Virat Kohli: ಅನುಷ್ಕಾ ಶರ್ಮಾಗಿಂತ ಮೊದಲು ವಿರಾಟ್ ಬೇರೆ ನಟಿ ಜತೆ ರೋಮಾನ್ಸ್ ಮಾಡ್ತಿದ್ರ? ಕೊಹ್ಲಿ ಮದುವೆ ತನಕ ಸುಮ್ಮನಿದ್ರು ಆ ನಟಿ
Virat Kohli Dating: ಕ್ರಿಕೆಟಿಗ ವಿರಾಟ್ ಕೊಹ್ಲಿ ನಾಲ್ಕು ವರ್ಷಗಳಿಂದ ಅನುಷ್ಕಾ ಶರ್ಮಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ 2017ರಲ್ಲಿ ಅವರಿಬ್ಬರು ವಿವಾಹವಾದರು. ಆದರೆ, ಅದಕ್ಕೂ ಐದು ವರ್ಷಗಳ ಹಿಂದೆ ವಿರಾಟ್ ಕೊಹ್ಲಿಯು ದಕ್ಷಿಣ ಭಾರತದ ನಾಯಕಿಯೊಬ್ಬರ ಜತೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಯೂ ಇದೆ.
(1 / 9)
Caption: ವಿರಾಟ್ ಕೊಹ್ಲಿ ನಿನ್ನೆಯಷ್ಟೇ (ನವೆಂಬರ್ 5) ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿ ಏಳು ವರ್ಷಗಳಾಗಿವೆ. ಏಳು ವರ್ಷಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದರೂ ಅದಕ್ಕೂ ಮೊದಲೇ ಡೇಟಿಂಗ್ ಮಾಡುತ್ತಿದ್ದರು. ವದಂತಿಗಳ ಪ್ರಕಾರ ಇವರಿಬ್ಬರು ಮದುವೆಗೆ ಮುನ್ನವೇ ಡೇಟಿಂಗ್‌ನಲ್ಲಿದ್ದರು.
(2 / 9)
Caption: ಅನುಷ್ಕಾ ಶರ್ಮಾ ಅವರನ್ನು ವಿರಾಟ್ ಕೊಹ್ಲಿ 2013ರಲ್ಲಿ ಶಾಂಪೂ ಕಂಪನಿಯ ಜಾಹೀರಾತಿನಲ್ಲಿ ಮೊದಲ ಬಾರಿಗೆ ಭೇಟಿಯಾದರು. ಮೊದಲ ನೋಟದಲ್ಲೇ ಅನುಷ್ಕಾ ಕೊಹ್ಲಿಯನ್ನು ಇಷ್ಟಪಟ್ಟರು. ಆದರೆ ಅನುಷ್ಕಾ ಶರ್ಮಾ ಆ ಸಮಯದಲ್ಲಿ ಕೊಹ್ಲಿಯ ವರ್ತನೆಯಿಂದ ತಬ್ಬಿಬ್ಬಾಗಿದ್ದರಂತೆ. ಜಾಹೀರಾತಿನ ಸಮಯದಲ್ಲಿ ಸ್ವಲ್ಪ ನರ್ವಸ್ ಆಗಿದ್ದೆ ಎಂದು ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
(3 / 9)
Caption: ಜಾಹೀರಾತಿನ ಚಿತ್ರೀಕರಣದ ಸಮಯದಲ್ಲಿ, ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ನಡುವೆ ಸಣ್ಣ ಜಗಳವೂ ನಡೆದಿತ್ತಂತೆ.
(4 / 9)
Caption: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆತ್ಮೀಯರಾದ ಬಳಿಕ ತಮನ್ನ ಭಾಟಿಯಾ ಕೊಹ್ಲಿ ಬಗ್ಗೆ ಯಾರ ಜತೆಗೂ ಮಾತನಾಡಲಿಲ್ಲ. ಅನುಷ್ಕಾ ಶರ್ಮಾ ಕೂಡ ಮೊದಲು ವಿರಾಟ್ ಕೊಹ್ಲಿ ಮೇಲೆ ಕೋಪಗೊಂಡರು. ಬಳಿಕ ರಾಜಿಯಾದರು. ಆಮೇಲೆ ಪ್ರೀತಿಸಿದರು. ಸುಮಾರು ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ವಿರಾಟ್ ಕೊಹ್ಲಿಗಾಗಿ ಸಾಕಷ್ಟು ಪಂದ್ಯಗಳನ್ನು ವೀಕ್ಷಿಸಲು ಅವರು ಕ್ರೀಡಾಂಗಣಕ್ಕೆ ಬರುತ್ತಿದ್ದರು. (AFP)
(5 / 9)
Caption: ಆದರೆ, ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಅವರನ್ನು ಪ್ರೀತಿಸುವ ಬದಲು ನಟಿ ತಮನ್ನಾ ಭಾಟಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸಾಕಷ್ಟು ವದಂತಿ ಹರಿದಾಡುತ್ತಿತ್ತು. ಇಬ್ಬರೂ ಒಟ್ಟಿಗೆ ಜಾಹೀರಾತಿನಲ್ಲಿ ನಟಿಸಿದ್ದಾರೆ.
(6 / 9)
Caption: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆಯಾದ ನಂತರ ತಮನ್ನಾ ಭಾಟಿಯಾ ಕೊಹ್ಲಿ ಅವರೊಂದಿಗಿನ ಡೇಟಿಂಗ್ ವದಂತಿಗಳ ಕುರಿತು ಮಾತನಾಡಿದ್ದಾರೆ. 2018ರಲ್ಲಿ, ತಮನ್ನಾ ಅವರು ಕೊಹ್ಲಿ ಅವರೊಂದಿಗಿನ ಡೇಟಿಂಗ್ ವದಂತಿಗಳ ಬಗ್ಗೆ ಮಾತನಾಡಿದ್ದರು. 2012ರಲ್ಲಿ ನಾವಿಬ್ಬರು ಜಾಹೀರಾತು ಚಿತ್ರೀಕರಣದ ಸಮಯದಲ್ಲಿ ಮಾತ್ರ ಭೇಟಿಯಾಗಿದ್ದೇವು. ಬಳಿಕ ನಾವಿಬ್ಬರು ಭೇಟಿಯಾಗಿಲ್ಲ ಎಂದು ಹೇಳಿದ್ದರು. (AFP)
(7 / 9)
Caption: ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ವರ್ಷದ ಫೆಬ್ರವರಿ 15 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅನುಷ್ಕಾ ತಮ್ಮ ಮಗನಿಗೆ ಅಕೈ ಎಂದು ಹೆಸರಿಟ್ಟಿದ್ದರು.
(8 / 9)
ತಾಯಿಯಾದ ನಂತರ ಅನುಷ್ಕಾ ಶರ್ಮಾ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಮಕ್ಕಳಾದ ವಮಿಕಾ ಮತ್ತು ಅಕಾಯಾ ಅವರನ್ನು ನೋಡಿಕೊಳ್ಳಲು ಅವರು ತಮ್ಮ ವೃತ್ತಿಜೀವನವನ್ನು ಪಣಕ್ಕಿಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೊಹ್ಲಿಯನ್ನು ಟೀಕಿಸುವವರ ವಿರುದ್ಧ ಅನುಷ್ಕಾ ಶರ್ಮಾ ವಾಗ್ದಾಳಿ ನಡೆಸುತ್ತಿದ್ದಾರೆ.
ಇತರ ಗ್ಯಾಲರಿಗಳು