇನ್ನಿಂಗ್ಸ್​​ಗಳಲ್ಲಿ ಮೈಲಿಗಲ್ಲು ತಲುಪಿದರು. ಕೊಹ್ಲಿ ಟಿ20 ಕ್ರಿಕೆಟ್​​ನಲ್ಲಿ 8 ಶತಕ, 91 ಅರ್ಧಶತಕ ಸಿಡಿಸಿದ್ದಾರೆ.
icon

(2 / 5)

ಟಿ20 ಕ್ರಿಕೆಟ್​​​ನಲ್ಲಿ 12,000 ರನ್ ಪೂರೈಸಿದ ವಿಶ್ವದ 6ನೇ ಬ್ಯಾಟ್ಸ್​​​ಮನ್​ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಕ್ರಿಸ್ ಗೇಲ್ (14562 ರನ್), ಪಾಕಿಸ್ತಾನದ ಶೋಯೆಬ್ ಮಲಿಕ್ (13360 ರನ್), ವೆಸ್ಟ್ ಇಂಡೀಸ್​​​ನ ಕೀರನ್ ಪೊಲಾರ್ಡ್ (12900 ರನ್), ಇಂಗ್ಲೆಂಡ್​ನ ಅಲೆಕ್ಸ್ ಹೇಲ್ಸ್ (12319 ರನ್) ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (12065 ರನ್) ಈ ಸಾಧನೆ ಮಾಡಿದ್ದಾರೆ. ಭಾರತೀಯರ ಪೈಕಿ ರೋಹಿತ್ ಶರ್ಮಾ (11156 ರನ್) 8ನೇ ಸ್ಥಾನದಲ್ಲಿದ್ದಾರೆ.
icon

(3 / 5)

ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ 4037 ರನ್, ಐಪಿಎಲ್​ನಲ್ಲಿ ಆರ್​​ಸಿಬಿ ಪರ 7708 ರನ್ ಗಳಿಸಿದ್ದಾರೆ. ಕೊಹ್ಲಿ ರಾಜ್ಯ ತಂಡದ ಪರ ಟಿ20 ಕ್ರಿಕೆಟ್​​ನಲ್ಲಿ 270 ರನ್ ಗಳಿಸಿದ್ದಾರೆ.
icon

(4 / 5)

ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ 1000 ರನ್​​ಗಳ ಮೈಲಿಗಲ್ಲನ್ನು ದಾಟಿದರು. ಈ ಮೈಲಿಗಲ್ಲನ್ನು ತಲುಪಲು ವಿರಾಟ್​​ಗೆ 15 ರನ್ ಅಗತ್ಯವಿತ್ತು. ಇದೀಗ ಸಿಎಸ್​ಕೆ ವಿರುದ್ದ 1000+ ರನ್ ಗಳಿಸಿದ ಧವನ್ ಬಳಿಕ ಎರಡನೇ ಆಟಗಾರ ಕೊಹ್ಲಿ.
icon

(5 / 5)

IPL_Entry_Point

ಇತರ ಗ್ಯಾಲರಿಗಳು