ಕಿವೀಸ್ ವಿರುದ್ಧ ಕಣಕ್ಕಿಳಿದು ವಿಶೇಷ ಮೈಲಿಗಲ್ಲು ತಲುಪಿದ ವಿರಾಟ್; ಈ ವಿಶ್ವಕಪ್ ದಾಖಲೆ ಮಾಡಿದ ಮೊದಲ ಭಾರತೀಯ
- India vs New Zealand World Cup 2023 Semi-Final: ಏಕದಿನ ವಿಶ್ವಕಪ್‌ನಲ್ಲಿ ಇದಕ್ಕೂ ಮೊದಲು ವಿಶ್ವದ ನಾಲ್ವರು ಕ್ರಿಕೆಟಿಗರು ಮಾತ್ರ ತಲುಪಿದ್ದ ಮೈಲಿಗಲ್ಲನ್ನು ವಿರಾಟ್ ತಲುಪಿದ್ದಾರೆ. ಕೊಹ್ಲಿ ಜೊತೆಗೆ ಕಿವೀಸ್ ನಾಯಕ ವಿಲಿಯಮ್ಸನ್ ಕೂಡಾ ಈ ರೆಕಾರ್ಡ್ ಮಾಡಿದ್ದಾರೆ. ವಿಶೇಷವೆಂದರೆ ಈ ದಾಖಲೆ ಮಾಡಿದ ಮೊದಲ ಭಾರತೀಯ ವಿರಾಟ್.
- India vs New Zealand World Cup 2023 Semi-Final: ಏಕದಿನ ವಿಶ್ವಕಪ್‌ನಲ್ಲಿ ಇದಕ್ಕೂ ಮೊದಲು ವಿಶ್ವದ ನಾಲ್ವರು ಕ್ರಿಕೆಟಿಗರು ಮಾತ್ರ ತಲುಪಿದ್ದ ಮೈಲಿಗಲ್ಲನ್ನು ವಿರಾಟ್ ತಲುಪಿದ್ದಾರೆ. ಕೊಹ್ಲಿ ಜೊತೆಗೆ ಕಿವೀಸ್ ನಾಯಕ ವಿಲಿಯಮ್ಸನ್ ಕೂಡಾ ಈ ರೆಕಾರ್ಡ್ ಮಾಡಿದ್ದಾರೆ. ವಿಶೇಷವೆಂದರೆ ಈ ದಾಖಲೆ ಮಾಡಿದ ಮೊದಲ ಭಾರತೀಯ ವಿರಾಟ್.
(1 / 7)
2023ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವಾಂಖೆಡೆಯಲ್ಲಿ ಮೈದಾನಕ್ಕಿಳಿಯುವುದರೊಂದಿಗೆ ವಿರಾಟ್ ಕೊಹ್ಲಿ ಅಭೂತಪೂರ್ವ ವೈಯಕ್ತಿಕ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಈ ಹಿಂದೆ ವಿಶ್ವದ ಕೇವಲ ನಾಲ್ವರು ಕ್ರಿಕೆಟಿಗರ ಹೆಸರಿನಲ್ಲಿದ್ದ ಇಂಥ ದಾಖಲೆಯನ್ನು ಕೊಹ್ಲಿ ಬರೆದಿದ್ದಾರೆ. ಕೊಹ್ಲಿ ಜೊತೆಗೆ ಎದುರಾಳಿ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡಾ ಈ ಪಟ್ಟಿಯಲ್ಲಿ ಆರನೆಯವರಾಗಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಏಕದಿನ ಸ್ವರೂಪದಲ್ಲಿ ಅತಿ ಹೆಚ್ಚು 4 ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಕಾಣಿಸಿಕೊಂಡ ಜಂಟಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 2011, 2015, 2019ರ ವಿಶ್ವಕಪ್ ಬಳಿಕ, ಇದೀಗ 2023ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಕೊಹ್ಲಿ ಆಡಿದ್ದಾರೆ. ಇಂಥಾ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ ಎಂಬ ಹಿರಿಮೆ ಕೊಹ್ಲಿಯದ್ದು.(ICC Twitter)
(2 / 7)
ವಿರಾಟ್ ಜೊತೆಗೆ ಇದೇ ಸೆಮಿಫೈನಲ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕೂಡ ವಿಶೇಷ ಮೈಲಿಗಲ್ಲು ಸ್ಥಾಪಿಸಿದರು. ಕಿವೀಸ್ ನಾಯಕ ಕೊಹ್ಲಿಯಂತೆ 2011, 2015 ಮತ್ತು 2019ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಡಿದ್ದಾರೆ.(AFP)
(3 / 7)
ಪಾಕ್ ಮಾಜಿ ನಾಯಕ ಇಮ್ರಾನ್ ಖಾನ್, ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಲ್ಲಿ ಆಡಿದ ವಿಶ್ವದ ಮೊದಲ ಕ್ರಿಕೆಟಿಗ. ಅವರು 1979, 1983, 1987 ಮತ್ತು 1992ರ ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು.(Reuters)
(4 / 7)
ಮಾಜಿ ಆಸೀಸ್ ನಾಯಕ ರಿಕಿ ಪಾಂಟಿಂಗ್ ಕೂಡ ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಆಡಿದ್ದಾರೆ. ಅವರು 1996, 1999, 2003 ಮತ್ತು 2007ರ ವಿಶ್ವಕಪ್‌ಗಳ ಕೊನೆಯ ನಾಲ್ಕು ಪಂದ್ಯಗಳಲ್ಲಿ ಆಸ್ಟ್ರೇಲಿಯಾವನ್ನು ಪ್ರತಿನಿಧಿಸಿದ್ದಾರೆ.(PTI)
(5 / 7)
ಆಸ್ಟ್ರೇಲಿಯಾದ ದಿಗ್ಗಜ ವೇಗಿ ಗ್ಲೆನ್ ಮೆಕ್‌ಗ್ರಾತ್ ಅವರು ಪಾಂಟಿಂಗ್ ಅವರಂತೆ ನಾಲ್ಕು ಏಕದಿನ ವಿಶ್ವಕಪ್ ಸೆಮಿಫೈನಲ್‌ಗಳಲ್ಲಿ ಆಡಿದ್ದಾರೆ. ಅವರು 1996, 1999, 2003 ಮತ್ತು 2007ರ ವಿಶ್ವಕಪ್‌ಗಳ ಸೆಮೀಸ್‌ನಲ್ಲಿ ಕಾಂಗರೂಗಳ ಪರ ಕಣಕ್ಕಿಳಿದಿದ್ದರು.(Reuters)
(6 / 7)
ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ 1996, 2003, 2007 ಮತ್ತು 2011ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಆಡಿದ್ದರು.(ICC)
ಇತರ ಗ್ಯಾಲರಿಗಳು